ಬಿಗ್ ಬಾಸ್ ಮಾತುಕತೆ,  ಅತಿದೊಡ್ಡ ರಿಯಾಲಿಟಿ ಶೋ ಯಾವಾಗಿನಿಂದ?

First Published | Nov 24, 2020, 3:45 PM IST

ಬೆಂಗಳೂರು(ನ.  24)  ಕೊರೋನಾ ಕಾರಣಕ್ಕೆ ಈ ಬಾರಿ ಕನ್ನಡದ ಬಿಗ್ ಬಾಸ್ ಸಹ ಮುಂದಕ್ಕೆ ಹೋಗಿತ್ತು. ಆದರೆ ಸಿದ್ಧತೆಗಳು ಮಾತ್ರ ಸದ್ದಿಲ್ಲದೆ ನಡೆಯುತ್ತಿದ್ದು ವೇದಿಕೆ ಸಿದ್ಧವಾಗಿದೆ.  ಕಲರ್ಸ್ ಕನ್ನಡದ ಬಿಜಿನಸ್ ಹೆಡ್  ಪರಮೇಶ್ವರ ಗುಂಡ್ಕಲ್ ಕಿಚ್ಚ ಸುದೀಪ್ ಜತೆ ಸಂವಾದ ನಡೆಸುತ್ತಿರುವ ಪೋಟೋ ಹಂಚಿಕೊಂಡಿದ್ದು ಸದ್ಯವೆ ಬಿಗ್ ಬಾಸ್ ಮನೆ ಪ್ರವೇಶದ ಸೂಚನೆ ನೀಡಿದ್ದಾರೆ.

ಈಗಾಗಲೇ ತೆಲುಗು, ತಮಿಳು, ಹಿಂದಿ 'ಬಿಗ್ ಬಾಸ್' ಶೋಗಳು ಆರಂಭಗೊಂಡಿದ್ದು ಜನರನ್ನು ರಂಜಿಸುತ್ತ ಸಾಗುತ್ತಿವೆ.
ಬಿಗ್ ಬಾಸ್ ಕನ್ನಡ ಸೀಸನ್ 8ರ ಆರಂಭಕ್ಕೆ ಭರ್ಜರಿ ತಯಾರಿ ಶುರುವಾಗಿದ್ದು ಈ ಸಾರಿ ಯಾರೆಲ್ಲ ಮನೆಯೊಳಗೆ ಇರಲಿದ್ದಾರೆ ಎಂಬ ಕುತೂಹಲ ಇದೆ.
Tap to resize

'ಬೆಂಗಳೂರಿನ ಬಿಡದಿ ಬಳಿ ಇರುವ ಇನ್ನೋವೆಟಿವ್ ಫಿಲ್ಮ್‌ ಸಿಟಿಯಲ್ಲಿ ತಾಂತ್ರಿಕ ಕೆಲಸಗಳು ನಡೆಯುತ್ತಿದ್ದು ಈ ಬಾರಿ ಅಚ್ಚರಿಯ ಮನೆ ನಿರ್ಮಾಣ ಮಾಡಲಾಗುತ್ತಿದೆ.
2021ರ ಆರಂಭದಲ್ಲಿ 'ಬಿಗ್ ಬಾಸ್ ಕನ್ನಡ ಸೀಸನ್ 8' ಶುರುವಾಗುವುದು ಖಚಿತ ಎಂಬ ಮಾಹಿತಿ ಇದೆ.
'ಕಿಚ್ಚ' ಸುದೀಪ್ ಅವರೇ ಶೋವನ್ನು ನಡೆಸಿಕೊಡಲಿದ್ದಾರೆ. ಈಗಾಗಲೇ ಹಿಂದಿಯಲ್ಲಿ ಸಲ್ಮಾನ್‌ ಖಾನ್, ತೆಲುಗಿನಲ್ಲಿ ನಾಗಾರ್ಜುನ, ತಮಿಳಿನಲ್ಲಿ ಕಮಲ್ ಹಾಸನ್‌ ಶೋ ಮುಂದೆ ನಡೆಸುತ್ತಿದ್ದಾರೆ.
ಸೆಲೆಬ್ರಿಟಿಗಳು ಮಾತ್ರ ಇರುತ್ತಾರೆಯೋ ಅಥವಾ ಸೆಲೆಬ್ರಿಟಿಗಳ ಜತೆ ಕಾಮನ್ ಮ್ಯಾನ್ ಗಳು ಮನೆ ಪ್ರವೇಶ ಮಾಡಲಿದ್ದಾರೆಯೋ ಕಾದು ನೋಡಬೇಕು

Latest Videos

click me!