ಬೆಂಗಳೂರಲ್ಲೊಂದು ವಿಚಿತ್ರ ಘಟನೆ: ತನ್ನದಲ್ಲದ ತಪ್ಪಿಗೆ ಆಸ್ಪತ್ರೆ ಸೇರಿದ ಮಹಿಳೆ! ಕಾರಿನ ಡ್ಯಾಶ್ ಕ್ಯಾಮೆರಾ ಶಾಕಿಂಗ್ ದೃಶ್ಯ ಸೆರೆ!

Published : Jul 18, 2026, 12:43 PM ISTUpdated : Jul 18, 2026, 12:52 PM IST

Tin Factory accident ತನ್ನದಲ್ಲದ ತಪ್ಪಿಗೆ ಬಡಪಾಯಿ ಮಹಿಳೆಯೊಬ್ಬರು ಆಸ್ಪತ್ರೆಗೆ ಸೇರಿದ ವಿಚಿತ್ರ ಘಟನೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯತನವೇ ದುರಂತಕ್ಕೆ ಕಾರಣವಾಗಿದೆ.

PREV
13
ಟಿನ್‌ಫ್ಯಾಕ್ಟರಿ ಬಳಿ ದುರಂತ: ತನ್ನದಲ್ಲದ ತಪ್ಪಿಗೆ ಮಹಿಳೆ ಆಸ್ಪತ್ರೆಗೆ!

ತನ್ನದಲ್ಲದ ತಪ್ಪಿಗೆ ಬಡಪಾಯಿ ಮಹಿಳೆಯೊಬ್ಬರು ಆಸ್ಪತ್ರೆಗೆ ಸೇರಿದ ವಿಚಿತ್ರ ಘಟನೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯತನವೇ ದುರಂತಕ್ಕೆ ಕಾರಣವಾಗಿದೆ.

23
Tin Factory Incident: ಘಟನೆ ಹೇಗಾಯ್ತು?

ಎಲ್ಲಿಗೆ ಪ್ರಯಾಣಕ್ಕೆ ಸಜ್ಜಾಗಿ ರಸ್ತೆ ಬದಿ ನಿಂತಿದ್ದ ಕಾರು. ಕಾರಿನ ಮೇಲೆ ಲಗ್ಗೇಜು ಇಟ್ಟು ಅದಕ್ಕೆ ಹಗ್ಗ ಬಿಗಿಯುತ್ತಿದ್ದ ಕಾರಿನ ಚಾಲಕ. ಒಂದು ಬದಿಯಿಂದ ಇನ್ನೊಂದು ಬದಿಗೆ ಲಗ್ಗೇಜ್ ಮೇಲೆ ಹಗ್ಗ ಎಸೆದಿದ್ದಾನೆ. ಆದರೆ ಇದೇ ವೇಳೆ ಇನ್ನೊಂದು ಬದಿಯ ಮುಖ್ಯರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಬೈಕ್ ಸವಾರನಿಗೆ ಹಗ್ಗ ಬಿದ್ದಿದೆ. ಈ ವೇಳೆ ಬೈಕ್ ಹಿಂಬದಿ ಕುಳಿತಿದ್ದ ಯುವತಿಯ ಕುತ್ತಿಗೆಗೆ ಹಗ್ಗ ಸಿಲುಕಿದೆ ಇತ್ತ ಅದೇ ವೇಳೆ ಕಾರಿನ ಚಾಲಕ ಹಗ್ಗ ಎಳೆದಿದ್ದರಿಂದ ಅತ್ತ ಬೈಕ್ ಸಹ ರನ್ನಿಂಗ್‌ನಲ್ಲಿದ್ದರಿಂದ ಯುವತಿ ರಸ್ತೆ ಮೇಲೆ ಬಿದ್ದಿದ್ದಾಳೆ. ಚಲಲಿಸುತ್ತಿದ್ದ ಬೈಕ್‌ನಿಂದ ನೆಲಕ್ಕೆ ಬಿದ್ದಿದ್ದರಿಂದ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಆಸ್ಪತ್ರೆ ದಾಖಲಿಸಲಾಗಿದೆ.

33
ಚಾಲಕನ ನಿರ್ಲಕ್ಷ್ಯ

ಕಾರು ಚಾಲಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವಾಗಿದೆ. ಒಂದು ಬದಿಯಿಂದ ಹಗ್ಗ ಎಸೆಯುವಾಗ ಇನ್ನೊಂದು ವಾಹನ ಸವಾರರ ಮೇಲೆ ಬಿದ್ದರೆ ಅನಾಹುತವಾಗುತ್ತದೆ ಎಂಬ ಕಾಮನ್‌ಸೆನ್ಸ್ ಇಲ್ಲವಾಯಿತೇ ಕಾರು ಚಾಲಕನಿಗೆ. ಮುಖ್ಯ ರಸ್ತೆಯ ಬದಿ ನಿಂತು ಹಗ್ಗ ಕಟ್ಟಬಹುದಿತ್ತು. ಆದರೆ ಕಾರು ಚಾಲಕನ ನಿರ್ಲಕ್ಷ್ಯವೋ, ದಡ್ಡತನವೋ ಒಟ್ಟಿನಲ್ಲಿ ತಪ್ಪೇ ಮಾಡದ ಮಹಿಳೆಯೊಬ್ಬಳು ಅನ್ಯಾಯವಾಗಿ ಆಸ್ಪತ್ರೆ ಸೇರುವಂತಾಗಿದೆ. ಘಟನೆಯ ಭೀಕರ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories