ರಿಲಯನ್ಸ್ ಜಿಯೋ ತನ್ನ ಫೈಬರ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಹೊಸ ಆ್ಯಡ್-ಆನ್ ಪ್ರಿಪೇಯ್ಡ್ ವೋಚರ್ಸ್‌ಗಳನ್ನು ಬಿಡುಗಡೆಮಾಡಿದೆ.
ರೂ.699 ರಿಂದ ಆರಂಭವಾಗುವ ಜಿಯೋ ಫೈಬರ್ ವಿವಿಧ ಪ್ಲಾನ್‌ಗಳು 100Mbpsವರೆಗೆ ಡೇಟಾ ಸ್ಪೀಡ್ ನೀಡುತ್ತಿದೆ. ಈ ಪ್ಲಾನ್‌ಗಳಲ್ಲಿ ಡೇಟಾ ಮುಗಿದರೆ ಆ್ಯಡ್-ಆನ್ ವೋಚರ್ಸ್ ಬಳಸಿ ಹೆಚ್ಚುವರಿ ಡೇಟಾ ಪಡೆಯಬಹುದು.
ಈಗ ಬಿಡುಗಡೆ ಮಾಡಿರುವ ಪ್ಲಾನ್, ಈವರೆಗಿನ ಅತೀ ಅಗ್ಗದ ಪ್ಲಾನ್ ಆಗಿದ್ದು, ಹೊಸ ಪ್ಲಾನ್ ತಿಂಗಳಿಗೆ ಬರೇ ರೂ.351ಕ್ಕೆ ಲಭ್ಯವಿದೆ. ವಾರದ ಪ್ಲಾನ್ ಕೂಡಾ ಲಭ್ಯವಿದ್ದು ರೂ.199ಕ್ಕೆ ಸಿಗಲಿದೆ.
ರೂ. 351ರ ಪ್ಲಾನ್‌ನಲ್ಲಿ ತಿಂಗಳಿಗೆ 10Mbps ಸ್ಪೀಡ್ ಜೊತೆ 50 GB ಡೇಟಾ ಸಿಗುತ್ತೆ. ಈ ಲಿಮಿಟ್ ಮುಗಿದ ಬಳಿಕ ಸ್ಪೀಡ್ 1Mbpsಕ್ಕಿಳಿಯುತ್ತೆ, ಆದರೆ ಅನ್ಲಿಮಿಟೆಡ್ ಡೇಟಾ ಸಿಗುತ್ತೆ.
ಇದರ ಜತೆಗೆ ಉಚಿತ ಸ್ಥಳೀಯ, ಎಸ್‌ಟಿಡಿ ಮತ್ತು ಟೀವಿ ವಿಡಿಯೋ ಕರೆಗಳು ಕೂಡಾ ಇದೆ! ಈ ಪ್ಲಾನನ್ನು 3 ತಿಂಗಳು, 6 ತಿಂಗಳು, 1 ವರ್ಷ ಮತ್ತು 2 ವರ್ಷ ಅವಧಿಗೆ ಒಟ್ಟಿಗೆ ಪಡೆಯಬಹುದು.
ರೂ.199 ಸಾಪ್ತಾಹಿಕ ಪ್ಲಾನ್‌ನಲ್ಲಿ ಗ್ರಾಹಕರಿಗೆ 100Mbps ಸ್ಪೀಡ್ ಅನ್ಲಿಮಿಟೆಡ್ ಡೇಟಾ ಸೌಲಭ್ಯ ಇದೆ. ಇದರಲ್ಲೂ ಉಚಿತ ಸ್ಥಳೀಯ, ಎಸ್‌ಟಿಡಿ ಮತ್ತು ಟೀವಿ ವಿಡಿಯೋ ಕರೆಗಳು ಇದೆ.
ಮೇಲೆ ಹೇಳಲಾದ ಪ್ಲಾನ್‌ಗಳಿಗೆ GST ಪ್ರತ್ಯೇಕವಾಗಿ ಪಾವತಿಸಬೇಕು. ಆಗ ತಿಂಗಳ ಪ್ಲಾನ್‌ಗೆ ರೂ.415 ಮತ್ತು ವಾರದ ಪ್ಲಾನ್‌ಗೆ ರೂ. 235 ಆಗುತ್ತೆ.