ಕಾಮಿಡಿ ಕಿಲಾಡಿಗಳು ಮೂಲಕ ರಾಜ್ಯದಲ್ಲಿ ಅಪಾರ ಜನರ ಪ್ರೀತಿ ಪಡೆದುಕೊಂಡ ನಯನಾ ಉಮಚಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ನಾನು ಗರ್ಭಿಣಿಯಾಗಿರುವ ಬಗ್ಗೆ ನಯನಾ ಎಲ್ಲೂ ತಿಳಿಸಿಲ್ಲ. ಆದರೆ, ಆಕೆ ಮಾಡಿಸಿಕೊಂಡಿರುವ ಫೋಟೋಶೂಟ್‌ಗಳಿಂದ ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವುದು ಗೊತ್ತಾಗಿದೆ.
ಸಿನಿಮಾ, ಸೀರಿಯಲ್‌ಗಳಲ್ಲಿಯೂ ಬಿಜಿಯಾಗಿರುವ ಈ ನಟಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಪತಿ ಶರತ್ ಜೊತೆಗೆ ಅವರು ಫೋಟೋ ಶೂಟ್ ಮಾಡಿಸಿದ್ದರು.
ಆ ಬಳಿಕ ಬೊಂಬಾಟ್ ಭೋಜನ ಕಾರ್ಯಕ್ರಮಕ್ಕೆ ಬಂದಿದ್ದ ನಯನಾ, ಸಿಹಿಕಹಿ ಚಂದ್ರು ಅವರಿಂದ ಸೀಮಂತ ಶಾಸ್ತ್ರವನ್ನೂ ನೆರವೇರಿಸಿಕೊಂಡು, ಬಸರಿ ಬಯಕೆ ಈಡೇರಿಸಿಕೊಂಡಿದ್ದಾರೆ.
ಈ ಚಿತ್ರಗಳನ್ನು ನಯನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಗಣೇಶ ಹಬ್ಬದ ಸಮಯದಲ್ಲಿ ಗೌರಿ ಥರ ಕಾಣ್ತಾ ಇದ್ದೀರಿ, ಗಣೇಶನಂಥ ಮಗ ಹುಟ್ಟಲಿ ಎಂದು ಹಾರೈಸಿದ್ದಾರೆ.
ಇದರ ನಡುವೆ ಗಣೇಶ ಚತುರ್ಥಿಯಂದು, ಗೌರಿ-ಗಣೇಶ ಥೀಮ್‌ನಲ್ಲಿಯೂ ನಯನಾ ಫೋಟೋ ಶೂಟ್ ಮಾಡಿಸಿದ್ದು, ಅದರ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
ನಯನಾ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಯಲ್ಲಮ್ಮನ ತಾಯಿ ದೇವಮ್ಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಟಿ ನಯನಾ 2018ರ ಏಪ್ರಿಲ್‌ನಲ್ಲಿ ಧರ್ಮಸ್ಥಳದಲ್ಲಿ ಶರತ್ ಜತೆ ಬಾಳ ಬಂಧನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಐದು ವರ್ಷಗಳ ಬಳಿಕ ಆಕೆ ತಾಯಿಯಾಗುತ್ತಿದ್ದಾರೆ.
ಮದುವೆಯ ಬಳಿಕ ಬೆಂಗಳೂರಿನಲ್ಲಿ ಈ ಜೋಡಿ ಆರತಕ್ಷತೆ ಕಾರ್ಯಕ್ರಮವನ್ನು ಇವರು ಏರ್ಪಡಿಸಿದ್ದರು. ಸಿನಿಮಾ ಹಾಗೂ ಕಿರುತೆರೆಯ ಕಲಾವಿದರು ಸಮಾರಂಭಕ್ಕೆ ಆಗಮಿಸಿದ್ದರು.
ಇನ್ನು ನಯನಾ ಅವರ ಫೋಟೋಗಳಿಗೆ ಟೀಕಾತ್ಮಕ ಕಾಮೆಂಟ್‌ಗಳೂ ಬಂದಿವೆ. ಏನೋ ನೀವೊಬ್ರೆ ತಾಯಿಯಾಗಿರೋ ರೀತಿ ನೂರು ಫೋಟೋ ಹಾಕ್ತೀರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು, ಈಗಾಗಲೇ ಸಾಕಷ್ಟು ಬಸುರಿ ಫೋಟೋಗಳನ್ನು ಹಾಕಿಕೊಂಡಿದ್ದೀರಿ. ದೃಷ್ಟಿ ಆಗಿ ಬಿಡಬಹುದು. ಸರಿಯಾಗಿ ದೃಷ್ಟಿ ತೆಗೆಸಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ.