ಅತಿಹೆಚ್ಚು Facebook ಬಳಸುವ ಟಾಪ್ 10 ದೇಶಗಳಿವು..! ಭಾರತಕ್ಕೆ ಎಷ್ಟನೇ ಸ್ಥಾನ?

First Published | Sep 23, 2023, 1:00 PM IST

ಬೆಂಗಳೂರು: ಮಾರ್ಕ್‌ ಜುಗರ್‌ಬರ್ಗ್‌ ಇಡೀ ಜಗತ್ತಿಗೆ ಪರಿಚಯಿಸಿದ ಫೇಸ್‌ಬುಕ್, ಇದೀಗ ಅತ್ಯಂತ ಜನಪ್ರಿಯ ಸೋಷಿಯಲ್ ಮೀಡಿಯಾವಾಗಿ ಬೆಳೆದುನಿಂತಿದೆ. ಇದೀಗ ಫೇಸ್‌ಬುಕ್ ಎಷ್ಟು ಜನಪ್ರಿಯವೆಂದರೆ ಆಡು ಮುಟ್ಟದ ಸೊಪ್ಪಿಲ್ಲ, ಫೇಸ್‌ಬುಕ್ ಯೂಸ್ ಮಾಡದ ಮಂದಿಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಫೇಸ್‌ಬುಕ್‌ ಫೇಮಸ್ ಆಗಿದೆ. ನಾವಿಂದು 2023ರಲ್ಲಿ ಅತಿಹೆಚ್ಚು ಫೇಸ್‌ಬುಕ್ ಯೂಸ್ ಮಾಡುವ ಟಾಪ್ 10 ದೇಶಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ.

1. ಭಾರತ: 314 ಮಿಲಿಯನ್

ಜಗತ್ತಿನಲ್ಲಿ ಅತಿಹೆಚ್ಚು ಫೇಸ್‌ಬುಕ್‌ ಬಳಸುವವರು ಇರುವುದು ನಮ್ಮ ಭಾರತದಲ್ಲಿ. ನಮ್ಮ ದೇಶದಲ್ಲಿ 31 ಕೋಟಿ 40 ಲಕ್ಷ ಮಂದಿ ಫೇಸ್‌ಬುಕ್ ಬಳಸುತ್ತಿದ್ದಾರೆ. ನಮ್ಮದೇಶದಲ್ಲಿ ಸ್ಮಾರ್ಟ್‌ ಫೋನ್ ಬಳಸುತ್ತಿದ್ದಾರೆ ಅಂದ್ರೆ ಅವರ ಮೊಬೈಲ್‌ನಲ್ಲಿ Facebook ಇದೇ ಅಂತಾನೆ ಅರ್ಥ ಅನ್ನುವಷ್ಟರ ಮಟ್ಟಿಗೆ ಎಫ್‌ಬಿ ಚಿರಪರಿಚಿತ ಅಪ್ಲೀಕೇಷನ್ ಆಗಿದೆ.
 

2. ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕ: 175 ಮಿಲಿಯನ್

ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿದಲ್ಲಿ 17 ಕೋಟಿ 50 ಲಕ್ಷ ಮಂದಿ ಫೇಸ್‌ಬುಕ್ ಬಳಸುತ್ತಾರೆ. ಈ ಮೂಲಕ ಯುಎಸ್‌ಎ ಫೇಸ್‌ಬುಕ್ ಬಳಕೆಯಲ್ಲಿ ಎರಡನೇ ಸ್ಥಾನದಲ್ಲಿದೆ.
 

Latest Videos


3. ಇಂಡೋನೇಷ್ಯಾ: 120 ಮಿಲಿಯನ್

ಇಂಡೋನೇಷ್ಯಾ ಒಂದು ದ್ವೀಪರಾಷ್ಟ್ರವಾಗಿದ್ದು, ಇದು ಸುಮಾರು 17 ಸಾವಿರ ದ್ವೀಪಗಳ ಒಕ್ಕೂಟವಾಗಿದೆ. ಇಂಡೋನೇಷ್ಯಾದಲ್ಲಿ 12 ಕೋಟಿ ಮಂದಿ ಫೇಸ್‌ಬುಕ್ ಸೋಷಿಯಲ್ ಮೀಡಿಯಾ ಬಳಕೆದಾರರಿದ್ದಾರೆ.
 

4. ಬ್ರೆಜಿಲ್: 109 ಮಿಲಿಯನ್

ವಿಸ್ತೀರ್ಣದಲ್ಲಿ ಜಗತ್ತಿನ 5ನೇ ಅತಿದೊಡ್ಡ ಹಾಗೂ ಜನಸಂಖ್ಯೆಯಲ್ಲಿ 7ನೇ ಅತಿದೊಡ್ಡ ದೇಶ ಎನಿಸಿಕೊಂಡಿರುವ ಬ್ರೆಜಿಲ್‌ನಲ್ಲಿ 10 ಕೋಟಿ 90 ಲಕ್ಷ ಜನ ಫೇಸ್‌ಬುಕ್ ಬಳಕೆದಾರರಿದ್ದಾರೆ. ಈ ಮೂಲಕ ಬ್ರೆಜಿಲ್ ಫೇಸ್‌ಬುಕ್ ಬಳಕೆಯಲ್ಲಿ ಜಗತ್ತಿನಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.
 

5. ಮೆಕ್ಸಿಕೋ: 83.75 ಮಿಲಿಯನ್

ಉತ್ತರ ಅಮೆರಿಕದ ದಕ್ಷಿಣ ಭಾಗದಲ್ಲಿರುವ ಮೆಕ್ಸಿಕೋ, ಜಗತ್ತಿನ 13ನೇ ದೊಡ್ಡ ದೇಶ ಎನಿಸಿಕೊಂಡಿದೆ. ಸುಮಾರು 13 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ 8 ಕೋಟಿ 30 ಲಕ್ಷದ 75 ಸಾವಿರ ಮಂದಿ ಫೇಸ್‌ಬುಕ್ ಬಳಸುತ್ತಿದ್ದಾರೆ.

6.ಫಿಲಿಫೈನ್ಸ್‌: 80.3 ಮಿಲಿಯನ್

ಫಿಲಿಫೈನ್ಸ್‌ ಒಂದು ದ್ವೀಪರಾಷ್ಟ್ರವಾಗಿದ್ದು, ಇಲ್ಲಿ ಏಳೂವರೆ ಸಾವಿರಕ್ಕೂ ಅಧಿಕ ದ್ವೀಪಗಳಿವೆ. ಫಿಲಿಫೈನ್ಸ್‌ನಲ್ಲಿ ಬರೋಬ್ಬರಿ 8 ಕೋಟಿ ಫೇಸ್‌ಬುಕ್‌ ಬಳಕೆದಾರರಿದ್ದಾರೆ.

7. ವಿಯೆಟ್ನಾಂ: 66.2 ಮಿಲಿಯನ್

ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಜಗತ್ತಿನ 15ನೇ ದೊಡ್ಡ ರಾಷ್ಟ್ರ ಎನಿಸಿಕೊಂಡಿರುವ ವಿಯೆಟ್ನಾಂನಲ್ಲಿ 6 ಕೋಟಿ 62 ಲಕ್ಷ ಮಂದಿ ಫೇಸ್‌ಬುಕ್ ಬಳಸುತ್ತಿದ್ದಾರೆ. ಈ ಮೂಲಕ ವಿಯೆಟ್ನಾಂ ಏಳನೇ ಸ್ಥಾನದಲ್ಲಿದೆ. 
 

8. ಥಾಯ್ಲೆಂಡ್: 48.1 ಮಿಲಿಯನ್

ಜಗತ್ತಿನ ಪ್ರವಾಸಿ ತಾಣಗಳಲ್ಲಿ ಒಂದು ಎನಿಸಿಕೊಂಡಿರುವ ಥಾಯ್ಲೆಂಡ್‌ನಲ್ಲಿ 4 ಕೋಟಿ 81 ಲಕ್ಷ ಮಂದಿ ಫೇಸ್‌ಬುಕ್ ಬಳಸುತ್ತಿದ್ದಾರೆ. ಈ ಮೂಲಕ ಥಾಯ್ಲೆಂಡ್ ಎಂಟನೇ ಸ್ಥಾನದಲ್ಲಿದೆ. 
 

9. ಬಾಂಗ್ಲಾದೇಶ: 43.25 ಮಿಲಿಯನ್

ನೆರೆಯ ಬಾಂಗ್ಲಾದೇಶದಲ್ಲಿ ಬರೋಬ್ಬರಿ 4 ಕೋಟಿ 3 ಲಕ್ಷದ 25 ಸಾವಿರ ಮಂದಿ ಫೇಸ್‌ಬುಕ್ ಬಳಸುತ್ತಿದ್ದಾರೆ. ಈ ಮೂಲಕ ಜಗತ್ತಿನ ಅತಿಹೆಚ್ಚು ಫೇಸ್‌ಬುಕ್ ಬಳಕೆದಾದರರ ಪಟ್ಟಿಯಲ್ಲಿ ಬಾಂಗ್ಲಾದೇಶ 9ನೇ ಸ್ಥಾನ ಪಡೆದಿದೆ.
 

10. ಈಜಿಪ್ಟ್:

ಜಗತ್ತಿನ 14ನೇ ಅತಿದೊಡ್ಡ ಜನಸಂಖ್ಯೆ ಹೊಂದಿದ ದೇಶ ಎನಿಸಿಕೊಂಡಿರುವ ಈಜಿಪ್ಟ್‌ನಲ್ಲಿ 4 ಕೋಟಿ 20 ಲಕ್ಷ ಮಂದಿ ಫೇಸ್‌ಬುಕ್‌ ಬಳಸುತ್ತಿದ್ದಾರೆ. ಈ ಮೂಲಕ ಈಜಿಪ್ಟ್ 10ನೇ ಸ್ಥಾನ ಪಡೆದುಕೊಂಡಿದೆ.

click me!