ನಾಳೆ ಬಿಗ್‌ಬಾಸ್‌ 8 ಸೆಕೆಂಡ್‌ ಇನ್ನಿಂಗ್ಸ್‌ ಶುರು!

First Published | Jun 22, 2021, 3:29 PM IST

ಲಾಕ್‌ಡೌನ್‌ ಕಾರಣಕ್ಕೆ ಅರ್ಧದಲ್ಲಿ ಮೊಟಕುಗೊಂಡಿದ್ದ ಬಿಗ್‌ ಬಾಸ್‌ ಸೀಸನ್‌ 8ನೇ ಆವೃತ್ತಿ ಬುಧವಾರ (ಜೂ.23) ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಮತ್ತೆ ಆರಂಭವಾಗಲಿದೆ. 

ಜೂ.24 ರಿಂದ ರಾತ್ರಿ 9.30ಕ್ಕೆ ಬಿಗ್‌ ಬಾಸ್‌ ಪ್ರಸಾರವಾಗಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೊನೆಯವರೆಗೂ ಮನೆಯಲ್ಲಿ ಉಳಿದುಕೊಂಡಿದ್ದ 12 ಮಂದಿ ಸ್ಪರ್ಧಿಗಳು ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ಮತ್ತೆ ಬಿಗ್‌ ಬಾಸ್‌ ಮನೆ ಪ್ರವೇಶಿಸಲಿದ್ದಾರೆ. ಇದರಲ್ಲಿ ಸುದೀಪ್‌ ಭಾಗವಹಿಸುವ ನಿರೀಕ್ಷೆ ಇದೆ.
ಅನಾರೋಗ್ಯದ ಕಾರಣ ಮೊದಲ ಇನ್ನಿಂಗ್ಸ್‌ನ ಕೊನೆಯ ವೀಕೆಂಡ್‌ ಶೋಗಳನ್ನು ಮಿಸ್‌ ಮಾಡಿಕೊಂಡಿದ್ದ ಸುದೀಪ್‌ ಈ ಬಾರಿ ವೀಕೆಂಡ್‌ಗಳಲ್ಲಿ ಪಂಚಾಯ್ತಿ ನಡೆಸಲಿದ್ದಾರೆ.
Tap to resize

ಈಗಾಗಲೇ 12 ಮಂದಿ ಸ್ಪರ್ಧಿಗಳು ಹೋಟೆಲ್‌ನಲ್ಲಿ ಕ್ವಾರಂಟೈನ್‌ ಆಗಿದ್ದು, ಮನೆ ಪ್ರವೇಶಿಸುವ ಘಳಿಗೆಯನ್ನು ಎದುರು ನೋಡುತ್ತಿದ್ದಾರೆ.
ಬೈಕ್‌ ರೇಸರ್‌ ಅರವಿಂದ್‌ ಕೆಪಿ, ನಟಿಯರಾದ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ವೈಷ್ಣವಿ ಗೌಡ, ದಿವ್ಯಾ ಉರುಡುಗ, ದಿವ್ಯಾ ಸುರೇಶ್‌, ಪ್ರಿಯಾಂಕಾ ತಿಮ್ಮೇಶ್‌, ಮಜಾ ಭಾರತ ಖ್ಯಾತಿ ಮಂಜು ಪಾವಗಡ, ರಘು ಗೌಡ, ಶಮಂತ್‌ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್‌, ಪ್ರಶಾಂತ್‌ ಸಂಬರಗಿ ಮನೆ ಪ್ರವೇಶಿಸಲಿರುವ ಸೆಲೆಬ್ರಿಟಿಗಳು.
'ಇಷ್ಟುವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್‌ಬಾಸ್‌ ಶೋದಲ್ಲೂ ಎರಡನೇ ಇನ್ನಿಂಗ್ಸ್‌ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ'
'ಈ ಬಾರಿ ಕನ್ನಡದಲ್ಲಿ 12 ಮಂದಿ ಕಂಟೆಸ್ಟೆಂಟ್‌ಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ' ಪರಮೇಶ್ವರ ಗುಂಡ್ಕಲ್‌, ಬ್ಯುಸಿನೆಸ್‌ ಹೆಡ್‌, ಕಲರ್ಸ್‌ ಕನ್ನಡ.

Latest Videos

click me!