ಚಿತ್ರಗಳಲ್ಲಿ: ಮೋದಿಯಿಂದ ಉದ್ಘಾಟನೆಗೊಳ್ಳಲಿರುವ Whitefield Metro ನಿಲ್ದಾಣ ಮದುವಣಗಿತ್ತಿಯಂತೆ ಸಿಂಗಾರ!

ಪ್ರಧಾನಿ ನರೇಂದ್ರ ಮೋದಿ  ಅವರು ಮಾ.25ರಂದು ಕೆ.ಆರ್‌.ಪುರ-ವೈಟ್‌ಫೀಲ್ಡ್‌ ಮಾರ್ಗದ ರೈಲ್ವೆ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು, ವೈಟ್‌ಫೀಲ್ಡ್‌ ಮೆಟ್ರೋ ನಿಲ್ಧಾಣವನ್ನು ಮದುವಣಗಿತ್ತಿಯಂತೆ ಉದ್ಘಾಟನೆಗೆ ಸುಂದರವಾಗಿ ದೀಪಾಲಂಕಾರ ಮಾಡಲಾಗಿದೆ.  ಈ ಮೂಲಕ ಐಟಿ ಕಾರಿಡಾರ್‌ಗೆ ಪ್ರವೇಶಿಸುತ್ತಿರುವ ಮೆಟ್ರೋದ ಮೊದಲ ಮಾರ್ಗ ಎನ್ನಿಸಿಕೊಂಡಿರುವ ಕೆ.ಆರ್‌.ಪುರ-ವೈಟ್‌ಫೀಲ್ಡ್‌ ಮಧ್ಯೆ ಮಾ.26ರಿಂದಲೇ ಸಾರ್ವಜನಿಕರ ಸಂಚಾರಕ್ಕೆ ರೈಲು ಸೇವೆ ಲಭ್ಯವಾಗಲಿದೆ. 

ಉದ್ಘಾಟನೆಗೆ ಸಿದ್ಧವಾಗಿರುವ  ವೈಟ್‌ಫೀಲ್ಡ್‌ ಮೆಟ್ರೋ ನಿಲ್ಧಾಣವನ್ನು ಮದುವಣಗಿತ್ತಿಯಂತೆ  ಸುಂದರವಾಗಿ ದೀಪಾಲಂಕಾರ ಮಾಡಲಾಗಿದೆ. ಯುಗಾದಿ ದಿನದಿಂದಲೇ ದೀಪಾಲಂಕಾರ ಮಾಡಲಾಗಿದ್ದು, ಇದು ನೋಡುಗರನ್ನು ಆಕರ್ಷಿಸುತ್ತಿದೆ.
 

ಸರ್ಕಾರದ ಪ್ರಕಾರ, ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ ಲೈನ್ 10-12 ನಿಮಿಷಗಳ ಸಮಯಕ್ಕೊಮ್ಮೆ ಏಳು ರೈಲುಗಳನ್ನು ಓಡಿಸಲಿದೆ. ಈ ಹೊಸ ಮೆಟ್ರೋ ಮಾರ್ಗವು ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.


ನೇರಳೆ ಮಾರ್ಗದ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ಮಾರ್ಗದ (15 ಕಿ.ಮೀ.) ಭಾಗವಾದ ಕೆ.ಆರ್‌.ಪುರ-ವೈಟ್‌ಫೀಲ್ಡ್‌ ನ 13 ಕಿ.ಮೀ. ಒಟ್ಟಾರೆ .4500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ.

ಮೊದಲ ಹಂತದಲ್ಲಿ ಈ ಭಾಗ ಜನಸಂಚಾರಕ್ಕೆ ಲಭ್ಯವಾಗುತ್ತಿದೆ. ಬೆನ್ನಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಮಾರ್ಗ ನಿರ್ಮಾಣ ಮತ್ತಿತರ ಕಾಮಗಾರಿ ವರ್ಷದ ಮಧ್ಯದಲ್ಲಿ ಮುಕ್ತಾಯವಾಗುವ ಸಾಧ್ಯತೆಯಿದೆ. 

ಬಳಿಕಷ್ಟೇ ಉಳಿದ 2 ಕಿ.ಮೀ. ಮಾರ್ಗದಲ್ಲಿ ರೈಲ್ವೆ ಸಂಚರಿಸಲಿದೆ. ಒಟ್ಟಾರೆ 2ನೇ ಹಂತದ ಯೋಜನೆ ಪೂರ್ಣಗೊಂಡ ಬಳಿಕ ಪ್ರತಿನಿತ್ಯ 2.5 ರಿಂದ 3 ಲಕ್ಷ ಜನರು ಸಂಚರಿಸುವ ಸಾಧ್ಯತೆಯಿದೆ.

ಸರ್ಕಾರದ ಪ್ರಕಾರ, ಕೆಆರ್ ಪುರಂನಿಂದ ವೈಟ್‌ಫೀಲ್ಡ್ ತಲುಪಲು ಮೆಟ್ರೋದಲ್ಲಿ ಕೇವಲ 24 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಮೆಟ್ರೋ ಲೈನ್ 13.2 ಕಿಲೋಮೀಟರ್ ಉದ್ದ ಹೊಂದಿದೆ. ಮತ್ತು ಇದು 12 ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.

Latest Videos

click me!