ಸೋಲು‌ ಕನಸಲ್ಲಿ‌ ಇರಲಿ, ಗೆಲುವು ಮನಸಲ್ಲಿ‌ ಇರಲಿ ಎನ್ನುತ್ತಾ ಹೂನಗು ಚೆಲ್ಲಿದ ನಿರೂಪಕಿ‌ ಅನುಶ್ರೀ

First Published | Oct 27, 2024, 5:36 PM IST

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುಂದರವಾದ ಫೋಟೊಗಳನ್ನು ಶೇರ್ ಮಾಡಿ, ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಗಳ ಸುರಿಮಳೆ ಸುರಿಸಿದ್ದಾರೆ. 
 

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅಂದ್ರೆ ಅನುಶ್ರೀ (Anchor Anushree) ಅನ್ನೋದು ಗೊತ್ತೆ ಇದೆ. ತಮ್ಮ ಮುತ್ತಿನಂತಹ ಮಾತುಗಳಿಂದ ಜನರನ್ನ ಸೆಳೆಯೋ ಕಲೆ ಅನುಶ್ರೀಗೆ ಗೊತ್ತು. ಹಾಗಾಗಿಯೇ ಇಂದಿಗೂ ಎಲ್ಲಾ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೂ ನಿರೂಪಕಿಯಾಗಿ ಅನುಶ್ರಿಯೇ ಬೇಕು ಎನ್ನುವಂತಾಗಿದೆ.
 

ಇದೀಗ ಅನುಶ್ರೀ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೊಗಳನ್ನು ಅಪ್ ಲೋಡ್ ಮಾಡಿದ್ದು, ಅದರ ಜೊತೆಗೆ ಅಷ್ಟೇ ಸುಂದರವಾದ ಸಾಲುಗಳನ್ನೂ ಬರೆದಿದ್ದಾರೆ.  ಅನುಶ್ರೀ ಫೊಟೊಗಳಿಗೆ ಸಾವಿರಾರು ಲೈಕ್ಸ್ ಕಾಮೆಂಟ್ ಗಳು ಬಂದಿವೆ. 
 

Tap to resize

ನೇರಳೆ ಬಣ್ಣದ ಲಂಗ ದಾವಣಿ ಧರಿಸಿ, ಟ್ರೆಡಿಶನಲ್ ಅವತಾರದಲ್ಲಿ ಕಾಣಿಸಿಕೊಂಡಿರುವ ಅನುಶ್ರೀ, ಕೈ ತುಂಬಾ ಬಳೆ, ನೆಕ್ಲೆಸ್, ಮುಂದಾಲೆ ಧರಿಸಿದ್ದಾರೆ. ಈ ಫೋಟೊಗಳ ಜೊತೆಗೆ ಸೋಲು ಕನಸಲ್ಲಿ ಇರಲಿ, ಗೆಲುವು ಮನಸಲ್ಲಿ ಇರಲಿ , ನಗು ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ. 
 

ಅನುಶ್ರೀಯನ್ನು ನೋಡಿ ಅಭಿಮಾನಿಗಳು ಚಂದನವನದ ಬೊಂಬೆ, ಏಂಜಲ್, ಎವರ್ ಗ್ರೀನ್ ಬ್ಯೂಟಿ, ದೃಷ್ಟಿ ಆಗಬಹುದು ನಿಮಗೆ, ಈಗಲೇ ದೃಷ್ಟಿ ತೆಗೆಸಿ, ಕರ್ನಾಟಕದ ಕ್ರಶ್ ನೀವು, ನಿಮ್ಮ ನಗುವಿಗೆ ಬಿದ್ದೋದೆವು ನಾವು ಅಂತಾನೂ ಹೇಳಿದ್ದಾರೆ. ಜೊತೆಗೆ ಒಂದಷ್ಟು ಜನ ಯಾವಾಗ್ಲೂ ಕೇಳುವಂತೆ ಅನುಶ್ರೀ ಅಕ್ಕ ಮದ್ವೆ ಯಾವಾಗ ಅಂತಾನೂ ಕೇಳಿದ್ದಾರೆ. 
 

ಮದ್ವೆ ಬಗ್ಗೆ ಹೇಳೋದಾದ್ರೂ ಕಳೆದ ಹಲವಾರು ವರ್ಷಗಳಿಂದ ಅನುಶ್ರೀಯವರಿಗೆ ಜನರು ಕೇಳುತ್ತಿರುವ ಪ್ರಶ್ನೆ ಅಂದ್ರೆ ಅದು ನಿಮ್ಮ ಮದ್ವೆ ಯಾವಾಗ ಅಂತಾನೆ. ನಟಿ ಅನುಶ್ರೀ ಇಲ್ಲಿವರೆಗೆ ಅದಕ್ಕೆ ಸರಿಯಾಗಿ ಉತ್ತರಿಸಿಯೇ ಇರಲಿಲ್ಲ. ಆದರೆ ಇದೀಗ ಝೀ ಕುಟುಂಬ (Zee Kutumba) ವೇದಿಕೆಯಲ್ಲಿ ಮುಂದಿನ ವರ್ಷ ಮದುವೆಯಾಗೋದಾಗಿ ತಿಳಿಸಿದ್ದಾರೆ.  ಎಲ್ಲಾ ಹುಡುಗಿಯರಂತೆ ನನಗೂ ಮದುವೆಯಾಗುವ ಆಸೆ ಇದೆ, ಆದ್ರೆ ಎಲ್ಲಾದಕ್ಕೂ ಸಮಯ ಕೂಡಿ ಬರಬೇಕು ಎಂದಿದ್ದಾರೆ. ಅಂದ್ರೆ ಅನುಶ್ರೀ ಯವರಿಗೆ ಹುಡುಗಿ ಫಿಕ್ಸ್ ಆಗಿದ್ದಾಗಿದೆ, ಇನ್ನು ಮದ್ವೆ ಒಂದೇ ಬಾಕಿ ಅನ್ನೋದು ಗ್ಯಾರಂಟಿ.
 

ಅಷ್ಟೇ ಅಲ್ಲ ತಾನು ಇಲ್ಲಿವರೆಗೆ ಮದುವೆಯಾಗುವ ಮನಸು ಮಾಡಿರಲಿಲ್ಲ ಎಂದ ಅನುಶ್ರೀ ಇದೇ ಮೊದಲ ಬಾರಿ ನಾನು ಮದುವೆಯಾಗುವ ಮನಸು ಮಾಡಿದ್ದೇನೆ. ಕನ್ನಡಿಗರ ಆಶೀರ್ವಾದದಿಂದ ಮುಂದಿನ ವರ್ಷ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಆ ಹುಡುಗ ನನ್ನ ಬದುಕಿನಲ್ಲಿ ಬರಲಿ, ಅವನು ಬಂದರೆ ನಿಮ್ಮ ಮುಂದೆ ಕರೆದುಕೊಂಡು ಬಂದು ನಿಲ್ಲಿಸಿ ನಿಮಗೆ ಪರಿಚಯ ಮಾಡಿಸಿಕೊಡುವ ಅದೃಷ್ಟ ನನ್ನದಾಗಲಿ ಎಂದು ಹೇಳಿದ್ದಾರೆ. 
 

Latest Videos

click me!