ಒಂದು ವರ್ಷ ಪೂರೈಸಿದ ಭಾಗ್ಯಲಕ್ಷ್ಮಿ, ಕೇಕ್ ಕತ್ತರಿಸಿ ಸಂಭ್ರಮಿಸಿದ ಸೀರಿಯರ್ ತಂಡ

First Published | Oct 11, 2023, 5:00 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ಇದೀಗ ಒಂದು ವರ್ಷ ಪೂರೈಸಿದ್ದು, ಸೀರಿಯಲ್ ತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದೆ. 
 

ಭರ್ಜರಿ ಮನರಂಜನೆ ಕೊಡುವ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಪಾರ ಜನ ಮನ್ನಣೆ ಗಳಿಸಿದ ಸೀರಿಯಲ್ ಭಾಗ್ಯಲಕ್ಷ್ಮೀ (Bhagyalakshmi). ಇದೀಗ ಪ್ರಸಾರವಾಗಿ ಒಂದು ವರ್ಷ ಪೂರ್ಣಗೊಳಿಸಿದೆ. 
 

ಒಂದು ವರ್ಷ ಪೂರ್ಣಗೊಳಿಸಿದ ಸಂಭ್ರಮದಲ್ಲಿರುವ ಭಾಗ್ಯಲಕ್ಷ್ಮಿ ಸೀರಿಯಲ್ ತಂಡ ಆ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ, ನಟರು, ನಿರ್ದೇಶಕರು, ಟೆಕ್ನಿಶಿಯನ್ ಎಲ್ಲರೂ ಸೇರಿ ಸಂಭ್ರಮಿಸಿದ್ದಾರೆ. 
 

Tap to resize

ಅಕ್ಕ ತಂಗಿಯ ಕಥೆಯಾಗಿ ಆರಂಭವಾದ ಭಾಗ್ಯಲಕ್ಷ್ಮಿ ಸೀರಿಯಲ್, ಕೊನೆಗೆ ಎರಡು ಭಾಗವಾಗಿ, ಅಕ್ಕ ತಂಗಿಯರ ಕಥೆ ಬೇರೆ ಬೇರೆಯಾಗಿ ಮುಂದುವರೆಯಿತು. ಆದಾರೂ ಎಲ್ಲೂ ಸಹ ಕಥೆಯ ಹಿಡಿತ ಬಿಟ್ಟು ಕೊಡದೇ, ಜನಮನ ಗೆಲ್ಲುತ್ತಾ ಅದ್ಭುತವಾಗಿ ಸಾಗುತ್ತಾ ಬಂದಿದೆ ಭಾಗ್ಯಲಕ್ಷ್ಮಿ. 
 

ಅಮ್ಮನ ಮಾತಿಗೆ ಎಂದಿಗೂ ಎದುರಾಡದ ಮಗ, ಆಕೆಯ ಮಾತಿಗೆ ಕಟ್ಟು ಬಿದ್ದು, ಇಷ್ಟವಿಲ್ಲದೇ ಹೆಚ್ಚು ವಿದ್ಯಾಭ್ಯಾಸ ಇಲ್ಲದ ಹುಡುಗಿಯನ್ನು ಮದುವೆಯಾಗಿ, ನಂತರ ಆಕೆಯನ್ನು ಪ್ರೀತಿಸದೇ ಹಂಗಿಸುವ ಗಂಡ. 
 

ಇಬ್ಬರು ಮಕ್ಕಳ ತಂದೆಯಾಗಿದ್ದರೂ, ಹೆಂಡತಿ ಮೇಲೆ ಆಸಕ್ತಿ ಇಲ್ಲದೇ, ಇನ್ನೊಬ್ಬ ಹುಡುಗಿಯ ಪ್ರೀತಿಯ ಬಲೆಯಲ್ಲಿ ಬಿದ್ದು, ಹೆಂಡತಿಗೆ ಜೊತೆಗೆ ಮನೆಯವರಿಗೆ ಮೋಸ ಮಾಡುವ ಕಥೆಯನ್ನು ಇದು ಹೊಂದಿದೆ. 
 

ಈ ಸೀರಿಯಲ್ ನ ಮುಖ್ಯ ಆಕರ್ಷಣೆ, ಅತ್ತೆ - ಸೊಸೆಯರ ನಡುವಿನ ಪ್ರೀತಿ. ಸೊಸೆಯೆಂದರೆ ಅಚ್ಚುಕಟ್ಟಾಗಿ ಮನೆಯನ್ನು ನೋಡಿಕೊಳ್ಳುವವಳು ಆಗಿರಬೇಕು ಎಂದು ಬಯಸುವ ಅತ್ತೆ, ಜೊತೆ ಸೊಸೆಗೆ ಏನೇ ಕಷ್ಟ ಬಂದರೂ ಆಕೆಯ ಬೆನ್ನೆಲುಬಾಗಿ ನಿಲ್ಲುವ, ಕೇವಲ 9ನೇ ಕ್ಲಾಸ್ ಕಲಿತ ಸೊಸೆಯನ್ನು ಮತ್ತೆ ಓದಿಸುವ ಮಾದರಿ ಅತ್ತೆ ಸೊಸೆಯ ಕಥೆಯೂ ಇದಾಗಿದೆ. 
 

ಸದ್ಯ ಸೀರಿಯಲ್‌ನಲ್ಲಿ ತಾಂಡವ್‌ಗೆ ತನ್ನ ತಪ್ಪಿನ ಅರಿವಾಗಿ ಶ್ರೇಷ್ಠಾಳನ್ನು ದೂರ ಮಾಡಿದ್ದಾನೆ. ಭಾವನ ಪ್ರೀತಿಯ ಗುಟ್ಟು ನಾದಿನಿ ಪೂಜಾಳ ಮೊಬೈಲಿನಲ್ಲಿ ಸೆರೆಯಾಗಿದೆ. ಕುಸುಮಾಳಿಗೆ ಮಗನ ಮೇಲೆ ಕೋಪವೂ ಹೆಚ್ಚಾಗಿದೆ. ಮುಂದೆ ಏನಾಗುತ್ತೆ ಅನ್ನೋದನ್ನು ಕಾಡು ನೋಡಬೇಕು. 
 

Latest Videos

click me!