ಟಿಕ್‌ಟಾಕ್, ಮ್ಯೂಸಿಕಲಿ ಮೂಲಕ ಜನಪ್ರಿಯತೆ ಪಡೆದ ಭವ್ಯಾ ಗೌಡ ಇನ್‌ಸ್ಟಾಗ್ರಾಂಗೆ ಕಾಲಿಟ್ಟ ಮೇಲೆ ಸೀರಿಯಲ್‌ನಲ್ಲಿ ನಟಿಸುವ ಆಫರ್ ಪಡೆಯುತ್ತಾರೆ. ಅದೇ ಗೀತಾ ಸೀರಿಯಲ್.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಭವ್ಯಾ ಗೌಡ ಪಕ್ಕಾ ಗೌಡ್ರು ಹುಡುಗಿ. ಪಟಪಟ ಅಂತ ಕನ್ನಡ ಮಾತನಾಡುತ್ತಾ ರೀಲ್ಸ್ ಮಾಡುತ್ತಿದ್ದ ಕಾರಣ ಸೀರಿಯಲ್‌ನಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡರು.
ಸುಮಾರು ಎರಡು ಮೂರು ವರ್ಷಗಳ ಕಾಲ ಸೀರಿಯಲ್‌ನಲ್ಲಿ ಮಿಂಚಿದ ಭವ್ಯಾ ಗೌಡ ಬ್ರೇಕ್ ತೆಗೆದುಕೊಂಡು ಫ್ರೀ ಆಗಿದ್ದರು. ಆಗ ಹುಡುಕಿಕೊಂಡ ಬಂದ ಆಫರ್ ಬಿಗ್ ಬಾಸ್ ಸೀಸನ್ 11.
ಬಿಗ್ ಬಾಸ್ ಸೀಸನ್ 11ಕ್ಕೆ ಭವ್ಯಾ ಗೌಡ ಕಾಲಿಟ್ಟ ಮೇಲೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದಾರೆ. ಸಿಕ್ಕಾಪಟ್ಟೆ ಫ್ಯಾನ್ ಪೇಜ್‌ಗಳು ಕ್ರಿಯೇಟ್ ಆಗಿದೆ. ಅಲ್ಲಿ ಭವ್ಯಾ ಹಳೆ ಫೋಟೋ ವೈರಲ್ ಆಗುತ್ತಿದೆ.
ಸ್ಕೂಲ್ ಮತ್ತು ಕಾಲೇಜ್‌ಗೆ ಹೋಗುವ ದಿನಗಳಲ್ಲಿ ಭವ್ಯಾ ಗೌಡ ಹೇಗಿದ್ದರು ಎಂದು ಫ್ಯಾನ್ಸ್ ಫೋಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಡಿಫರೆಂಟ್ ಹೇರ್‌ಸ್ಟೈಲ್ ಹಾಗೂ ಡ್ರೆಸ್ಸಿಂಗ್ ಸ್ಟೈಲ್ ಎನ್ನಬಹುದು.
ಅಯ್ಯೋ ಭವ್ಯಾ ನೋಡಲು ಚೆನ್ನಾಗಿಲ್ಲ, ಇದೇನು ಹೇರ್‌ಸ್ಟೈಲ್ ಇಷ್ಟೋಂದು ಕರಾಬ್ ಆಗಿದೆ, ಸೀರಿಯಲ್‌ಗೆ ಬಂದ ಮೇಲೆ ಸ್ವಲ್ಪ ಚೆನ್ನಾಗಿ ಆಗಿರುವುದು ಅನ್ಸುತ್ತೆ ಎಂದು ಹಲವು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.
ಭವ್ಯಾ ಗೌಡ ಮಾತ್ರವಲ್ಲ ಅವರ ಅಕ್ಕ ದಿವ್ಯಾ ಗೌಡ ಕೂಡ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್. ಬಿಗ್ ಬಾಸ್ ಮನೆಗೆ ಬಂದು ಹೋದ ಮೇಲೆ ಅವರ ಹಳೆ ಫೋಟೋವನ್ನು ಕೂಡ ವೈರಲ್ ಮಾಡಲು ಶುರು ಮಾಡಿದ್ದಾರೆ ನೆಟ್ಟಿಗರು.