ಅನಾರೋಗ್ಯ ನಂತರ ಕಿರುತೆರೆಗೆ 'ಕನ್ಯಾಕುಮಾರಿ' ಸ್ವಾತಿ ಕಮ್ ಬ್ಯಾಕ್ ಮಾಡಿದ್ದು ಹೀಗೆ!

First Published | Apr 19, 2022, 3:42 PM IST

ಕಿರುತೆರೆ ಲೋಕದಲ್ಲಿ ತಾಯಿ ಪಾತ್ರದಲ್ಲಿ ಮಿಂಚುತ್ತಿರುವ ಸ್ವಾತಿ ರಿಯಲ್ ಲೈಫ್‌ನಲ್ಲಿ ಸಖತ್ ಯಂಗ್ ಹುಡುಗಿ. ಅವರ ಹಿನ್ನೆಲೆ ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಕನಿಕಾ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಾಡೆಲ್ ಸ್ವಾತಿ.

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್‌' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಸ್ವಾತಿ ಅವರ ಮೊದಲ ಧಾರಾವಾಹಿ ಶುಭ ವಿವಾಹ. ಊರ್ಮಿಳಾ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

Tap to resize

 ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಮಂಡೋದರಿಯಾಗಿ ಅಭಿನಯಿಸಿದ ಸ್ವಾತಿ ಖಳನಾಯಕಿ ಪಾತ್ರಕ್ಕೆ ಸೈ ಎನಿಸಿಕೊಂಡು, ಮತ್ತೆ ಹಿಂತಿರುಗಿ ನೋಡಿಲ್ಲ.

ಪುಟ್ಟಗೌರಿ ಮದುವೆ (Puttagowri maduve) ನಂತರ ಸರ್ವ ಮಂಗಳ ಮಾಂಗಲ್ಯೇ, ರಂಗನಾಯಕಿ, ಗಟ್ಟಿಮೇಳ ಈಗ ಕನ್ಯಾಕುಮಾರಿಯಲ್ಲಿ ಅಭಿನಯಿಸುತ್ತಿದ್ದಾರೆ. 

ರಂಗನಾಯಕಿ ಧಾರಾವಾಹಿ ನಂತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಸ್ವಾತಿ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ತೆಗೆದುಕೊಂಡಿದ್ದರು. ಗಟ್ಟಿಮೇಳ ಮೂಲಕ ಕಮ್ ಬ್ಯಾಕ್ ಮಾಡಿದ್ದರು.

ಅರ್ಚನಾ ಅಭಿನಯಿಸುತ್ತಿದ್ದ ಸುಹಾಸಿನಿ ಪಾತ್ರಕ್ಕೆ ಸ್ವಾತಿ ಎಂಟ್ರಿ ಕೊಡುವ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಸುಹಾಸಿನಿ ಪಾತ್ರವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂದು ಭಯವಿತ್ತಂತೆ.

ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಅಮ್ಮ ಪಾತ್ರ ಮಾಡುತ್ತಿರುವ ಸ್ವಾತಿ ಅವರು ರಿಯಲ್ ಲೈಫ್‌ನಲ್ಲಿ ಯಂಗ್ ಮಾಡಲ್. ಸಿಂಗಲ್ ಆಗಿದ್ದು ಪಡ್ಡೆ ಹುಡುಗರ ಹಾರ್ಟ್‌ ಕದ್ದಿದ್ದಾರೆ.

Latest Videos

click me!