ಐಫೋನ್ 18 ಸೀರಿಸ್ ಬಿಡುಗಡೆಗೆ ಹಲವರು ಕಾಯುತ್ತಿದ್ದಾರೆ. ಆದರೆ ಐಫೋನ್ ಖರೀದಿಸಲು ಬಯಸುವ ಗ್ರಾಹಕರು ಈಗಲೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕಾರಣ ಬೆಲೆ ವಿಚಾರದಲ್ಲಿ ಟಿಮ್ ಕುಕ್ ಮಹತ್ವದ ಸೂಚನೆ ನೀಡಿದ್ದಾರೆ.
ಆ್ಯಪಲ್ ಐಫೋನ್ ಭಾರತ ಸೇರಿದಂತೆ ವಿಶ್ವದಲ್ಲೇ ಭಾರಿ ಬೇಡಿಕೆಯ ಫೋನ್.ಐಫೋನ್ 18 ಸೀರಿಸ್ ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಆಗಲಿದೆ. ಹೊಸ ಅಪ್‌ಡೇಟೆಡ್ ಫೀಚರ್ ಐಫೋನ್ 18 ಖರೀದಿಸಲು ಸಜ್ಜಾಗಿರುವ ಗ್ರಾಹಕರಿಗೆ ಸಿಇಒ ಟಿಮ್ ಕುಕ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
25
ಟಿಮ್ ಕುಕ್ ಹೇಳಿದ್ದೇನು?
ಮುಂದೆ ಬಿಡುಗಡೆಯಾಗುವ ಐಫೋನ್ ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಲಿದೆ ಎಂದು ಟಿಮ್ ಕುಕ್ ಹೇಳಿದ್ದಾರೆ. ಹೌದು, ಐಫೋನ್ ಬೆಲೆ ಭಾರಿ ಏರಿಕೆಯಾಗಲಿದೆ ಎಂದು ಟಿಮ್ ಕುಕ್ ಹೇಳಿದ್ದಾರೆ. ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದಿದ್ದಾರೆ. ಮುಂಬರುವ ಐಫೋನ್ 18 ಬೆಲೆ ಏರಿಕೆಯಾಗಲಿದೆ.
35
ಶೇಕಡಾ 20ರಷ್ಟು ಬೆಲೆ ಏರಿಕೆ
ಐಫೋನ್ ಬೆಲೆಯಲ್ಲಿ ಗರಿಷ್ಠ ಶೇಕಡಾ 20ರಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ. ಭಾರತ ಸೇರಿದಂತೆ ವಿಶ್ವದೆಲ್ಲಡೆ ಬೆಲೆ ಏರಿಕೆಯಾಗಲಿದೆ ಎಂದಿದ್ದಾರೆ. ಇದರಿಂದ ಐಫೋನ್ ಬೆಲೆ ದುಬಾರಿಯಾಗಲಿದೆ. ಚಿಪ್ ಮಾತ್ರವಲ್ಲ ಮಾರುಕಟ್ಟೆ ಪರಿಸ್ಥಿತಿಗೆ ಆಧಾರದಲ್ಲಿ ನಿಖರ ಬೆಲೆ ಗೊತ್ತಾಗಲಿದೆ.
ಐಫೋನ್ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಪ್ರಮುಖವಾಗಿ ಚಿಪ್ ಬೆಲೆಯಲ್ಲಿ ಆಗಿರುವ ಭಾರಿ ಏರಿಕೆಯಿಂದ ಅನಿವಾರ್ಯವಾಗಿ ಐಫೋನ್ ಬೆಲೆ ಏರಿಕೆ ಮಾಡಬೇಕಾಗಿದೆ. ಹೀಗಾಗಿ ಐಫೋನ್ 18 ಬೆಲೆ ಏರಿಕೆಯಾಗಲಿದೆ ಎಂದು ಟಿಮ್ ಕುಕ್ ಹೇಳಿದ್ದಾರೆ. ಒಟ್ಟಾರೆ ಐಫೋನ್ ಬೆಲೆಯಲ್ಲಿ ಏರಿಕೆಯಾಗುವುದು ಖಚಿತ ಎಂದು ಕುಕ್ ಹೇಳಿದ್ದಾರೆ.
55
ಯುದ್ಧದಿಂದ ಸಪ್ಲೈ ಚೈನ್ ಸಮಸ್ಯೆ
ಇರಾನ್ ಯುದ್ಧ ಕಾರಣದಿಂದ ಹೀಲಿಯಂ ಸಪ್ಲೈ ಕೊರತೆ ಎದುರಾಗಿದೆ. ಹಲವು ಸಕರುಗಳು ಪೂರೈಕೆಯಾಗದೆ ಸಮಸ್ಯೆಯಾಗಿದೆ. ಹೀಗಾಗಿ ಬೇರೆಯೆಡೆಯಿಂದ ದುಬಾರಿ ಮೊತ್ತದಲ್ಲಿ ಆಮದು ಮಾಡಿಕೊಂಡಿದ್ದೇವೆ. ಸದ್ಯ ಯುದ್ಧ ಒಪ್ಪಂದದ ಮೂಲಕ ಬಗೆ ಹರಿದರೂ ಸಪ್ಲೈ ಚೈನ್ ಸಮಸ್ಯೆ ಸದ್ಯಕ್ಕೆ ಬಗೆಹರಿಯುವುದಿಲ್ಲ. ಸಮಯ ತೆಗೆದುಕೊಳ್ಳಲಿದೆ.ಇತ್ತ ಉತ್ಪಾದನಾ ವೆಚ್ಚದಿಂದ ಐಫೋನ್ ಬೆಲೆಯಲ್ಲಿ ಏರಿಕೆಯಾಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.