ಕರ್ನಾಟಕದ ಅತ್ಯಂತ ಸುಂದರ ನಾಡು. ಭಾರತದ ಒಂದೊಂದು ರಾಜ್ಯದಲ್ಲಿ ಒಂದೊಂದು ವಿಶೇಷತೆ, ತಾಣಗಳಿವೆ. ಆದರೆ ಕರ್ನಾಟಕದಲ್ಲಿ ಭಾರತದ ಎಲ್ಲಾ ವಿಶೇಷತೆ ಹಾಗೂ ತಾಣಗಳಿವೆ. ಇದೇ ಕಾರಣಕ್ಕೆ ಕರ್ನಾಟಕ ಒಂದು ರಾಜ್ಯವಾದರೂ ಹಲವು ಜಗತ್ತು ಒಳಗೊಂಡಿದೆ. ಹಂಪಿ, ಹಳೇಬೀಡು, ಬೇಲೂರು, ಐಹೊಳೆ, ಪಟ್ಟದಕಲ್ಲು, ಶಿಲ್ಪಕಲಾ ವೈಭವದ ದೇವಾಲಯಗಳು, ಮೈಸೂರು ಅರಮನೆ, ಚಿತ್ರದುರ್ಗದ ಕಲ್ಲಿನ ಕೋಟೆ, ಬಾದಾಮಿ ಕೋಟೆ, ವಿಜಯಪುರದ ಗೋಳ ಗುಮ್ಮಟ, ಸುಂದರ ಕರಾವಳಿತೀರ, ದುರ್ಗಮ ಕಾನನಗಳು, ರಮಣೀಯ ಜಲಪಾತಗಳು, ಸಮುದ್ರ ತೀರ ಸೇರಿದಂತೆ ಸಾವಿರಾರು ಅದ್ಭುತಗಳನ್ನು ಕರ್ನಾಟಕ ಹೊಂದಿದೆ.ಇದರಲ್ಲಿ 7 ಅದ್ಭುತಗಳನ್ನು ಹುಡುಕಿ ಇದೀಗ ಅಧಿಕೃತ ಪಟ್ಟಿ ಘೋಷಿಸಲಾಗಿದೆ.