ಕೊನೆಗೂ ಯೂಟ್ಯೂಬ್‌ ದುಡಿಮೆ ಎಷ್ಟು ಎಂದು ಬಾಯಿಬಿಟ್ಟ ಧನರಾಜ್‌; ನೆಟ್ಟಿಗರು ಶಾಕ್

Published : Jan 24, 2025, 02:59 PM IST

ಸೋಷಿಯಲ್ ಮಿಡಿಯಾ ದುಡಿಮೆ ಎಷ್ಟಿದೆ ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿದ್ದ ಜನರಿಗೆ ಉತ್ತರ ಕೊಟ್ಟ ಧನರಾಜ್.

PREV
16
ಕೊನೆಗೂ ಯೂಟ್ಯೂಬ್‌ ದುಡಿಮೆ ಎಷ್ಟು ಎಂದು ಬಾಯಿಬಿಟ್ಟ ಧನರಾಜ್‌; ನೆಟ್ಟಿಗರು ಶಾಕ್

ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುವ ಮುನ್ನ ಧನರಾಜ್ ಖಾಸಗಿ ಟಿವಿ ಕಾಮಿಡಿ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಿದ್ದರು. ಅಲ್ಲಿಂದ ಅವರ ಜನಪ್ರಿಯತೆ ಹೆಚ್ಚಾಗಿತ್ತು. 

26

ಜನರು ಧನರಾಜ್‌ರನ್ನು ಗುರುತಿಸುವುದೇ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಿಂದ ಇಲ್ಲವಾದರೆ ಪತ್ನಿ ಮತ್ತು ಆಪ್ತರ ಜೊತೆ ಸೇರಿಕೊಂಡು ಮಾಡುವ ರೀಲ್ಸ್‌ಗಳಿಂದ.

36

'ವಾಹಿನಿಯಲ್ಲಿ ಕೆಲಸ ಮಾಡುವ ಮುನ್ನ ನಾನು ಸೀರಿಯಲ್‌ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೆ. ಕಡಿಮೆ ಪೇಮೆಂಟ್‌ ಇದ್ದರೂ ಟೆನ್ಶನ್ ಇರಲಿಲ್ಲ. ಎಲ್ಲೂ ಕಷ್ಟ ಅಂತ ಅನಿಸುತ್ತಿರಲಿಲ್ಲ' ಎಂದು ಖಾಸಗಿ ವೆಬ್ ಸಂದರ್ಶನದಲ್ಲಿ ಧನರಾಜ್ ಮಾತನಾಡಿದ್ದಾರೆ.

46

'ನಾನು 20 ಸಾವಿರ ರೂ.ಗೆ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದೆ ಅಷ್ಟರಲ್ಲಿ ಲಾಕ್‌ಡೌನ್‌ ಬಂತು. ಫ್ಯಾಮಿಲಿ ಜೊತೆ ವಿಡಿಯೋಗಳನ್ನು ಮಾಡುತ್ತಿದ್ದೆ. ಜನ ಕೈ ಹಿಡಿದರು. ಆಗ ವೀಕೆಂಡ್‌ ವೇಳೆ ಬೈ ಮತ್ತು ಟ್ಯಾಕ್ಸಿ ಓಡಿಸುತ್ತಿದ್ದೆ' 

56

'ಸೋಷಿಯಲ್ ಮಿಡಿಯಾ ನನ್ನ ಕೈ ಹಿಡಿದಿದೆ. ವಿಡಿಯೋಸ್ ಹಾಕಿದರೆ ಜಾಸ್ತಿ ದುಡ್ಡು ಬರುತ್ತೆ ಅಂತ ಗೊತ್ತಿದ್ದರೂ ನಾನು ಕ್ವಾಲಿಟಿಗೆ ಗಮನ ಕೊಟ್ಟು ಒಂದು ವಿಡಿಯೋಗೆ ಜಾಸ್ತಿ ಟೈ ತೆಗೆದುಕೊಳ್ಳುತ್ತಿದೆ. ಹೀಗಾಗಿ ಹಣ ಬರುವುದು ಕಡಿಮೆ ಆಯ್ತು. ಇತ್ತೀಚಿಗೆ ತೀರಾ ಕಡಿಮೆ ಆಗಿದೆ'

66

'ಬಿಗ್ ವಾಸ್ ಮುಗಿದಿದೆ. ಜನರ ಪ್ರೀತಿ ಮತ್ತು ಆಶೀರ್ವಾದ ಜಾಸ್ತಿ ಸಿಕ್ಕಿದೆ. ನನಗೊಂದು ಯೋಚನೆ ಇದೆ. ಅದಿನ್ನೂ ಪಕ್ಕಾ ಅಗಬೇಕು. ಒಟ್ಟಿನಲ್ಲಿ ಅದು ಸೂಪರ್ ಸ್ಪೆಷಲ್ ಆಗಿರುತ್ತದೆ. ಅನೌನ್ಸ್‌ಮೆಂಟ್ ಮಾಡಬೇಕು' ಎಂದಿದ್ದಾರೆ ಧನರಾಜ್. 

click me!

Recommended Stories