ಮಂಗಳೂರಿನ ತುಳು ಕುಟುಂಬದಲ್ಲಿ ಅನುಶ್ರೀ ಅವರು ಜನಿಸಿದರು.
ಅನುಶ್ರೀ ಅವರ ತಂದೆಯ ಹೆಸರು ಸಂಪತ್ ಮತ್ತು ತಾಯಿ ಶಶಿಕಲಾ ಇವರಿಗೊಬ್ಬ ಮುದ್ದಿನ ತಮ್ಮನಿದ್ದು ಅವರ ಹೆಸರು ಅಭಿಜಿತ್.
ಆರಂಭದಲ್ಲಿ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.
`ಟೆಲಿ ಅಂತ್ಯಾಕ್ಷರಿ' ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ತನ್ನ ವೃತ್ತಿ ಜೀವನ ಆರಂಭಿಸಿದರು.
ಈ ಟಿವಿ ಕನ್ನಡ ವಾಹಿನಿಯ `ಡಿಮ್ಯಾಂಡಪ್ಪೋ ಡಿಮ್ಯಾಂಡು' ಕಾರ್ಯಕ್ರಮದ ಮೂಲಕ ಮನೆಮಾತಾದರು.
ಕಾಮಿಡಿ ಕಿಲಾಡಿಗಳು, ಕಾಮಿಡಿ ಕಪ್, ಸ್ಟಾರ್ ಲೈವ್, ನಮಸ್ತೇ ಕಸ್ತೂರಿ ಹೀಗೆ ಅನೇಕ ಹಿಟ್ ಕಾರ್ಯಕ್ರಮಗಳ ನಿರೂಪಕಿಯಾಗಿದ್ದರು.
ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ್ದರು.
ಸದ್ಯ ಜೀ ಕನ್ನಡ ವಾಹಿನಿಯ ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕಮಗಳ ನಿರೂಪಣಾ ಜವಾಬ್ಧಾರಿಯನ್ನು ಹೊತ್ತಿದ್ದಾರೆ.
ಅನುಶ್ರೀ ಅವರಿಗೆ 'ಮುರಳಿ ಮೀಟ್ಸ್ ಮೀರಾ'ಕನ್ನಡ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ,ಬೆಂಕಿಪಟ್ಣ ಕನ್ನಡ ಚಿತ್ರದಲ್ಲಿನ ಅಭಿನಯಕ್ಕೆ ಉತಮ ನಾಯಕಿ ಪ್ರಶಸ್ತಿ,ಜೀ ಕುಟುಂಬ ಪ್ರಸಿದ್ಧ ನಿರೂಪಕಿ ಪ್ರಶಸ್ತಿ ಹಾಗು ಕೆಂಪೇಗೌಡ ಪ್ರಶಸ್ತಿಗಳಿಸಿದ್ದಾರೆ.
ಅನುಶ್ರೀ ಕನ್ನಡ ಸಿನಿರಂಗದಲ್ಲಿ ಕಿರುತೆರೆ ನಿರೂಪಕಿಯಾಗಿ ಮತ್ತು ಚಿತ್ರನಟಿಯಾಗಿ ಸಕ್ರಿಯರಾಗಿದ್ದಾರೆ.
ಬೆಂಕಿಪಟ್ಣ ಮತ್ತು ಉಪ್ಪು ಹುಳಿ ಖಾರ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಅನುಶ್ರೀ ಒಬ್ಬ ಮೌಲ್ಯಾಧಾರಿತ ಅಭಿನೇತ್ರಿಯಾಗುವ ಆಶಯ ಹೊಂದಿದ್ದಾರೆ.
ಅನುಶ್ರೀ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.
ಸದ್ಯ ಕನ್ನಡ ಕಿರುತೆರೆಯ ನಂಬರ್ 1 ನಿರೂಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜೀವನದಲ್ಲಿ ಎದುರಾದ ಅದೆಷ್ಟೋ ಕಷ್ಟಗಳನ್ನು ಏಕಾಂಗಿಯಾಗಿ ಎದುರಿಸುತ್ತಾ, ಈ ಹಂತಕ್ಕೆ ಬೆಳೆದಿರುವುದು ನಿಜಕ್ಕೂ ಇತರರಿಗೆ ಮಾದರಿಯೇ ಸರಿ .