ಕೇರಳದ ಈ ದೇಗುಲಕ್ಕೆ ನಾಯಿಯೂ ಪ್ರವೇಶಿಸಬಹುದು, ಸಿಗೋದು ಮೀನಿನ ಪ್ರಸಾದ

First Published Jun 10, 2023, 5:55 PM IST

ಭಾರತದಲ್ಲಿ ವಿಭಿನ್ನ ರೀತಿಯ, ವಿವಿಧ ವೈಶಿಷ್ಟ್ಯತೆಗಳಿಂದ ಕೂಡಿದ ದೇವಾಲಯಗಳಿವೆ.  ಕೇರಳದಲ್ಲಿನ ಒಂದು ನದಿಯ ದಡದಲ್ಲಿರುವ ಪರಶಿನಕಡವು ಶ್ರೀ ಮುತ್ತಪ್ಪನ್ ದೇವಾಲಯವು ಅಂತಹ ವೈವಿಧ್ಯಮಯ ಸಂಪ್ರದಾಯವುಳ್ಳ ದೇಗುಲಗಳಲ್ಲಿ ಒಂದಾಗಿದೆ. 

ಭಾರತದ ವೈವಿಧ್ಯತೆಯನ್ನು ಇಲ್ಲಿನ ದೇವಾಲಯಗಳಿಂದ ಕಾಣಬಹುದು. ಈ ದೇವಾಲಯಗಳು ವಿನ್ಯಾಸದಲ್ಲಿ ಮಾತ್ರವಲ್ಲದೆ ಅವುಗಳ ಅಲಂಕಾರ ಮತ್ತು ನಂಬಿಕೆಗಳಲ್ಲಿಯೂ ಭಿನ್ನವಾಗಿವೆ. ಈ ದೇವಾಲಯಗಳಲ್ಲಿ ಪ್ರಸಾದಕ್ಕೆ ವಿಶಿಷ್ಟ ಮಹತ್ವವಿದೆ. ಹಣ್ಣು, ಲಡ್ಡು, ಪುರಿ ಪ್ರಸಾದಗಳಾಗಿ ಲಭ್ಯವಿದೆ, ಆದರೆ ಪ್ರಸಾದದಲ್ಲಿ ಮೀನುಗಳನ್ನು ನೀಡುವ ದೇಗುಲವನ್ನು ನೀವು ಎಂದಾದರೂ ನೋಡಿದ್ದೀರಾ? ಕೇರಳದ ಮುತ್ತಪ್ಪನ್ ದೇವಸ್ಥಾನದಲ್ಲಿ  (Muthappan Temple)ಮೀನನ್ನು ಪ್ರಸಾದದಲ್ಲಿ ನೀಡಲಾಗುತ್ತದೆ. ಇದು ವಿಚಿತ್ರವಾಗಿ ತೋರಬಹುದು, ಆದರೆ ಇದು ನಿಜ.

ಇಷ್ಟೇ ಅಲ್ಲ, ಈ ದೇವಾಲಯಕ್ಕೆ ಸಂಬಂಧಿಸಿದ ಅನೇಕ ವಿಶಿಷ್ಟ ವಿಷಯಗಳಿವೆ, ಅದನ್ನು ತಿಳಿದ ನಂತರ ನೀವು ಆಶ್ಚರ್ಯಚಕಿತರಾಗುವಿರಿ. ನದಿಯ ದಡದಲ್ಲಿರುವ ಕಾರಣ, ಈ ದೇವಾಲಯವು ಇಲ್ಲಿನ ಮತ್ತಷ್ಟು ಸುಂದರವಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ-

Latest Videos


ಪರಶಿನಕಡವು ಶ್ರೀ ಮುತ್ತಪ್ಪನ್ ದೇವಾಲಯದ ಆಸಕ್ತಿದಾಯಕ ಸಂಪ್ರದಾಯಗಳು
ಮುತ್ತಪ್ಪನ್ ದೇವಾಲಯವು (Parassinanikadavu Muthappan temple) ಕೇರಳದ ಕಣ್ಣೂರು ಜಿಲ್ಲೆಯ ತಾಲಿಪರಂಬದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ವಲಪ್ತನಂ ನದಿಯ ದಡದಲ್ಲಿದೆ. ಈ ದೇವಾಲಯದ ಆರಾಧ್ಯ ದೇವತೆ ಶ್ರೀ ಮುತ್ತಪ್ಪನ್. ಜನರ ಪ್ರಕಾರ, ಮುತ್ತಪ್ಪನ್ ಇಲ್ಲಿನ ಪ್ರಧಾನ ದೇವತೆಯಾಗಿದ್ದು, ಶಿವ ಮತ್ತು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ಸ್ಥಳೀಯ ಜನರ ಪ್ರಕಾರ, ಇಲ್ಲಿನ ಜಾನಪದ ದೇವತೆಗಳು ಅಸಹಾಯಕ ಮತ್ತು ದುರ್ಬಲ ಜನರ ಹಿತಾಸಕ್ತಿಗಳನ್ನು ರಕ್ಷಿಸುತ್ತಾರೆ. 

ದೇವಾಲಯಕ್ಕೆ ಬರುವ ಜನರಿಗೆ ಇಲ್ಲಿ ಉಚಿತ ಆಹಾರ ನೀಡುವುದಲ್ಲದೆ ಉಳಿದುಕೊಳ್ಳಲು ಆಶ್ರಯವನ್ನು ಸಹ ನೀಡಲಾಗುತ್ತದೆ. ದೇವಾಲಯಕ್ಕೆ ಭೇಟಿ ನೀಡಿದ ನಂತರ, ಜನರಿಗೆ ಬೇಯಿಸಿದ ಕಪ್ಪು ಕಡಲೆ ಮತ್ತು ಚಹಾವನ್ನು ನೀಡಲಾಗುತ್ತದೆ. ಅದನ್ನು ಅಲ್ಲಿನ ಜನರು ಪ್ರಸಾದ ಎಂದು ಕರೆಯುತ್ತಾರೆ.

ನಾಯಿಗೂ ದೇಗುಲದ ಒಳಗೆ ಅವಕಾಶ
ಯಾವುದೇ ದೇಗುಲಗಳಿಗೆ ನಾಯಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಆದರೆ ಇಲ್ಲಿನ ವಿಶೇಷವೆಂದರೆ, ಜನರಲ್ಲದೆ, ನಾಯಿಗಳಿಗೂ ಈ ದೇವಾಲಯದೊಳಗೆ ಹೋಗಲು ಅವಕಾಶವಿದೆ. ಏಕೆಂದರೆ ಅವು ಭಗವಾನ್ ಮುತ್ತಪ್ಪನ್ ನ ವಾಹನಗಳಾಗಿವೆ (vehicle of Muthappan), ಆದ್ದರಿಂದ ಅವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
 

ಈ ದೇವಾಲಯವು ಕೂನೂರಿನ ಪರಂಪರೆ
ಪರಶಿನಕಡವು ಶ್ರೀ ಮುತ್ತಪ್ಪನ್ ದೇವಾಲಯವನ್ನು ಕೂನೂರಿನ ಪರಂಪರೆ ಎಂದು ಪರಿಗಣಿಸಲಾಗಿದೆ. ಪ್ರಸಾದದ ಹೊರತಾಗಿ, ಮೀನು ಮತ್ತು ಕಳ್ಳನ್ನು (ಸಾರಾಯಿ) ಇಲ್ಲಿ ಮುತ್ತಪ್ಪನ್ ದೇವರಿಗೆ ಅರ್ಪಿಸಲಾಗುತ್ತದೆ, ಇದನ್ನು ನಂತರ ಜನರಿಗೆ ಸಾಂಪ್ರದಾಯಿಕ ಪ್ರಸಾದವಾಗಿ ಬಡಿಸಲಾಗುತ್ತದೆ. 
 

ವಿಶೇಷವೆಂದರೆ ಇದು ಹಿಂದೂ ದೇವಾಲಯವಾಗಿದ್ದರೂ, ವಿವಿಧ ಧರ್ಮಗಳು, ಜಾತಿಗಳು ಮತ್ತು ಪ್ರದೇಶಗಳ ಜನರನ್ನು ಆಕರ್ಷಿಸುತ್ತದೆ. ದೇವಾಲಯದ ಆವರಣದಲ್ಲಿ, ಥೈಯಂ (Theyyam) ನಡೆಯುತ್ತದೆ. ಇದು ಇಲ್ಲಿನ ವಿಶಿಷ್ಟ ರೀತಿಯ ದೈವೀಕ ಸಂಪ್ರದಾಯವಾಗಿದೆ. ನಂತರ ಜನರಿಗೆ ಆಶೀರ್ವಾದ ನೀಡಲಾಗುತ್ತೆ. ಥೈಯಂ ನೋಡಲು ವಿವಿದೆಡೆಯಿಂದ ಜನರು ಬರುತ್ತಾರೆ. .

ಕೂನೂರು ರೈಲ್ವೆ ನಿಲ್ದಾಣವನ್ನು (Railway Station) ತಲುಪಿದ ನಂತರ, ನೀವು ಬಸ್, ಟ್ಯಾಕ್ಸಿ ಇತ್ಯಾದಿಗಳ ಮೂಲಕ ಪರಶಿನಕಡವು ತಲುಪಬಹುದು. ಇದು ನಿಮಗೆ ಅರ್ಧ ಗಂಟೆ ಅಥವಾ ಒಂದು ಗಂಟೆ ದಾರಿಯಾಗಿದೆ. ಮಂಗಳೂರಿನಿಂದಲೂ ನೀವು ರೈಲಿನ ಮೂಲಕ ಈ ತಾಣಕ್ಕೆ ಪ್ರಯಾಣ ಬೆಳೆಸಬಹುದು.

ಪ್ರವಾಸಿ ತಾಣಗಳು :
ಕೂನೂರಿನ ಈ ದೇವಾಲಯವನ್ನು ಹೊರತುಪಡಿಸಿ, ಅನೇಕ ಪ್ರವಾಸಿ ಸ್ಥಳಗಳಿವೆ, ನೀವು ಬಯಸಿದರೆ ಇಲ್ಲಿದೆ ಭೇಟಿ ನೀಡಬಹುದು. ಕಡಲತೀರಗಳು, ವಸ್ತುಸಂಗ್ರಹಾಲಯಗಳು, ಸ್ನೇಕ್ ಪಾರ್ಕ್, ವಾಟರ್ ಪಾರ್ಕ್ ಮೊದಲಾದವುಗಳು ಹತ್ತಿರದಲ್ಲೇ ಇವೆ. ಇಲ್ಲಿ ನೀವು ದೇವರ ದರ್ಶನದ ಜೊತೆಗೆ ಸುತ್ತಲಿನ ಪ್ರದೇಶದಲ್ಲಿ ಎಂಜಾಯ್ ಕೂಡ ಮಾಡಬಹುದು. 

click me!