23 ವರ್ಷದ ಶ್ವೇತಾ ಮೂಲತಃ ಬೆಂಗಳೂರಿನವರು.
AMC ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಷಯದಲ್ಲಿ ಪದವೀಧರೆ.
2017ರಲ್ಲಿ ಕಲರ್ಸ್ ಕನ್ನಡ 'ಕಿನ್ನರಿ' ಮೂಲಕ ಕಿರುತೆರೆಗೆ ಪಾದಾರ್ಪಣೆ.
2018ರಲ್ಲಿ 'ಯುಗಳಗೀತೆ'ಯಲ್ಲಿ ರೋಷಣಿ ಪಾತ್ರದಲ್ಲಿ ಮಿಂಚಿದ್ದಾರೆ.
2019ರಲ್ಲಿ 'ಶನಿ' ಪೌರಾಣಿಕ ಧಾರಾವಾಹಿಯಲ್ಲಿ ತಂಗಿ ಯಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
2020ರಲ್ಲಿ 'ಮಧುಮಾಸಾ' ಎಂಬ ತೆಲಗು ಧಾರಾವಾಹಿಯಲ್ಲಿ ಶ್ರಾವ್ಯ ಪಾತ್ರಧಾರಿಯಾಗಿದ್ದಾರೆ.
'ಇದು ಅಂತರಂಗ ಶುದ್ಧಿ' ಸಿನಿಮಾದಲ್ಲಿ ಅಭಿಯಿಸಿದ್ದಾರೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಕಾಲೇಜು ದಿನಗಳಲ್ಲಿ ಡ್ಯಾನ್ಸ್ ಹಾಗೂ ಡ್ರಾಮ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದರು.
ಶೂಟಿಂಗ್‌ನಿಂದಾಗಿ ಒಂದು ವರ್ಷ ಕುಟುಂಬದಿಂದ ದೂರ ಉಳಿದ ಕಾರಣ, ಕ್ವಾರಂಟೈನ್‌ನ ಟೈಮಲ್ಲಿ ಫ್ಯಾಮಿಲಿ ಜೊತೆ ಕಳೆಯುತ್ತಿದ್ದಾರೆ.
ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು, ಯೋಗ ಹಾಗೂ ದಿನವೂ ಹೊಸದನ್ನು ಕಲಿತುಕೊಳ್ಳಲು ಯತ್ನಿಸುತ್ತಿದ್ದಾರಂತೆ.
Vaishnavi Chandrashekar