Honor 600 Smart 5G: ಬಡವರ ಕೈಗೆ ಬರಲಿದೆ ದೈತ್ಯ ಬ್ಯಾಟರಿ ಮೊಬೈಲ್, ಒಮ್ಮೆ ಚಾರ್ಜ್ ಮಾಡಿದರೆ 4 ದಿನ ಬಾಳಿಕೆ!

Published : Jun 19, 2026, 02:48 PM IST

Honor ಕಂಪನಿಯು ತನ್ನ 600 ಸೀರೀಸ್‌ನಲ್ಲಿ Honor 600 Smart 5G ಎಂಬ ಹೊಸ ಫೋನ್‌ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಫೋನ್ 7,700mAh ಸಾಮರ್ಥ್ಯದ ದೈತ್ಯ ಬ್ಯಾಟರಿ, 50MP ಕ್ಯಾಮೆರಾ, ಮತ್ತು Snapdragon 4 Gen 4 ಪ್ರೊಸೆಸರ್‌ನಂತಹ ಪ್ರಮುಖ ಫೀಚರ್‌ಗಳನ್ನು ಹೊಂದಿದೆ.

PREV
17

ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ Honor ಕಂಪನಿ ಹೊಸ ಮಾದರಿಯ ಫೋನ್ ಒಂದನ್ನು ಪರಿಚಯಿಸುತ್ತಿದೆ. ಕಂಪನಿಯ 600 ಸೀರೀಸ್‌ನ ಹೊಸ ಮಾಡೆಲ್ ಆದ Honor 600 Smart 5G ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೊಸ ವರದಿಗಳು ತಿಳಿಸಿವೆ.

27

ಫ್ರಾನ್ಸ್‌ನಲ್ಲಿರುವ Honorನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಹ್ಯಾಂಡ್‌ಸೆಟ್ 'ಶೀಘ್ರದಲ್ಲೇ ಬರಲಿದೆ' (Coming Soon) ಎಂಬ ಟ್ಯಾಗ್‌ನೊಂದಿಗೆ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ, ಒಂದು ಟೆಲಿಕಾಂ ರೀಟೇಲರ್ ವೆಬ್‌ಸೈಟ್‌ನಲ್ಲಿ ಈ ಫೋನ್‌ನ ಬೆಲೆ ಮತ್ತು ಪ್ರಮುಖ ಫೀಚರ್‌ಗಳು ಈಗಾಗಲೇ ಲೀಕ್ ಆಗಿವೆ.

37

ವರದಿಗಳ ಪ್ರಕಾರ, Honor 600 Smart 5G ಫೋನ್ 7,700mAh ಸಾಮರ್ಥ್ಯದ ದೈತ್ಯ ಬ್ಯಾಟರಿಯೊಂದಿಗೆ ಬರಲಿದೆ. ಈ ಫೋನ್ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ, ಬರೋಬ್ಬರಿ 93 ಗಂಟೆಗಳವರೆಗೆ ಬ್ಯಾಟರಿ ಲೈಫ್ ಸಿಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಷ್ಟೇ ಅಲ್ಲ, ನಿರಂತರವಾಗಿ 28 ಗಂಟೆಗಳ ಕಾಲ ವಿಡಿಯೋ ಸ್ಟ್ರೀಮಿಂಗ್ ಮಾಡಬಹುದು ಅಂತಾನೂ ಕಂಪನಿ ಸ್ಪಷ್ಟಪಡಿಸಿದೆ.

47

ಟರ್ಬೋ ತಂತ್ರಜ್ಞಾನ ಬಳಸಿ RAM ಸಾಮರ್ಥ್ಯ ಹೆಚ್ಚಳ

ಈ ಫೋನ್‌ನಲ್ಲಿ 6.87 ಇಂಚಿನ HD+ LCD ಡಿಸ್‌ಪ್ಲೇ ಇದೆ. ಇದು 1,592×720 ಪಿಕ್ಸೆಲ್ ರೆಸಲ್ಯೂಶನ್ ಮತ್ತು 1,020 ನಿಟ್ಸ್‌ವರೆಗೆ ಬ್ರೈಟ್‌ನೆಸ್ ನೀಡುತ್ತದೆ. ಪ್ರೊಸೆಸರ್ ವಿಚಾರಕ್ಕೆ ಬಂದರೆ, Qualcommನ Snapdragon 4 Gen 4 ಚಿಪ್‌ಸೆಟ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. 4GB RAM ಮತ್ತು 128GB ಸ್ಟೋರೇಜ್ ಆಯ್ಕೆ ಲಭ್ಯವಿರಲಿದೆ. Honorನ RAM ಟರ್ಬೋ ತಂತ್ರಜ್ಞಾನ ಬಳಸಿ RAM ಸಾಮರ್ಥ್ಯವನ್ನು 12GB ವರೆಗೆ ಹೆಚ್ಚಿಸಬಹುದು ಎಂದು ವರದಿಗಳು ಹೇಳಿವೆ.

57

ಕ್ಯಾಮೆರಾ ವಿಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಸೆನ್ಸಾರ್ ಇದೆ. ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP64 ರೇಟಿಂಗ್ ಕೂಡ ಈ ಫೋನ್‌ಗೆ ಇದೆ. ಜೊತೆಗೆ, SGS ಪ್ರೀಮಿಯಂ ಡ್ರಾಪ್ ರೆಸಿಸ್ಟೆನ್ಸ್ ಪ್ರಮಾಣಪತ್ರವನ್ನೂ ಪಡೆದಿರುವುದರಿಂದ, ದಿನನಿತ್ಯದ ಬಳಕೆಯಲ್ಲಿ ಹೆಚ್ಚು ಸುರಕ್ಷಿತವಾಗಿರುತ್ತದೆ ಎಂದು ಕಂಪನಿ ತಿಳಿಸಿದೆ.

67

Honor 600 Smart 5G ಫೋನ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಾಗಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಸೇವೆಗಳನ್ನು ವೇಗವಾಗಿ ಬಳಸಲು ಫೋನ್‌ನಲ್ಲಿ ವಿಶೇಷ AI ಬಟನ್ ನೀಡಲಾಗಿದೆ. ಉತ್ತಮ ಸೌಂಡ್ ಅನುಭವಕ್ಕಾಗಿ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳನ್ನೂ ಅಳವಡಿಸಲಾಗಿದೆ.

77

ಫ್ರಾನ್ಸ್‌ನ ಟೆಲಿಕಾಂ ಆಪರೇಟರ್ SFR ಲಿಸ್ಟಿಂಗ್ ಪ್ರಕಾರ, 4GB RAM + 128GB ಸ್ಟೋರೇಜ್ ಆವೃತ್ತಿಯ ಬೆಲೆ 219 ಯುರೋ. ಅಂದರೆ, ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ಸುಮಾರು 23,000 ರೂ. ಆಗಬಹುದು. Honor ಇನ್ನೂ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆದರೂ, ಈ ಹೊಸ ಸ್ಮಾರ್ಟ್‌ಫೋನ್ ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಟೆಕ್ ಜಗತ್ತು ನಿರೀಕ್ಷಿಸುತ್ತಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories