ಬೆಳಗಾವಿ ಹುಡುಗನಿಗೆ ಮಂಡಿಯೂರಿ ಪ್ರಪೋಸ್‌ ಮಾಡಿದ ತೆಲುಗು ನಟಿ ಪ್ರಿಯಾಂಕಾ ಜೈನ್ PHOTOS!

Published : Jun 18, 2025, 11:45 AM ISTUpdated : Jun 18, 2025, 11:53 AM IST

ಬೆಳಗಾವಿ ಮೂಲಕ ನಟ ಶಿವಕುಮಾರ್‌ ಅವರು ಈಗ ತೆಲುಗು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರಿಗೆ ತೆಲುಗು ನಟಿ ಪ್ರಪೋಸ್‌ ಮಾಡಿದ್ದಾರೆ.

PREV
19

ನಾಗಕನ್ನಿಕೆ ಧಾರಾವಾಹಿಯಲ್ಲಿ ನಟಿಸಿದ್ದ ಶಿವಕುಮಾರ್‌ ಈಗ ತೆಲುಗಿನಲ್ಲಿ ಬ್ಯುಸಿ ಆಗಿದ್ದಾರೆ.

29

ಕೆಲ ವರ್ಷಗಳಿಂದ ಶಿವಕುಮಾರ್‌, ತೆಲುಗು ನಟಿ ಪ್ರಿಯಾಂಕಾ ಜೈನ್‌ ಪ್ರೀತಿ ಮಾಡುತ್ತಿದ್ದಾರೆ.

39

ಶಿವಕುಮಾರ್‌ ಅವರು ಇಂಜಿನಿಯರಿಂಗ್‌ ಕಲಿಯುತ್ತಿದ್ದರು, ಆ ವೇಳೆ ಮಾಡೆಲಿಂಗ್‌ ಆರಂಭಿಸಿದ್ದರು. ಓದನ್ನು ಅರ್ಧಕ್ಕೆ ಕೈಬಿಟ್ಟು ಆಮೇಲೆ ಬೆಂಗಳೂರಿಗೆ ಬಂದು ಆಡಿಷನ್‌ ಆರಂಭಿಸಿದ್ದರು.

49

ಆಮೇಲೆ ಅವರು ʼನಾಗಕನ್ನಿಕೆʼ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಈ ಧಾರಾವಾಹಿಯಲ್ಲಿ ಅದಿತಿ ಪ್ರಭುದೇವ ಹೀರೋಯಿನ್‌ ಆಗಿದ್ದರು. ಆಮೇಲೆ ʼಮಾನಸ ಸರೋವರʼ ಧಾರಾವಾಹಿಯಲ್ಲಿ ನಟಿಸಿದ್ದರು.

59

ಪ್ರಿಯಾಂಕಾ ಜೈನ್‌ ಅವರು ‘ಮೌನ ರಾಗಂ’ ಧಾರಾವಾಹಿಯಲ್ಲಿ ನಟಿಸಿದ್ದರು. 2021ರಲ್ಲೇ‌ ಶಿವಕುಮಾರ್‌ ಮರಿಹಾಳ್‌, ಪ್ರಿಯಾಂಕಾ ಜೈನ್ ಅವರು ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಕೂಡ ಈ ಜೋಡಿ ಪ್ರೀತಿ ಮಾಡುತ್ತಲಿದೆ ಎಂಬ ಸುಳಿವು ಕೊಟ್ಟಿತ್ತು.

69

ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿರುವ ಈ ಜೋಡಿ ತಾವು ಲವ್‌ ಮಾಡುತ್ತಿರುವ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿದೆ. ತಾನು ಪ್ರೀತಿಸುತ್ತಿರುವ ಹುಡುಗನಿಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಬೇಕು ಅಂತ ಪ್ರಿಯಾಂಕಾ ಅಂದುಕೊಂಡಿದ್ದರು. ಅದರಂತೆ ಪ್ರೇಮ ನಿವೇದನೆ ಮಾಡಿದ್ದಾರೆ.

79

ತೆಲುಗು ಶೋವೊಂದರಲ್ಲಿ ತಾವಿಬ್ಬರು ತಮ್ಮ ಮೊಬೈಲ್‌ಗೆ ಒಂದೇ ಪಾಸ್‌ವರ್ಡ್‌ ಇಟ್ಟುಕೊಂಡಿರೋದು ಬೆಳಕಿಗೆ ಬಂದಿತ್ತು, ಆಗ ಇಬ್ಬರಿಗೂ ಶಾಕ್‌ ಆಗಿತ್ತು.

89

ಇದೇ ವರ್ಷವೇ ಪ್ರಿಯಾಂಕಾ ಎಂ ಜೈನ್‌, ಶಿವಕುಮಾರ್‌ ಮರಿಹಾಳ ಅವರು ಮದುವೆ ಆಗಲಿದ್ದಾರಂತೆ. ಗ್ರ್ಯಾಂಡ್‌ ಮದುವೆಗೆ ತಯಾರಿ ನಡೆಯುತ್ತಿದೆ. 

99

ಒಮ್ಮೆ ಡೇಟಿಂಗ್‌ಗೆ ಹೋದಾಗ ನಿನ್ನ ತುಟಿ ಇಷ್ಟ ಅಂತ ಪ್ರಿಯಾಂಕಾಗೆ ಶಿವಕುಮಾರ್‌ ಹೇಳಿದ್ದರು. ಈ ಬಗ್ಗೆ ನಟಿಯೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

Read more Photos on
click me!

Recommended Stories