ಜೀವನದಲ್ಲಿ ಒಂದು ಬಾರಿಯಾದರೂ ನೋಡಲೇಬೇಕಾದ ವಿಶ್ವದ ಏಳು ಅದ್ಭುತಗಳು

First Published | Sep 20, 2022, 6:03 PM IST

ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯನ್ನು 1980 ರಲ್ಲಿ ಯುನೈಟೆಡ್ ನೇಷನ್ಸ್ ಟೂರಿಸಂ ಆರ್ಗನೈಸೇಷನ್ ಪ್ರಾರಂಭಿಸಿತು. ಸೆಪ್ಟೆಂಬರ್ 27 ಅನ್ನು ಪ್ರವಾಸೋದ್ಯಮ ದಿನವಾಗಿ ಆಚರಿಸಲು ಕಾರಣವೆಂದರೆ, 10 ವರ್ಷಗಳ ಹಿಂದೆ 1970 ರಲ್ಲಿ, ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯ ಕಾನೂನನ್ನು ಈ ದಿನದಂದು ಅಂಗೀಕರಿಸಲಾಯಿತು. ಜಗತ್ತಿನಲ್ಲಿ ಅನೇಕ ಪ್ರವಾಸಿ ಸ್ಥಳಗಳು, ಕಟ್ಟಡಗಳು ಮತ್ತು ವಿಶ್ವ ಪರಂಪರೆ ಇತ್ಯಾದಿಗಳಿವೆ, ಅವು ತಮ್ಮ ಐತಿಹಾಸಿಕತೆ, ಸೌಂದರ್ಯ ಮತ್ತು ಸಂಸ್ಕೃತಿಯನ್ನು ಹರಡುತ್ತಿವೆ. 

ವಿಶ್ವದ ವಿವಿಧ ದೇಶಗಳಲ್ಲಿರುವ ಏಳು ಅದ್ಭುತಗಳು ವಿಶ್ವವಿಖ್ಯಾತವಾಗಿವೆ. ವಿಶ್ವದ ಏಳು ಅದ್ಭುತಗಳಲ್ಲಿ ಭಾರತದ ತಾಜ್ ಮಹಲ್ ಕೂಡ ಸೇರಿದೆ. ಭಾರತೀಯರು ಇದರ ಬಗ್ಗೆ ಹೆಮ್ಮೆಪಡುತ್ತಾರೆ ಆದರೆ ಇತರ 6 ಅದ್ಭುತಗಳು ಎಲ್ಲಿವೆ? ಎಂದು ನಿಮಗೆ ತಿಳಿದಿದೆಯೇ? ವಿಶ್ವ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ, ಭಾರತದಿಂದ ಚೀನಾದವರೆಗೆ ಇರುವ ವಿಶ್ವದ ಏಳು ಅದ್ಭುತಗಳ ಬಗ್ಗೆ ತಿಳಿಯಿರಿ. ಪ್ರಪಂಚದ ಏಳು ಅದ್ಭುತಗಳ ಹೆಸರುಗಳು ಮತ್ತು ದೇಶಗಳನ್ನು ತಿಳಿದುಕೊಳ್ಳಿ.

ತಾಜ್ ಮಹಲ್, ಭಾರತ (Tajmahal India)
ವಿಶ್ವದ ಏಳು ಅದ್ಭುತಗಳಲ್ಲಿ ಒಂದು ಭಾರತದ ಉತ್ತರ ಪ್ರದೇಶದಲ್ಲಿದೆ. ಆಗ್ರಾ ನಗರದ ಯಮುನಾ ನದಿಯ ದಡದಲ್ಲಿರುವ ತಾಜ್ ಮಹಲ್ ಅನ್ನು ಅದ್ಭುತವೆಂದು ಘೋಷಿಸಲಾಗಿದೆ. ಮೊಘಲ್ ಚಕ್ರವರ್ತಿ ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ನ ನೆನಪಿಗಾಗಿ ಬಿಳಿ ಅಮೃತಶಿಲೆಯ ಕಲ್ಲಿನಿಂದ ತಾಜ್ ಮಹಲ್ ನಿರ್ಮಿಸಿದನು. ಪ್ರೀತಿಯ ಸಂಕೇತವಾದ ತಾಜ್ ಮಹಲ್ ಅನ್ನು 20,000 ಕುಶಲಕರ್ಮಿಗಳು ನಿರ್ಮಿಸಿದರು. ಅಂತಹ ರಚನೆಯನ್ನು ಮರುನಿರ್ಮಾಣ ಮಾಡಲು ಸಾಧ್ಯವಗಬಾರದು ಎಂಬ ಕಾರಣ ಕುಶಲಕರ್ಮಿಗಳ ಕೈಗಳನ್ನು ಕತ್ತರಿಸಲಾಯಿತು ಎಂದು ಹೇಳಲಾಗುತ್ತದೆ.

Tap to resize

ಚೀನಾದ ಮಹಾನ್ ಗೋಡೆ (Great wall of China)
ಚೀನಾದ ಮಹಾಗೋಡೆ ಚೀನಾದ ಏಳು ಅದ್ಭುತಗಳಲ್ಲಿ ಒಂದಾಗಿದೆ. ಇದನ್ನು ಚೀನಾದ ಮೊದಲ ಆಡಳಿತಗಾರ ಕ್ವಿನ್ ಶಿ ಹುವಾಂಗ್ ನಿರ್ಮಿಸಿದನು. ಇತಿಹಾಸದ ಪ್ರಕಾರ, ಸುಮಾರು 20 ವರ್ಷಗಳಲ್ಲಿ 21,196 ಕಿ.ಮೀ ಉದ್ದದ ಬೃಹತ್ ಗೋಡೆಯನ್ನು ನಿರ್ಮಿಸಲಾಗಿದೆ. ಈ ಗೋಡೆಯನ್ನು ಹುವಾಂಗ್ ತನ್ನ ಸಾಮ್ರಾಜ್ಯವನ್ನು ರಕ್ಷಿಸಲು ನಿರ್ಮಿಸಿದನು. ಚೀನಾದ ಮಹಾಗೋಡೆಯನ್ನು ಭೂಮಿಯ ಮೇಲಿನ ಅತಿ ಉದ್ದದ ಸ್ಮಶಾನ ಎಂದೂ ಕರೆಯಲಾಗುತ್ತದೆ. ಇದನ್ನು ನಿರ್ಮಿಸಲು ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸತ್ತರು ಎಂದು ಹೇಳಲಾಗುತ್ತದೆ.

ಕ್ರೈಸ್ಟ್ ದಿ ರಿಡೀಮರ್, ಬ್ರೆಜಿಲ್ (Christ the Redeemer, Brazil)
ಬ್ರೆಜಿಲ್ ನಲ್ಲಿ 125 ಅಡಿ ಉದ್ದದ ಕ್ರೈಸ್ಟ್ ದಿ ರಿಡೀಮರ್ ಇದೆ, ಇದನ್ನು ಹ್ಯಾಟರ್ ಡಾ ಸಿಲ್ವಾ ಕೋಸ್ಟಾ ನಿರ್ಮಿಸಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಇದನ್ನು ಬ್ರೆಜಿಲ್ ನಲ್ಲಿ ನಿರ್ಮಿಸಲಾಗಿಲ್ಲ, ಆದರೆ ಫ್ರಾನ್ಸ್ ನಲ್ಲಿ ನಿರ್ಮಿಸಲಾಗಿದೆ. ಪರ್ವತದ ತುದಿಯಲ್ಲಿರುವ ಈ ಪ್ರತಿಮೆಯು ಸಿಡಿಲಿನ ಹೊಡೆತಕ್ಕೂ ತುತ್ತಾಗುತ್ತೆ. ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಈ ವಿಗ್ರಹಕ್ಕೆ ವಿದ್ಯುತ್ ತಗುಲುತ್ತದೆ ಎಂದು ಹೇಳಲಾಗುತ್ತದೆ.

ಚಿಚೆನ್ ಇಟ್ಜಾ, ಮೆಕ್ಸಿಕೊ (Chichen Itza)
ಮೆಕ್ಸಿಕೋದ ಮಾಯನ್ ನಾಗರೀಕತೆಗೆ ಸಂಬಂಧಿಸಿದ ಮತ್ತೊಂದು ಐತಿಹಾಸಿಕ ಆಶ್ಚರ್ಯವೆಂದರೆ ಚಿಚೆನ್ ಇಟ್ಜಾ. ಮೆಕ್ಸಿಕೋದ ಈ ಅತ್ಯಂತ ಸಂರಕ್ಷಿತ ಪುರಾತತ್ವ ಸ್ಥಳದ ಇತಿಹಾಸವು 1200 ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾಗಿದೆ. ಚಿಚೆನ್ ಇಟ್ಜಾವನ್ನು ಕೊಲಂಬಿಯನ್ ಪೂರ್ವದ ಮಾಯಾ ನಾಗರೀಕತೆಯ ಜನರು 9 ಮತ್ತು 12 ನೇ ಶತಮಾನಗಳ ನಡುವೆ ನಿರ್ಮಿಸಿದರು ಎಂದು ಹೇಳಲಾಗುತ್ತೆ. ಇಲ್ಲಿ ಅನೇಕ ಪಿರಮಿಡ್ ಗಳು, ದೇವಾಲಯಗಳು, ಆಟದ ಮೈದಾನಗಳು ಮತ್ತು ಸ್ತಂಭಗಳನ್ನು ನಿರ್ಮಿಸಲಾಗಿದೆ. ಚಿಚೆನ್ ಇಟ್ಜಾದ ವಿಶೇಷವೆಂದರೆ ಅಸಾಮಾನ್ಯ ಶಬ್ದಗಳನ್ನು ಇಲ್ಲಿ ಕೇಳಲಾಗುತ್ತದೆ.

ಕೊಲಿಸಿಯಮ್, ಇಟಲಿ (Colosseum Italy)
ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಕೊಲಿಸಿಯಮ್ ಅನ್ನು ಇಟಲಿ ನಗರದಲ್ಲಿ ನಿರ್ಮಿಸಲಾಗಿದೆ. ಕೊಲಿಸಿಯಮ್ ಅನ್ನು ಕ್ರಿ.ಶ. 70 ರಿಂದ ಕ್ರಿ.ಶ. 82 ರವರೆಗೆ ಚಕ್ರವರ್ತಿ ಟೈಟಸ್ ವೆಸ್ಸಿಷಿಯನ್ ನಿರ್ಮಿಸಿದನು. ನಿರ್ಮಾಣವು ಸುಮಾರು ೯ ವರ್ಷಗಳನ್ನು ತೆಗೆದುಕೊಂಡಿತು. ರೋಮ್ ನ ಕೊಲಿಸಿಯಮ್ ವಿಶ್ವದ ಅತ್ಯಂತ ಪ್ರತಿಷ್ಠಿತ ಮತ್ತು ಪ್ರಾಚೀನ ಆಂಫಿಥಿಯೇಟರ್ ಎಂದು ಪರಿಗಣಿಸಲಾಗಿದೆ. ಈ ಆಂಫಿಥಿಯೇಟರ್ ಒಳಗೆ ಸುಮಾರು ನಾಲ್ಕು ಲಕ್ಷ ಜನರು ಕೊಲ್ಲಲ್ಪಟ್ಟರು ಎಂದು ಹೇಳಲಾಗುತ್ತದೆ.

ಮಾಚು ಪಿಚು, ಪೆರು (Machu Picchu, Peru)
ದಕ್ಷಿಣ ಅಮೆರಿಕಾದ ಪೆರು ದೇಶದಲ್ಲಿರುವ ಮಾಚು ಪಿಚು ಏಳು ಅದ್ಭುತಗಳಲ್ಲಿ ಒಂದಾಗಿದೆ. ಇಂಕಾ ನಾಗರಿಕತೆಗೆ ಸಂಬಂಧಿಸಿದ ಈ ಐತಿಹಾಸಿಕ ಸ್ಥಳವನ್ನು 'ಇಂಕಾಗಳ ಕಳೆದುಹೋದ ನಗರ' ಎಂದು ಕರೆಯಲಾಗುತ್ತೆ. ಮಾಚು ಪಿಚುವನ್ನು ಪೆರುವಿನ ಐತಿಹಾಸಿಕ ದೇವಾಲಯವೆಂದು ಪರಿಗಣಿಸಲಾಗಿದೆ. 1983 ರಲ್ಲಿ, ಯುನೆಸ್ಕೋ ಮಾಚು ಪಿಚ್ಚುಗೆ ವಿಶ್ವ ಪರಂಪರೆಯ ತಾಣದ ಸ್ಥಾನಮಾನ ಸಹ ನೀಡಿತು.

ಪೆಟ್ರಾ, ಜೋರ್ಡಾನ್ (Petra, Jordan)
ಜೋರ್ಡಾನ್ ನಲ್ಲಿ ಪೆಟ್ರಾ ಎಂಬ ಐತಿಹಾಸಿಕ ನಗರವಾಗಿದೆ, ಅದನ್ನು ಗುಲಾಬಿ ಬಣ್ಣದ ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಪೆಟ್ರಾವನ್ನು ಅದರ ಬಣ್ಣದಿಂದಾಗಿ ರೋಸ್ ಸಿಟಿ ಎಂದೂ ಕರೆಯಲಾಗುತ್ತದೆ. ಇದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿದೆ. ಅನೇಕ ಸಮಾಧಿಗಳು ಮತ್ತು ದೇವಾಲಯಗಳು ಪೆಟ್ರಾದಲ್ಲಿವೆ.

Latest Videos

click me!