BSNLನಿಂದ ಕ್ರಾಂತಿಕಾರಿ ಮೊಬೈಲ್ ಆವಿಷ್ಕಾರ; ನೆಟ್‌ವರ್ಕ್‌ ಬೇಡವೇ ಬೇಡ, ಬೆಲೆ ಮಾತ್ರ 1.34 ಲಕ್ಷ!

Published : Jul 09, 2026, 03:44 PM IST

BSNL ತನ್ನ ಮಹತ್ವಾಕಾಂಕ್ಷೆಯ ಸ್ಯಾಟಲೈಟ್ ಫೋನ್ ಲಾಂಚ್ ಮಾಡಿದೆ. ಬೆಲೆ ಬರೋಬ್ಬರಿ 1.34 ಲಕ್ಷ ರೂಪಾಯಿ ಆಗಿದೆ. ಹಾಗಂತ ಈ ಫೋನ್ ಎಲ್ಲರೂ ಖರೀದಿಸುವಂತಿಲ್ಲ. ಒಂದು ವೇಳೆ ಖರೀದಿಸಿದ್ರೂ ಅದಕ್ಕೆ ಅದರದ್ದೇ ಆದ ನೀತಿ, ನಿಯಮಗಳು ಇವೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ. 

PREV
15
ಸಾಮಾನ್ಯ ಫೋನ್‌ಗಳಿಗಿಂತ ಭಿನ್ನ

ನೀವು ಕಾಡು, ಬೆಟ್ಟ ಅಥವಾ ಮೊಬೈಲ್ ನೆಟ್‌ವರ್ಕ್ ಇಲ್ಲದ ಕುಗ್ರಾಮದಲ್ಲಿದ್ದೀರಾ? ಅಲ್ಲಿ ಯಾರಿಗಾದರೂ ತುರ್ತು ಕರೆ ಮಾಡಬೇಕೆಂದರೆ ಸಾಧ್ಯವಿಲ್ಲವೇ? ಈ ಸಮಸ್ಯೆಗೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ (BSNL) ಪರಿಹಾರ ಕಂಡುಕೊಂಡಿದೆ. ಭಾರತದಲ್ಲಿ ಬಿಎಸ್ಎನ್ಎಲ್ ಹೊಸ ಸ್ಯಾಟಲೈಟ್ ಫೋನ್ (Satellite Phone) ಪರಿಚಯಿಸಿದೆ. ಇದರ ಬೆಲೆ ಮತ್ತು ಫೀಚರ್‌ಗಳು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿವೆ.

ಬೆಲೆ ಎಷ್ಟು?

ಈ ಸ್ಯಾಟಲೈಟ್ ಫೋನ್ ಬೆಲೆಯನ್ನು ಬಿಎಸ್ಎನ್ಎಲ್ 1,34,166 ರೂಪಾಯಿ (ತೆರಿಗೆ ಸೇರಿದಂತೆ) ಎಂದು ನಿಗದಿಪಡಿಸಿದೆ. ಇದು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಂತೆ ಅಗ್ಗವಾಗಿಲ್ಲ, ಏಕೆಂದರೆ ಇದು ವಿಶೇಷ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ.

25
ಹೇಗೆ ಕೆಲಸ ಮಾಡುತ್ತದೆ?

ಸಾಮಾನ್ಯ ಫೋನ್‌ಗಳು ನಮ್ಮ ಹತ್ತಿರದ ಮೊಬೈಲ್ ಟವರ್‌ಗಳಿಂದ ಸಿಗ್ನಲ್ ಪಡೆಯುತ್ತವೆ. ಈ ಸ್ಯಾಟಲೈಟ್ ಫೋನ್ ಯಾವುದೇ ಟವರ್‌ಗಳ ಮೇಲೆ ಅವಲಂಬಿತವಾಗಿಲ್ಲ. ಇದು ಭೂಮಿಯ ಸುತ್ತ ಸುತ್ತುತ್ತಿರುವ ಉಪಗ್ರಹಗಳ (Satellites) ಮೂಲಕ ನೇರವಾಗಿ ಸಂಪರ್ಕ ಸಾಧಿಸುತ್ತದೆ. ಇನ್ಮಾರ್ಸಾಟ್ (Inmarsat) ನಂತಹ ಜಾಗತಿಕ ಸ್ಯಾಟಲೈಟ್ ನೆಟ್‌ವರ್ಕ್ ಕಂಪನಿಗಳ ಸಹಯೋಗದೊಂದಿಗೆ ಈ ಸೇವೆಯನ್ನು ನೀಡಲಾಗುತ್ತಿದೆ.

35
ಈ ಫೋನಿನ ವಿಶೇಷತೆಗಳು
  • ಮೊಬೈಲ್ ಸಿಗ್ನಲ್ ಇಲ್ಲದ ಪ್ರದೇಶಗಳಲ್ಲೂ ವಾಯ್ಸ್ ಕರೆ ಮಾಡಬಹುದು.
  • ಸಂಕಷ್ಟದ ಸಮಯದಲ್ಲಿ ತುರ್ತು ನೆರವು ಪಡೆಯಲು ಎಸ್‌ಒಎಸ್ ಬಟನ್ ನೀಡಲಾಗಿದೆ
  • ಚಾರ್ಜಿಂಗ್ ವ್ಯವಸ್ಥೆ ಇಲ್ಲದ ಕಡೆಗಳಲ್ಲೂ ದೀರ್ಘಕಾಲ ಬಳಸಲು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ
  • ಕಠಿಣ ವಾತಾವರಣ, ಮಳೆ ಅಥವಾ ಧೂಳಿನಲ್ಲೂ ಕೆಲಸ ಮಾಡುವಂತೆ ವಿನ್ಯಾಸ
45
ಯಾರು ಈ ಫೋನ್ ಖರೀದಿಸಬಹುದು?

ಬಿಎಸ್ಎನ್ಎಲ್ ಈ ಫೋನ್ ಅನ್ನು ಸಾಮಾನ್ಯ ಬಳಕೆದಾರರಿಗಿಂತ ಹೆಚ್ಚಾಗಿ ಗಂಭೀರ ಕೆಲಸಗಳಲ್ಲಿ ತೊಡಗಿರುವವರಿಗಾಗಿ ಬಿಡುಗಡೆ ಮಾಡಿದೆ.

  • ಗಡಿ ಪ್ರದೇಶಗಳಲ್ಲಿ ಕೆಲಸ ಮಾಡುವ ಸೈನಿಕರು
  • ಪ್ರವಾಹ ಅಥವಾ ಭೂಕಂಪದ ಸಮಯದಲ್ಲಿ ನೆಟ್‌ವರ್ಕ್ ಕಡಿತಗೊಂಡಾಗ
  • ಕಾಡು ಅಥವಾ ಸಮುದ್ರದ ಮಧ್ಯೆ ಕೆಲಸ ಮಾಡುವವರು
  • ಹಿಮಾಲಯದಂತಹ ದುರ್ಗಮ ಪ್ರದೇಶಗಳಿಗೆ ಹೋಗುವ ಪ್ರವಾಸಿಗರು
55
ಖರೀದಿಸಲು ರೂಲ್ಸ್..?

ಯಾರು ಬೇಕಾದರೂ ಸುಮ್ಮನೆ ಇದನ್ನು ಖರೀದಿಸಲು ಸಾಧ್ಯವಿಲ್ಲ. ಇದನ್ನು ಖರೀದಿಸುವ ಮೊದಲು ಕೇಂದ್ರ ದೂರಸಂಪರ್ಕ ಇಲಾಖೆಯಿಂದ (DoT) ಕಡ್ಡಾಯವಾಗಿ ಪರವಾನಗಿ ಅಥವಾ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿಯಿಲ್ಲದೆ ಸ್ಯಾಟಲೈಟ್ ಫೋನ್ ಹೊಂದುವುದು ಅಥವಾ ಬಳಸುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories