26ರ ಬಿಗ್ ಬಾಸ್ ಭವ್ಯಾ ಗೌಡ ಒಂದು ಸೀರಿಯಲ್ ಒಂದು ಶೋಯಿಂದ ಮಾಡಿರೋ ಆಸ್ತಿ ಎಷ್ಟು?

Published : Feb 26, 2025, 08:18 AM ISTUpdated : Feb 26, 2025, 08:56 AM IST

ಹುಟ್ಟುಹಬ್ಬ ಸಂಭ್ರಮದಲ್ಲಿ ಭವ್ಯಾ ಗೌಡ. ಅಕ್-ತಂಗಿ ದುಡಿದು ದುಡಿದು ಮಾಡಿರೋ ಆಸ್ತಿ ಅಷ್ಟಿಷ್ಟಲ್ಲ....

PREV
18
26ರ ಬಿಗ್ ಬಾಸ್ ಭವ್ಯಾ ಗೌಡ ಒಂದು ಸೀರಿಯಲ್ ಒಂದು ಶೋಯಿಂದ ಮಾಡಿರೋ ಆಸ್ತಿ ಎಷ್ಟು?

ಗೀತಾ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿರುವ ಭವ್ಯಾ ಗೌಡ ಇಂದು 26ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 

28

ಮಾಡಿದ್ದು ಒಂದೇ ಸೀರಿಯಲ್ ಆದರೂ ಸೋಷಿಯಲ್ ಮೀಡಿಯಾದಿಂದ ಭವ್ಯಾ ಗೌಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಬಿಟ್ಟರು. ಇದಕ್ಕೆ ಸಾಥ್ ಕೊಟ್ಟಿದ್ದು ಒಂದೇ ರಿಯಾಲಿಟಿ ಶೋ.

38

ಬಿಗ್ ಬಾಸ್ ಸೀಸನ್ 11ರ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಭವ್ಯಾ ಗೌಡ ಟಾಪ್‌ ನಾಲ್ಕನೇ ಸ್ಥಾನ ಗಳಿಸಿದ್ದರು. ಈ ಶೋಯಿಂದ ಭವ್ಯಾ ಫ್ಯಾನ್ ಪೇಜ್‌ಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. 

48

ಕೇವಲ ಒಂದು ಶೋ ಮತ್ತು ಒಂದು ಸೀರಿಯಲ್‌ನಲ್ಲಿ ಕಾಣಿಸಿಕೊಂಡಿರುವ ಭವ್ಯಾ ಗೌಡ ಎಷ್ಟು ದುಡಿಯುತ್ತಾರೆ? ಏನ್ ಆಸ್ತಿ ಸಂಪಾದನೆ ಮಾಡಿದ್ದಾರೆ? ಮನೆಗೆ ಏನ್ ಮಾಡ್ತಾರೆ ಎಂದು ಫ್ಯಾನ್ಸ್ ಚರ್ಚಿಸುತ್ತಿದ್ದಾರೆ. 

58

ಗೀತಾ ಸೀರಿಯಲ್‌ನಲ್ಲಿ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಭವ್ಯಾ ಗೌಡ ಅಭಿನಯಿಸಿದ್ದರು. ಇಲ್ಲಿ ವಾರ ಪೇಮೆಂಟ್ ತಿಂಗಳು ಪೇಮೆಂಟ್ ಅಂದುಕೊಂಡರೂ ಕನಿಷ್ಠ 60 ಸಾವಿರ ಇರಲಿ ಅಂತಿದ್ದಾರೆ ನೆಟ್ಟಿಗರು. 

68

ಇನ್ನು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲು ಕನಿಷ್ಠ ಅಂದ್ರೂ 8-10 ಲಕ್ಷ ಹಣ ಪಡೆದಿದ್ದಾರೆ. ಇದರ ಜೊತೆಯಲ್ಲಿ ಕಾರ್ಯಕ್ರಮದಿಂದ ಕೆಲವೊಂದು ಗಿಫ್ಟ್‌ಗಳು ಬಂದಿದೆ. 

78

ಇಷ್ಟೇ ಅಲ್ಲ ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ಸಾಕಷ್ಟು ಬ್ರ್ಯಾಂಡ್‌ಗಳ ಪ್ರಮೋಷ್ ಮಾಡುತ್ತಾರೆ. ಹಾಗೂ ಹಲವು ಸ್ಪಾನ್ಸರ್‌ಗಳು ಫ್ರೀ ಆಗಿ ಬಟ್ಟೆ ಕಳುಹಿಸುತ್ತಾರೆ.

88

ಸ್ವಂತ ಮನೆ ಕಟ್ಟ ಬೇಕು, ಅಕ್ಕನ ಮದುವೆ ಮಾಡಬೇಕು ಹಾಗೂ ತಂದೆ ಕಿವಿ ಆಪರೇಷನ್ ಮಾಡಿಸಬೇಕು ಎಂದು ಹಲವು ಸಲ ಬಿಗ್ ಬಾಸ್ ಶೋನಲ್ಲಿ ಇದ್ದಾಗ ಭವ್ಯಾ ಗೌಡ ಹೇಳಿಕೊಳ್ಳುತ್ತಿದ್ದರು. 

Read more Photos on
click me!

Recommended Stories