CM DK Shivakumar City round's Photos: ಬೆಳಗಾವಿಯಿಂದ ಆಗಮಿಸುತ್ತಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫುಟ್ಪಾತ್ ತೆರವು ಕಾರ್ಯಾಚರಣೆ ಹಿನ್ನೆಲೆ ಖುದ್ದಾಗಿ ಸಿಟಿ ರೌಂಡ್ ನಡೆಸಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸಾಥ್ ನೀಡಿದರು.
ಬೆಂಗಳೂರು: ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ(Bengaluru Footpath clear encroachment) ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM DK Shivakumar) ಇಂದು ದಿಢೀರ್ ಸಿಟಿ ರೌಂಡ್ ನಡೆಸಿ ಒತ್ತುವರಿ ತೆರವು ಕಾರ್ಯಾಚರಣೆ ಪರಿಶೀಲಿಸಿದರು. ಕಳೆದ ಹಲವು ದಿನಗಳಿಂದ ಜಿಬಿಎ (GBA) ವತಿಯಿಂದ ನಡೆಯುತ್ತಿರುವ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಬಳಿಕ ಸ್ಥಳದಲ್ಲಿನ ವಾಸ್ತವ ಸ್ಥಿತಿಯನ್ನು ಖುದ್ದಾಗಿ ಸ್ಥಳ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು.
25
ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಸಚಿವ ಕೃಷ್ಣ ಬೈರೇಗೌಡ ಸಾಥ್
ಬೆಳಗಾವಿಯಿಂದ ಆಗಮಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ(Krishna Byregowda) ಹಾಗೂ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು. ಹೆಚ್‌ಎಎಲ್ ವಿಮಾನ ನಿಲ್ದಾಣದ ಮುಂಭಾಗದ ರಸ್ತೆಯ ಫುಟ್ಪಾತ್‌ಗಳು, ಹೆಚ್‌ಎಎಲ್ ಸ್ಪೋರ್ಟ್ಸ್ ಕ್ಲಬ್ ನಿರ್ಮಿಸಿರುವ ಪಾದಚಾರಿ ಮಾರ್ಗ ಸೇರಿದಂತೆ ವಿವಿಧ ಪ್ರದೇಶಗಳನ್ನು ಪರಿಶೀಲಿಸಿದರು.
35
ಪೌರ ಕಾರ್ಮಿಕರು ಹರಸಾಹಸ
ಒತ್ತುವರಿ ತೆರವುಗೊಳಿಸಿದ ಬಳಿಕ ಕೆಲವೆಡೆ ಅಂಗಡಿಗಳ ಅವಶೇಷಗಳು, ಮರದ ಹಲಗೆಗಳು ಹಾಗೂ ಕಸದ ರಾಶಿಗಳು ಹಾಗೆಯೇ ಬಿದ್ದಿತ್ತು. ಆದರೆ ಇಂದು ಸಿಎಂ ಭೇಟಿ ಬೆನ್ನಲ್ಲೇ ಪೌರಕಾರ್ಮಿಕರು ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಹಲವು ವರ್ಷಗಳಿಂದ ಕಸದಿಂದ ತುಂಬಿದ್ದ ಫುಟ್ಪಾತ್‌ಗಳನ್ನು ಶುಚಿಗೊಳಿಸಲು ಸಿಬ್ಬಂದಿ ಹರಸಾಹಸ ಪಟ್ಟರು.
ಪರಿಶೀಲನೆ ವೇಳೆ ಅಧಿಕಾರಿಗಳು ಮಿನಿ ಬಸ್‌ನಲ್ಲೇ ಸಿಎಂಗೆ ರಸ್ತೆ ಅಭಿವೃದ್ಧಿ, ಫುಟ್ಪಾತ್ ನಿರ್ವಹಣೆ ಹಾಗೂ ಮುಂದಿನ ಕ್ರಮಗಳ ಕುರಿತು ಮಾಹಿತಿ ನೀಡಿದರು. ಕೆಲ ದಿನಗಳ ಹಿಂದೆಯೇ ಒಆರ್‌ಆರ್ ರಸ್ತೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದ್ದ ಸಚಿವ ಕೃಷ್ಣ ಬೈರೇಗೌಡ, ಇಂದು ಕಾಮಗಾರಿ ಮಾಹಿತಿಯನ್ನು ಸಿಎಂಗೆ ವಿವರಿಸಿದರು.
55
ಕಾಲ್ನಡಿಗೆಯಲ್ಲೇ ಸ್ಥಳ ಪರಿಶೀಲಿಸಿದ ಸಿಎಂ
ಬಳಿಕ ಸಿಎಂ ಹೆಚ್‌ಎಸ್‌ಆರ್ ಲೇಔಟ್‌ನ 27ನೇ ಮುಖ್ಯರಸ್ತೆಗೆ ಆಗಮಿಸಿ ಅಲ್ಲಿನ ಫುಟ್ಪಾತ್ ಹಾಗೂ ಪಾದಚಾರಿ ವ್ಯವಸ್ಥೆಯನ್ನು ವೀಕ್ಷಿಸಿದರು. 27ನೇ ಮುಖ್ಯರಸ್ತೆಯಿಂದ 24ನೇ ಮುಖ್ಯರಸ್ತೆಯವರೆಗೆ ಕಾಲ್ನಡಿಗೆಯಲ್ಲೇ ಪರಿಶೀಲನೆ ನಡೆಸಿ, ಒತ್ತುವರಿ ತೆರವುಗೊಂಡಿರುವ ಫುಟ್ಪಾತ್‌ಗಳ ಸ್ಥಿತಿಯನ್ನು ಸಿಎಂ ಪರಿಶೀಲಿಸಿದರು. ಇನ್ನೊಂದೆಡೆ, ಸಿಎಂ ಸಂಚರಿಸಿದ ಮಾರ್ಗದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ