ಜಾಕಿ ಚಾನ್, ಶಾರುಖ್ ಖಾನ್ ಜೊತೆ ಹಾಂಗ್ ಕಾಂಗ್ ನಲ್ಲಿ ದೀಪಿಕಾ ದಾಸ್!

Published : Oct 24, 2023, 05:42 PM IST

ಕಿರುತೆರೆ ನಟಿ ದೀಪಿಕಾ ದಾಸ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಜಾಕಿ ಚಾನ್, ಶಾರುಖ್ ಖಾನ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಏನಿದು ಅಂತ ಯೋಚನೆ ಮಾಡೋ ಮೊದ್ಲು ಫುಲ್ ಸ್ಟೋರಿ ಓದಿ… 

PREV
18
ಜಾಕಿ ಚಾನ್, ಶಾರುಖ್ ಖಾನ್ ಜೊತೆ ಹಾಂಗ್ ಕಾಂಗ್ ನಲ್ಲಿ ದೀಪಿಕಾ ದಾಸ್!

ಕಿರುತೆರೆಯಲ್ಲಿ ನಾಗಿಣಿಯಾಗಿ ನಂತರ ಬಿಗ್ ಬಾಸ್ ಸೀಸನ್ 8ರಲ್ಲಿ ಮಿಂಚಿದ ನಟಿ ದೀಪಿಕಾ ದಾಸ್ (Deepika Das) ಸದ್ಯ ಹಾಂಗ್ ಕಾಂಗ್ ಪ್ರವಾಸದಲ್ಲಿದ್ದಾರೆ.  ಅಲ್ಲದೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಾವು ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. 
 

28

ದೀಪಿಕಾ ದಾಸ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ (Instagram) ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಮತ್ತು ಜಗತ್ ಪ್ರಸಿದ್ಧ ನಟ ಜಾಕಿ ಚಾನ್ ಜೊತೆಯಾಗಿ ನಿಂತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಏನಪ್ಪಾ ದೀಪಿಕಾ ಇವರ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ ಅಂದ್ಕೊಂಡ್ರಾ? 
 

38

ಹಾಂಗ್ ಕಾಂಗ್ ಪ್ರವಾಸದಲ್ಲಿರುವ ದೀಪಿಕಾ ಅಲ್ಲಿನ ಜಗತ್ ಪ್ರಸಿದ್ಧ ಮೇಡಮ್ ಟುಸ್ಸಡ್ ಮ್ಯೂಸಿಯಮ್ ಗೆ ತೆರಳಿದ್ದು, ಅಲ್ಲಿರುವ ಶಾರುಖ್ ಖಾನ್ ಮತ್ತು ಜಾಕಿ ಚಾನ್ ಮೇಣದ ಪ್ರತಿಮೆ ಜೊತೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. 
 

48

ಅಷ್ಟೆ ಅಲ್ಲದೇ ಮ್ಯೂಸಿಯಂ ನಲ್ಲಿರುವ ಹಲವಾರು ನಟರ ಮೇಣದ ಪ್ರತಿಮೆ (Wax statue) ಜೊತೆಗೆ ವಿವಿಧ ಫೋಸ್ ನಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟಿಯ ವಿವಿಧ ಫೋಟೋಗಳನ್ನು ನೋಡಿದ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. 
 

58

ಹಾಂಗ್ ಕಾಂಗ್ (Hong Kong) ನಲ್ಲಿರುವ ಬಿಗ್ ಬುದ್ಧ ಮೂರ್ತಿ ಇರುವ ತಾಣಕ್ಕೂ ನಟಿ ತೆರಳಿದ್ದು, ಅಲ್ಲಿಯೂ ಹಲವಾರು ಫೋಟೋಗಳನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಹಾಂಗ್ ಕಾಂಗ್ ಬೀದಿಗಳಲ್ಲಿ ಸುತ್ತುತ್ತಾ ಎಂಜಾಯ್ ಮಾಡುತ್ತಿದ್ದಾರೆ. 
 

68

ಟ್ರಾವೆಲ್ ಪ್ರಿಯೆಯಾಗಿರುವ ದೀಪಿಕಾ ದಾಸ್ ಹೆಚ್ಚಾಗಿ ದೇಶ, ವಿದೇಶ ಸುತ್ತುತ್ತಲೇ ಇರುತ್ತಾರೆ. ಕಳೆದ ತಿಂಗಳಷ್ಟೇ ದುಬೈಗೆ ತೆರಳಿ ಎಂಜಾಯ್ ಮಾಡಿದ್ದರು. ಅಲ್ಲಿನ ಫೋಟೋಗಳನ್ನು ಸಹ ಶೇರ್ ಮಾಡಿದ್ದರು. ಇದೀಗ ಹಾಂಗ್ ಕಾಂಗ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. 
 

78

ಕನ್ನಡ ಕಿರುತೆರೆಗೆ ನಾಗಿಣಿ ಸೀರಿಯಲ್ ಮೂಲಕ ಕಾಲಿಟ್ಟ ದೀಪಿಕಾ ದಾಸ್ ಆ ಮೂಲಕ ರಾಜ್ಯಾದ್ಯಂತ ಜನಪ್ರಿಯತೆ ಪಡೆದಿದ್ದರು. ಆದಾದ ನಂತರ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಭಾಗವಹಿಸಿ, ಟಾಪ್ 5 ರಲ್ಲಿ ಸ್ಥಾನ ಪಡೆದಿದ್ದರು. 
 

88

ಬಿಗ್ ಬಾಸ್ ನಂತರ ಮತ್ತೆ ನಟಿಯನ್ನು ಸೀರಿಯಲ್ ನಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಅಂತರಪಟ ಸೀರಿಯಲ್ ನ ಒಂದೆರಡು ಎಪಿಸೋಡ್ ಗಳಲ್ಲಿ ನಟಿ ಕಾಣಿಸಿಕೊಂಡರೂ ಮತ್ತೆ ಕಿರುತೆರೆಗೆ ಬರಲೇ ಇಲ್ಲ. ಇನ್ಯಾವಾಗ ಕಿರುತೆರೆಯಲ್ಲಿ ದೀಪಿಕಾ ದಾಸ್ ನೋಡಬಹುದು ಎಂದು ಜನರು ಕಾಯುತ್ತಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories