ಅಮರನಾಥ ಗುಹೆಯಲ್ಲಿ ಇಂದಿಗೂ ಕಾಣ ಸಿಗುತ್ತೆ ಶಿವನಿಂದ ಅಮರತ್ವ ಪಡೆದ ಜೋಡಿ ಪಾರಿವಾಳಗಳು!

First Published | Jul 13, 2024, 2:07 PM IST

ಜೂನ್ 29ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ಇಲ್ಲಿರುವ ಭಗವಾನ್ ಶಂಕರನು ಮಾತ್ರ  ಹಿಮಲಿಂಗದ ರೂಪದಲ್ಲಿ ಕಾಣಿಸಿಕೊಳ್ಳುವ ಭೂಮಿ ಮೇಲಿನ ಏಕೈಕ ಲಿಂಗ. ಇಲ್ಲಿ ಇಂದಿಗೂ ಕಂಡು ಬರುತ್ತೆ ಶಿವನಿಂದ ಅಮರತ್ವ ಪಡೆದ ಪಾರಿವಾಳಗಳ ಜೋಡಿ. 
 

ಅಮರನಾಥ ಧಾಮವು (Amaranath Dhama) ಹಿಂದೂಗಳ ಪವಿತ್ರ ಯಾತ್ರಾ ಕೇಂದ್ರವಾಗಿದೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಭಕ್ತರು ಶಿವನನ್ನು ನೋಡಲು ಇಲ್ಲಿಗೆ ಬರುತ್ತಾರೆ. ಅಮರನಾಥ ಯಾತ್ರೆ ಮಾಡೋದು ಅಂದ್ರೆ ಭಕ್ತರಿಗೂ ಎಲ್ಲಿಲ್ಲದ ಖುಷಿ. ವಾರ್ಷಿಕ ಅಮರನಾಥ ಯಾತ್ರೆ ಜೂನ್ 29 ರಂದು ಪ್ರಾರಂಭವಾಗಿ ಆಗಸ್ಟ್ 19 ರಂದು ಕೊನೆಗೊಳ್ಳಲಿದೆ. ಶಿವನು ಅಮರನಾಥ ಧಾಮದಲ್ಲಿ ಹಿಮಲಿಂಗವಾಗಿ ಕುಳಿತಿದ್ದಾರೆ ಎನ್ನುವ ನಂಬಿಕೆ ಇದೆ. 
 

ಶಿವ ಮತ್ತು ಪಾರ್ವತಿಯರಿಗೆ (Shiv and Parvathi) ಸಂಬಂಧಿಸಿದ ಈ ಧಾಮ ಶಿವ ಮತ್ತು ಶಕ್ತಿಯ ಪ್ರತೀಕವಾಗಿದೆ. ಹಲವು ಕಷ್ಟಗಳು, ಸಮಸ್ಯೆಗಳು ಮತ್ತು ತೊಂದರೆಗಳನ್ನು ಎದುರಿಸಿ ಭಕ್ತರು ಕಷ್ಟಪಟ್ಟು ಕಿರಿದಾದ ಬೆಟ್ಟಗುಡ್ಡಗಳನ್ನ ಹತ್ತಿ ಇಳಿದು ಅಮರನಾಥನ ದರ್ಶನಕ್ಕೆ ತೆರಳುತ್ತಾರೆ. ಮೊದಲ ಬಾರಿಗೆ ಬೃಗು ಮಹರ್ಷಿಗಳು ಅಮರನಾಥ ಗುಹೆಯ ದರ್ಶನ ಮಾಡಿದ್ದರು ಎನ್ನಲಾಗುತ್ತೆ. ಇಲ್ಲಿ ಕಾಣಸಿಗುವ ಪಾರಿವಾಳ ಕಥೆಯನ್ನು ಕೇಳಿದ್ರೆ ನೀವು ಖಂಡಿತವಾಗಿಯೂ ಅಚ್ಚರಿ ಪಡುತ್ತೀರಿ. 
 

Tap to resize

ಅಮರನಾಥದ ಗುಹೆಯಲ್ಲಿ (Amarnath Cave), ದೇವತೆಗಳ ದೇವರಾದ ಮಹಾದೇವನು ತಾಯಿ ಪಾರ್ವತಿಗೆ ಅಮರತ್ವದ ರಹಸ್ಯದ ಬಗ್ಗೆ ಹೇಳಿದನು ಎಂದು ಹೇಳಲಾಗುತ್ತದೆ. ಅಮರನಾಥ ಗುಹೆಯಲ್ಲಿ ಒಂದು ಜೋಡಿ ಪಾರಿವಾಳಗಳಿವೆ, ಅವು ಅಮರತ್ವವನ್ನು ಪಡೆದಿದೆ ಎನ್ನುವ ನಂಬಿಕೆ ಇದೆ. ಈ ಜೋಡಿ ಪಾರಿವಾಳವನ್ನು ನೋಡಿದ್ರೆ ಅದೃಷ್ಟ, ಇದು ಶಿವ -ಪಾರ್ವತಿಯರ ಪ್ರತೀಕ ಎನ್ನಲಾಗುವುದು. 
 

ಅಮರನಾಥ ಗುಹೆಯ ರಹಸ್ಯ
ಪುರಾಣಗಳ ಪ್ರಕಾರ, ಒಮ್ಮೆ ಮಹಾದೇವನು ಅಮರನಾಥ ಗುಹೆಯಲ್ಲಿ ಮಾತಾ ಪಾರ್ವತಿಗೆ ಮೋಕ್ಷದ ಮಾರ್ಗವನ್ನು ತಿಳಿಸಿದನು. ಈ ಸಮಯದಲ್ಲಿ, ಶಿವ ಮತ್ತು ತಾಯಿ ಪಾರ್ವತಿಯ ನಡುವೆ ಒಂದು ವಿಷಯದ ಬಗ್ಗೆ ಚರ್ಚೆ ನಡೆಯಿತಂತೆ. ದಂತಕಥೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ, ಮಾತಾ ಪಾರ್ವತಿ ಶಿವನಿಂದ ಮೋಕ್ಷದ ಮಾರ್ಗವನ್ನು ತಿಳಿದುಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದಳು.

ಶಿವನು ಮಾತಾ ಪಾರ್ವತಿಗೆ ಅಮರತ್ವವನ್ನು ಹೇಗೆ ಪಡೆಯುವುದು ಎನ್ನುವ ಬಗ್ಗೆ ವಿವರಿಸುತ್ತಿದ್ದನಂತೆ. ಶಿವನ ಅಮರತ್ವದ ಕಥೆಯನ್ನು ಹೇಳುತ್ತಿರುವಾಗಲೇ ಪಾರ್ವತಿ ನಿದ್ದೆಗೆ ಜಾರುತ್ತಾಳೆ, ಇದು ಶಿವನಿಗೆ ಗೊತ್ತಾಗದೇ ಶಿವ ಕಥೆಯನ್ನು ಹೇಳುತ್ತಲೇ ಹೋಗುತ್ತಾನೆ. ಆವಾಗ ಗುಹೆಯಲ್ಲಿದ್ದ ಒಂದು ಜೋಡಿ ಪಾರಿವಾಳಗಳು ಶಿವನು ಹೇಳುತ್ತಿದ್ದ ಅಮರತ್ವದ (Amarathva) ಕಥೆಯನ್ನು ಕೇಳಿಸಿಕೊಂಡವು, ಅವು ಶಬ್ಧ ಮಾಡುತ್ತಿರುವುದು ಶಿವನಿಗೆ ಕೇಳುತ್ತಿತ್ತು, ಆದರೆ ಶಿವನು ಪಾರ್ವತಿ ದೇವಿ ಹೂಂಗುಟ್ಟುತ್ತಿದ್ದಾಳೆ ಎಂದು ತಿಳಿದು ಕಥೆಯನ್ನು ಹೇಳುತ್ತಾ ಹೋದನು.  
 

ಶಿವ ಹೇಳಿದ ಅಮರತ್ವದ ಕಥೆಗಳನ್ನು ಪೂರ್ತಿಯಾಗಿ ಕೇಳಿಸಿದ ಆ ಜೋಡಿ ಪಾರಿವಾಳಗಳು ಅಮರತ್ವವನ್ನು ಪಡೆದವು ಎನ್ನಲಾಗುತ್ತದೆ. ಈಗಲೂ ಈ ಪಾರಿವಾಳಗಳು (pigeons) ಗುಹೆಯ ಬಳಿ ಕಾಣಿಸಿಕೊಳ್ಳುತ್ತವಂತೆ. ಅದನ್ನ ನೋಡಿದರೆ ಶಿವ-ಪಾರ್ವತಿಯ ದರ್ಶನ ಪಡೆದಂತೆ ಎನ್ನಲಾಗುತ್ತದೆ. 

ಅಚ್ಚರಿ ಪಡುವಂತಹ ವಿಷಯ ಏನಪ್ಪಾ ಅಂದ್ರೆ, ಅಮರನಾಥ ಗುಹೆಯಲ್ಲಿ ಆಕ್ಸಿಜನ್ ಲೆವೆಲ್ ತುಂಬಾನೆ ಕಡಿಮೆ ಇರುತ್ತೆ. ಇಲ್ಲಿ ಜನ ಆಗಿರಲಿ, ಪ್ರಾಣಿಗಳೇ ಆಗಲಿ ಜೀವಿಸೋದಕ್ಕೆ ತುಂಬಾನೆ ಕಷ್ಟ, ಸಾಧ್ಯ ಇಲ್ಲ ಅಂತಾನೆ ಹೇಳಬಹುದು. ಇಲ್ಲಿ ದೂರ ದೂರದವರೆಗೆ ಕುಡಿಯೋದಕ್ಕು ತಿನ್ನೋದನ್ನು ಆಹಾರ -ನೀರು ಸಿಗೋದೆ ಕಷ್ಟ. ಇಂತಹ ಜಾಗದಲ್ಲಿ ಈ ಪಾರಿವಾಳಗಳು ಹೇಗಿರುತ್ತವೆ ಅನ್ನೋದೆ ಅಚ್ಚರಿ. 
 

ಇನ್ನು ಅಮರನಾಥ ಗುಹೆಯ ಪೌರಾಣಿಕ ಕಥೆಯಲ್ಲಿ ಕಷ್ಯಪ ಮಹರ್ಷಿ ಮತ್ತು ಬೃಗು ಮಹರ್ಷಿಗಳ ಉಲ್ಲೇಖ ಕೂಡ ಮಾಡಲಾಗಿದೆ. ದಂತಕಥೆಯ ಪ್ರಕಾರ, ಒಮ್ಮೆ ಭೂಮಿಯ ಮೇಲಿನ ಸ್ವರ್ಗವಾಗಿರುವ ಜಮ್ಮು ಕಾಶ್ಮೀರ ನೀರಿನಲ್ಲಿ ಮುಳುಗಿ ದೊಡ್ಡ ಸರೋವರವಾಗಿ ರೂಪಾಂತರಗೊಂಡಿತು. ಲೋಕ ಕಲ್ಯಾಣಕ್ಕಾಗಿ, ರಿಷಿ ಕಶ್ಯಪರು ಆ ನೀರನ್ನು ಸಣ್ಣ ನದಿಗಳನ್ನಾಗಿ ಮಾಡಿ ಹರಿಸಿದರು. ಆ ಸಮಯದಲ್ಲಿ ಬೃಗು ಋಷಿ ಹಿಮಾಲಯಕ್ಕೆ ಪ್ರಯಾಣ ಬೆಳೆಸಿದರು. ಕಡಿಮೆ ನೀರಿನ ಮಟ್ಟದಿಂದಾಗಿ, ಮಹರ್ಷಿ ಭೃಗು ಅಮರನಾಥದ ಪವಿತ್ರ ಗುಹೆ ಮತ್ತು ಹಿಮಾಲಯ ಪರ್ವತ (Himalaya) ಶ್ರೇಣಿಗಳಲ್ಲಿ ಮೊದಲಿಗೆ ಹಿಮಲಿಂಗ ದರ್ಶನ ಪಡೆದರು ಎನ್ನಲಾಗಿದೆ. 
 

Latest Videos

click me!