ಪೋರ್ಚುಗಲ್ ಬೀದಿ ಬೀದಿಯಲ್ಲಿ ಸುತ್ತುತ್ತಾ ಎಂಜಾಯ್ ಮಾಡ್ತಿದ್ದಾರೆ ರಂಜನಿ ರಾಘವನ್

Published : Apr 06, 2023, 04:50 PM IST

ಕನ್ನಡತಿ ಸೀರಿಯಲ್ ಬಳಿಕ ಇದೀಗ ನಟಿ ರಂಜನಿ ರಾಘವನ್ ತಮ್ಮ ಮೊದಲ ವಿದೇಶಿ ಟ್ರಿಪ್ ಮಾಡುತ್ತಾ, ಪೋರ್ಚುಗಲ್ ದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ, ಜೊತೆಗೆ ಅಲ್ಲಿನ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಾ ಸುದ್ದಿಯಲ್ಲಿದ್ದಾರೆ. 

PREV
17
ಪೋರ್ಚುಗಲ್ ಬೀದಿ ಬೀದಿಯಲ್ಲಿ ಸುತ್ತುತ್ತಾ ಎಂಜಾಯ್ ಮಾಡ್ತಿದ್ದಾರೆ ರಂಜನಿ ರಾಘವನ್

ಸೀರಿಯಲ್, ಸಿನಿಮಾ, ಸಾಹಿತ್ಯ ಎಂದು ಬ್ಯುಸಿಯಾಗಿದ್ದ ರಂಜನಿ ರಾಘವನ್ (Ranjani Raghavan) ಇದೀಗ ಎಲ್ಲದರಿಂದ ಬ್ರೇಕ್ ಪಡೆದು, ತಮ್ಮ ಗೆಳತಿ ಜೊತೆ ವಿದೇಶದಲ್ಲಿ ಸುತ್ತುತ್ತಾ ಎಂಜಾಯ್ ಮಾಡುತ್ತಿದ್ದಾರೆ, ಜೊತೆಗೆ ತಮ್ಮ ಪ್ರವಾಸ ಸುಂದರ ಸ್ಥಳದ ಫೋಟೋ, ಆಹಾರದ ಫೋಟೊಗಳನ್ನು ಸಹ ಶೇರ್ ಮಾಡುತ್ತಿದ್ದಾರೆ. 

27

ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಂಜನಿ ರಾಘವನ್ ಸೆಲೆಬ್ರೇಶನ್‌ಗಾಗಿ ಮೊದಲ ಬಾರಿಗೆ ಯುರೋಪ್ ಖಂಡಕ್ಕೆ (Europe trip) ಟ್ರಿಪ್‌ಗೆ ಬಂದಿದ್ದಾರೆ. ಇದು ಅವರ ಮೊದಲ ಇಂಟರ್ ನ್ಯಾಷನಲ್ ಟ್ರಿಪ್ (international trip) ಕೂಡ ಹೌದು. ಗೆಳತಿಯ ಜೊತೆ ಅವರು ಯುರೋಪ್ ಖಂಡದ ಪೋರ್ಚುಗಲ್ ದೇಶದ ಲಿಸ್ಬನ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.

37

ಇಲ್ಲಿವರೆಗೆ ರಂಜನಿ ಹಲವಾರು ಫೋಟೋಗಳನ್ನು ಶೇರ್ ಮಾಡಿದ್ದು, ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟಿಯನ್ನು ನೋಡಿ ಖುಷಿ ಪಟ್ಟಿದ್ದಾರೆ. ತಮ್ಮ ಫೋಟೋಗಳಿಗೆ ಹ್ಯಾಶ್ ಟ್ಯಾಗ್ ಆಗಿ ರಂಜನಿ ಯುರೋಪ್ ವೆಕೇಶನ್, ಗರ್ಲ್ಸ್ ಟ್ರಿಪ್, ಬರ್ತ್ ಡೇ ಟ್ರಿಪ್ ಎಂದು ಬರೆದುಕೊಂಡಿದ್ದಾರೆ.

47

ಮೊದಲ ಧಾರವಾಹಿ ಪುಟ್ಟ ಗೌರಿಯ ಮದುವೆ ಆದರೂ, ರಾಜ್ಯಾದ್ಯಂತ ಅವರು ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡದ್ದು, ಕನ್ನಡತಿಯ (Kannadathi) ಭುವಿಯಾಗಿ. ಪ್ರಬುದ್ಧ ಪ್ರೀತಿ, ಕನ್ನಡದ ಮೇಲಿನ ಅಭಿಮಾನ, ನಟನೆ ಎಲ್ಲವೂ ಜನರಿಗೆ ಮೋಡಿ ಮಾಡಿದ್ದು, ಸೀರಿಯಲ್ ಮುಗಿದ ಬಳಿಕ ಇದೀಗ ರಂಜನಿ ಪ್ರವಾಸಗಳಲ್ಲಿ ಬ್ಯುಸಿಯಾಗಿದ್ದಾರೆ. 

57

ಇನ್ನು ಪೋರ್ಚುಗಲ್ ದೇಶದಲ್ಲೆ ಇದ್ದುಕೊಂಡು ಆರ್‌ಸಿಬಿ ತಂಡಕ್ಕೆ ಬೆಂಬಲ ನೀಡಿದ ರಂಜನಿ ರಾಘವನ್.. ತಂಡಕ್ಕೆ ಬೆಸ್ಟ್ ವಿಶಸ್ ಕೂಡ ತಿಳಿಸಿದ್ದಾರೆ. ಆರ್‌ಸಿಬಿ ಜೆರ್ಸಿ (RCB Jersy) ತೊಟ್ಟ ರಂಜನಿ ಹಲವಾರು ಫೋಟೊ ಶೇರ್ ಮಾಡಿದ್ದು, ಪಕ್ಕ ಈ ಸಲ ಕಪ್ ನಮ್ದೇ ಎಂದಿದ್ದಾರೆ. 

67

ನೆಚ್ಚಿನ ನಟಿಯ ಫೋಟೋಗಳಿಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದು, ಯೂರೋಪ್ ಪೂರ್ತಿ ಲಗ್ಗೆ ಹೊಡೆದು, ಸುರಕ್ಷಿತವಾಗಿ ಕರುನಾಡಿಗೆ ಬನ್ನಿ ಎಂದು ಹಲವರು ಹೇಳಿದ್ದಾರೆ. ರಂಜನಿ ಅವರ ಸರಳ ಸುಂದರ ಲುಕ್ ಅನ್ನು ಹೆಚ್ಚಿನ ಜನ ಹೊಗಳಿದ್ದಾರೆ.
 

77

ಇನ್ನು ಕರಿಯರ್ ಬಗ್ಗೆ ಹೇಳೋದಾದ್ರೆ ರಂಜನಿ ಸತ್ಯಂ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಸಾಹಿತ್ಯದಲ್ಲಿ ಅಭಿರುಚಿ ಹೊಂದಿರುವ ರಂಜನಿ ಈಗಾಗಲೇ ಎರಡು ಪುಸ್ತಕಗಳನ್ನು ಸಹ ಬರೆದಿದ್ದು, ಮುಂದೆ ಕೂಡ ಸಾಹಿತ್ಯ ಲೋಕಕ್ಕೆ ಮತ್ತಷ್ಟು ಕೊಡುಗೆ ನೀಡುವ ಯೋಜನೆಯಲ್ಲಿದ್ದಾರೆ. 
 

Read more Photos on
click me!

Recommended Stories