ಮೆಕ್ಸಿಕೋದಲ್ಲಿ ಪತ್ತೆಯಾದ ಏಲಿಯೆನ್ಸ್‌ ಅವಶೇಷದ ನಿಜರೂಪ ಬಹಿರಂಗಪಡಿಸಿದ ಎಲಾನ್ ಮಸ್ಕ್‌!

First Published | Sep 18, 2023, 4:24 PM IST

ಮೆಕ್ಸಿಕೋ ಪತ್ರಕರ್ತರೊಬ್ಬರು ದೇಶದ ಸಂಸತ್ತಿನ ಮುಂದೆ ಉದ್ದನೆಯ ತಲೆಗಳು ಮತ್ತು ಪ್ರತಿ ಕೈಯಲ್ಲಿ ಮೂರು ಬೆರಳುಗಳನ್ನು ಹೊಂದಿರುವ ಎರಡು ಸಣ್ಣ ಮೃತದೇಹಗಳನ್ನು ಏಲಿಯೆನ್ಸ್‌ ಎಂದು ಕೆಲ ದಿನಗಳ ಹಿಂದೆ ಪ್ರಸ್ತುತಪಡಿಸಿದ್ದರು.

ಮೆಕ್ಸಿಕೋ ಪತ್ರಕರ್ತರೊಬ್ಬರು ದೇಶದ ಸಂಸತ್ತಿನ ಮುಂದೆ ಉದ್ದನೆಯ ತಲೆಗಳು ಮತ್ತು ಪ್ರತಿ ಕೈಯಲ್ಲಿ ಮೂರು ಬೆರಳುಗಳನ್ನು ಹೊಂದಿರುವ ಎರಡು ಸಣ್ಣ ಮೃತದೇಹಗಳನ್ನು ಕೆಲ ದಿನಗಳ ಹಿಂದೆ ಪ್ರಸ್ತುತಪಡಿಸಿದ್ದರು. ಅಂದಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ. 

ಪತ್ರಕರ್ತ ಮತ್ತು ದೀರ್ಘಕಾಲದ UFO ಉತ್ಸಾಹಿ ಜೇಮೀ ಮೌಸ್ಸನ್ ಅವರು ಈ ಮೃತದೇಹಗಳು 1,000 ವರ್ಷಗಳಷ್ಟು ಹಳೆಯವು ಮತ್ತು ಯಾವುದೇ ಭೂಮಿಯಲ್ಲಿರೋ ಮನುಷ್ಯರ ಅಥವಾ ಪ್ರಾಣಿಗಳ ಜಾತಿಗಳಿಗೆ ಸಂಬಂಧಿಸಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ತಜ್ಞರು ಅವರ ಹೇಳಿಕೆಯನ್ನು ನಂಬಲು ನಿರಾಕರಿಸಿದ್ದರು. ಅಲ್ಲದೆ, ಈಗ ಏಲಿಯೆನ್ಸ್‌ನ ರಕಷಿತ ಮೃತದೇಹಗಳ ಅಸಲಿರೂಪ ಬಹಿರಂಗಗೊಂಡಿದೆ. ಎಕ್ಸ್‌ ಹಾಗೂ ಟೆಸ್ಲಾ ಅಧ್ಯಕ್ಷ ಎಲಾನ್‌ ಮಸ್ಕ್‌ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

Latest Videos


ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು X (ಹಿಂದೆ Twitter) ನ ಹೊಸ ಮಾಲೀಕರು ಈ ವಿಷಯದ ಬಗ್ಗೆ ತಮ್ಮ ಮೌನ ಮುರಿದಿದ್ದು, ಇದನ್ನು ಕೇಕ್‌ ಎಂದಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಏಲಿಯೆನ್ಸ್‌ನದ್ದು ಎನ್ನಲಾದ ದೇಹವನ್ನು ಕತ್ತರಿಸಿದ ವಿಡಿಯೋ ಬಹಿರಂಗಗೊಂಡಿದ್ದು, ಅದರ ಕೆಳಗೆ ಸ್ಪಾಂಜ್ ಕೇಕ್ ಇರುವುದನ್ನು ತೋರಿಸುತ್ತದೆ. ಈ ಹಿನ್ನೆಲೆ ಕೇಕ್‌ನಿಂದಲೇ ಏಲಿಯೆನ್ಸ್‌ ರಚಿಸಲಾಗಿದೆ ಎನ್ನುವಂತಿದೆ ಈ ವಿಡಿಯೋ.

ವಿಡಿಯೋ ನೋಡಲು ಲಿಂಕ್ ನೋಡಿ..

https://twitter.com/Rainmaker1973/status/1702722095770194057?ref_src=twsrc%5Etfw%7Ctwcamp%5Etweetembed%7Ctwterm%5E1702825810728513691%7Ctwgr%5Eb6f364e68f603d7e6f16e848221f55f717f0fd13%7Ctwcon%5Es2_&ref_url=https%3A%2F%2Fwww.ndtv.com%2Fworld-news%2Fon-mexicos-alien-mummies-elon-musks-response-it-was-cake-all-along-4400241

"ಬ್ರೇಕಿಂಗ್ ನ್ಯೂಸ್: 'ಏಲಿಯನ್' ಅನ್ನು ಕೇಕ್ ಎಂದು ಬಹಿರಂಗಪಡಿಸಲಾಗಿದೆ. ಶಂಕಿತ ಏಲಿಯನ್ ಶವವು ಕೇಕ್ ಆಗಿ ಹೊರಹೊಮ್ಮಿದೆ" ಎಂದು ಈ ಸ್ಪೂಫ್ ವಿಡಿಯೋದಲ್ಲಿ ಶೀರ್ಷಿಕೆಯೂ ಇದೆ. ಈ ವಿಡಿಯೋಗೆ ಎಲಾನ್‌ ಮಸ್ಕ್‌ ಪ್ರತಿಕ್ರಿಯೆ ನೀಡಿದ್ದು, "ಇದು ಎಲ್ಲಾ ಕೇಕ್ ಆಗಿತ್ತು’’ ಎಂದು ಪೋಸ್ಟ್‌ ಮಾಡಿದ್ದಾರೆ. 

ಆದರೆ, ಆ ವಿಡಿಯೋ ಬೇರೆ, ಮೆಕ್ಸಿಕೋದಲ್ಲಿ ತೋರಿಸಿದ ದೇಹಗಳ ಆಕೃತಿಯು ಬೇರೆ ಎಂದೂ ಹೇಳಲಾಗುತ್ತಿದೆ.

ಹಾಗೆ, ಇತರ X ಬಳಕೆದಾರರು ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ್ದು, ಅವರಲ್ಲಿ ಒಬ್ಬರು "ನನಗೆ ಅದು ತಿಳಿದಿತ್ತು, ಆದರೆ ಆಶ್ಚರ್ಯವನ್ನು ಹಾಳುಮಾಡಲು ಬಯಸಲಿಲ್ಲ’’ ಎಂದು ಬರೆದಿದ್ದಾರೆ. ಅಸಾಮಾನ್ಯವಾಗಿ ಕಾಣುವ ಜೀವಿಗಳ ಫೋಟೋಗಳು ಮತ್ತು ವಿಡಿಯೋಗಳ ಬಗ್ಗೆ ಲಕ್ಷಾಂತರ ಜನರು ತಲೆ ಕೆರೆದುಕೊಂಡಿದ್ದರು.
 

ಮೆಕ್ಸಿಕೋದ ಸ್ವಾಯತ್ತ ರಾಷ್ಟ್ರೀಯ ವಿಶ್ವವಿದ್ಯಾನಿಲಯದಲ್ಲಿ (UNAM) ಮಾದರಿಗಳನ್ನು ಅಧ್ಯಯನ ಮಾಡಲಾಗಿದೆ ಎಂದು ಜೇಮೀ ಮೌಸ್ಸನ್ ಹೇಳಿಕೊಂಡಿದ್ದರು ಮತ್ತು ವಿಜ್ಞಾನಿಗಳು ರೇಡಿಯೊಕಾರ್ಬನ್ ಡೇಟಿಂಗ್ ಬಳಸಿ DNA ಪುರಾವೆಗಳನ್ನು ಪರಿಶೀಲಿಸಿದ್ದಾರೆ ಎಂದಿದ್ದರು. 

ಅವುಗಳಲ್ಲಿ ಒಂದು ಹೆಣ್ಣು ಎಂದು  ಜೇಮೀ ಮೌಸ್ಸನ್ ವಿವರಿಸಿದ್ದು, ಒಳಗೆ ಮೊಟ್ಟೆಗಳನ್ನು ಹೊಂದಿರುವುದನ್ನು ಕಂಡುಕೊಳ್ಳಲಾಗಿದೆ ಎಂದಿದ್ದರು. ಈ ಮಧ್ಯೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಇಂತಹ ಮಾದರಿಗಳನ್ನು ವಿಶ್ವದ ವೈಜ್ಞಾನಿಕ ಸಮುದಾಯಕ್ಕೆ ಪರೀಕ್ಷೆಗೆ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿತ್ತು.

click me!