ಸಾವು ಗೆದ್ದ ಸಾತ್ವಿಕ್ ಇನ್ಮುಂದೆ ಲಚ್ಯಾಣ ಸಿದ್ಧಲಿಂಗ, ಮಗುವಿಗಾಗಿ ಮರುಗಿದ ಶ್ವಾನ!

First Published Apr 4, 2024, 2:32 PM IST

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ಮುಜಗೊಂಡ ರಕ್ಷಣಾ ಕಾರ್ಯಾಚರಣೆ 20 ಗಂಟೆಗಳ ಬಳಿಕ ಮುಗಿದಿದೆ. ಮಗು ಸಾವು ಗೆದ್ದು ಬಂದಿದೆ. ಮಗುವಿಗೆ ಮರುನಾಮಕರಣ ಮಾಡಲು ಚಿಂತನೆ ನಡೆದಿದೆ.

ಸದ್ಯ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಮಗು ಸಾತ್ವಿಕ್‌ ಹೆಸರನ್ನು ಬದಲಾವಣೆ ಮಾಡಿ ಮರುನಾಮಕರಣ ಮಾಡಲು ಪೋಷಕರು ತೀರ್ಮಾನಿಸಿದ್ದಾರೆ.

ಮಗು ಬೋರ್‌ವೆಲ್‌ಗೆ ಬಿದ್ದ ಬಳಿಕ ಜೀವಂತವಾಗಿ ಬರಲೆಂದು  ಸಾವಿರಾರು ಜನರು ಲಚ್ಯಾಣ ಸಿದ್ಧಲಿಂಗ ಮಹಾರಾಜ ಗದ್ದುಗೆಯಲ್ಲಿ ಪ್ರಾರ್ಥನೆ ಫಲಿಸಿದ್ದು, ಮರುನಾಮಕರಣಕ್ಕೆ ಪೋಷಕರು ತೀರ್ಮಾನಿಸಿದ್ದಾರೆ.

ಸಾತ್ವಿಕ್ ಬದುಕಿ ಬರಲಿ ಎಂದು ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ (ಲಚ್ಯಾಣ ಸಿದ್ಧಲಿಂಗ ಮಹಾರಾಜ) ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ದಪ್ಪ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

20 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಬಳಿಕ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್ ತಂಡವು ಮಗುವನ್ನು ಜೀವಂತವಾಗಿ ಹೊರತೆಗೆದಿದೆ. ಬುಧವಾರ ಸಂಜೆ 6 ಗಂಟೆಗೆ ಕೊಳವೆ ಬಾವಿಗೆ ಬಿದ್ದ ಮಗು 19 ಗಂಟೆಗಳಿಂದ ಅನ್ನ ನೀರು ಇಲ್ಲದೆ  ಜೀನ್ಮರಣ ಹೋರಾಟ ನಡೆಸುತ್ತಿತ್ತು. ಸಾವಿರಾರು ಮಂದಿಯ ಪ್ರಾರ್ಥನೆ ಕೊನೆಗೂ ಫಲಿಸಿದ್ದು, ಮಗು ಜೀವಂತವಾಗಿ ಬಂದಿದೆ.

ಸಾತ್ವಿಕ್ ಜೊತೆಗೆ ಆಟವಾಡ್ತಿದ್ದ ಮನೆಯ ಸಾಕು ನಾಯಿ ಟಾಮಿ ಕಾರ್ಯಾಚರಣೆ ನಡೆಯುತ್ತಿರುವ ಜಾಗಕ್ಕೆ ಬಂದು ವಿಚಿತ್ರವಾಗಿ ಕೂಗಿ ನರಳಾಟ ನಡೆಸಿ. ಸಾತ್ವಿಕ್ ಗಾಗಿ ಹಂಬಲಿಸುತ್ತಿತ್ತು. ಈ ದೃಶ್ಯ ನೋಡಲು ಮನ ಕಲಕುವಂತಿತ್ತು. ಇದೀಗ ಸತೀಶ್  ಮತ್ತು ಪೂಜಾ ದಂಪತಿಯ  2 ವರ್ಷದ ಗಂಡು ಮಗು  ಸಾತ್ವಿಕ್ ಮುಜಗೊಂಡ ಎಪ್ರಿಲ್‌ 3ರಂದು ಬೋರ್‌ವೆಲ್‌ಗೆ ಬಿದ್ದು ಬದುಕಿ ಬಂದಿದ್ದು, ಸಾಕು ನಾಯಿಗೂ ಸಮಾಧಾನ ತಂದಿದೆ.

ಅಂತರ್ ಜ್ಞಾನಿಗಳಾಗಿದ್ದ ಸಿದ್ದಲಿಂಗ ಮಹಾರಾಜರು 1848 ರಲ್ಲಿ  ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಲಚ್ಚಪ್ಪ-ನಾಗಮ್ಮ ದಂಪತಿಗಳ ಮಗನಾಗಿ ಜನಿಸಿದ್ದರು. ಅವರೊಬ್ಬ  ಪವಾಡಪುರುಷರು 1927ರಲ್ಲಿ ಲಿಂಗೈಕ್ಯರಾದರು.

click me!