ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (BLR ವಿಮಾನ ನಿಲ್ದಾಣ) ಟರ್ಮಿನಲ್ 2 ನಲ್ಲಿ 'ಟೈಗರ್ ವಿಂಗ್ಸ್' ಶೀರ್ಷಿಕೆಯ “ವರ್ಟಿಕಲ್ ಗಾರ್ಡನ್”ನನ್ನು ಅನಾವರಣಗೊಳಿಸಿತು. ಫ್ರೆಂಚ್ ದೇಶದ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದೊಂದಿಗೆ ಗುರುತಿಸಿಕೊಂಡಿರುವ ವಿಶ್ವದರ್ಜೆಯ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಅವರ ಸಹಯೋಗದೊಂದಿಗೆ ಈ ವರ್ಟಿಕಲ್ ಗಾರ್ಡನ್‌ನನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಟರ್ಮಿನಲ್ 2 (T2) ನಲ್ಲಿ ನಿರ್ಮಿಸಿರುವ ಈ ವರ್ಟಿಕಲ್ ಗಾರ್ಡನ್ 30 ಅಡಿ ಎತ್ತರ ಹಾಗೂ 160 ಅಡಿ ಅಗಲ (2 ಗೋಡೆಗಳಿದ್ದು, ಪ್ರತಿ ಗೊಡೆ 80 ಅಡಿ ಅಗಲವಿದೆ)ದಲ್ಲಿ ವಿಸ್ತೃತವಾಗಿ ಬೆಳೆಸಲಾಗಿದೆ. ಪ್ಯಾಟ್ರಿಕ್ ಬ್ಲಾಂಕ್ ಅವರು ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಟಿಕಲ್ ಗಾರ್ಡನ್ ನಿರ್ಮಿಸಿದ್ದು ಇದೇ ಮೊದಲು, ಮೂಲಭೂತ ಸೌಕರ್ಯಗಳೊಂದಿಗೆ ಪ್ರಕೃತಿಯನ್ನು ಸೆರೆ ಹಿಡಿದಂತ ಸುಂದರ ದೃಶ್ಯಾವಳಿಂದ ಈ ಗೋಡೆ ಉದ್ಯಾನ ಕಂಗೊಳಿಸಲಿದೆ.
ಈ ಮೂಲಕ ಟಿ2 ನ ಅಡಿಪಾಯದ ಮೂಲತತ್ವವನ್ನು ಉದಾರಿಸಿದೆ. 'ಟೈಗರ್ ವಿಂಗ್ಸ್' ನ ಈ ವರ್ಟಿಕಲ್ ಗಾರ್ಡನ್ 153 ವಿವಿಧ ಜಾತಿಗಳ 15,000 ಕ್ಕೂ ಹೆಚ್ಚು ಸಸ್ಯಗಳಿಂದ ನಿರ್ಮಿಸಲಾಗಿದೆ. ಪ್ಯಾಟ್ರಿಕ್ ಬ್ಲಾಂಕ್ ಅವರು ಕರ್ನಾಟಕ ಸೇರಿದಂತೆ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳ ಕಾಡುಗಳಿಗೆ ತೆರಳಿ, ಅಪರೂಪದ ಆಯ್ದ ಸಸ್ಯ ಪ್ರಭೇದಗಳನ್ನು ಸಂಗ್ರಹಿಸಿ, ಈ ಗೋಡೆ ಉದ್ಯಾನವನ್ನು ನಿರ್ಮಿಸಿದ್ದಾರೆ. ಈ ಗೋಡೆ ಉದ್ಯಾನವನ್ನು ಮಣ್ಣು ರಹಿರವಾಗಿ ನಿರ್ಮಿಸಲಾಗಿದ್ದು, ಈ ಟೆಕ್ನಾಲಜಿಯನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಮತ್ತೊಂದು ವಿಶೇಷವೆಂದರೆ, ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯ ಶಕ್ತಿ ಮತ್ತು ಅದರ ಗಾಂಭೀರ್ಯತೆಯನ್ನು ಪ್ರತಿಬಿಂಬಿಸುವಂತೆ ಈ ಗೋಡೆ ಉದ್ಯಾನ ನಿರ್ಮಾಣಗೊಂಡಿದೆ. ಅದಕ್ಕಾಗಿಯೇ ಈ ವರ್ಟಿಕಲ್ ಗಾರ್ಡನ್‌ಗೆ 'ಟೈಗರ್ ವಿಂಗ್ಸ್' ಎಂದು ಹೆಸರಿಡಲಾಗಿದೆ.
ಶತಾವರಿ ಸಸ್ಯಗಳು ವಿಮಾನದ ರೆಕ್ಕೆಗಳ ಸಿಲೂಯೆಟ್ ಅನ್ನು ಗುರುತಿಸುತ್ತದೆ, ಇನ್ನು, ಕೆಂಪು, ಕಿತ್ತಳೆ, ಹಳದಿ ಮತ್ತು ಬಿಳಿ ಇಕ್ಸೋರಾ ಹೂವುಗಳು ಹುಲಿ ಬಣ್ಣಗಳನ್ನು ಪ್ರತಿನಿಧಿಸುತ್ತವೆ.
ಟೈಗರ್ ವಿಂಗ್ಸ್‌ನ ಪ್ರಮುಖ ಮುಖ್ಯಾಂಶಗಳು:
* ಭಾರತದಲ್ಲಿ ಪ್ಯಾಟ್ರಿಕ್ ಬ್ಲಾಂಕ್ ಅವರ ಅತಿದೊಡ್ಡ ಗೋಡೆ ಉದ್ಯಾನ ಇದೇ ಮೊದಲು
* 4000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.
* 15000 ಗಿಡಗಳನ್ನು ಒಳಗೊಂಡಿದೆ
* 150ಕ್ಕೂ ಹೆಚ್ಚು ಜಾತಿಯ ಸಸ್ಯಗಳು ಇವೆ.
* ಮಣ್ಣುರಹಿತ ತಂತ್ರಜ್ಞಾನವನ್ನು ಬಳಸಲಾಗಿದೆ.
ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಮಾತನಾಡಿ, “ಬೆಂಗಳೂರಿನಲ್ಲಿ ಸುಸ್ಥಿರತೆ, ಕಲಾತ್ಮಕತೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಹೊಸ ದೃಷ್ಟಿಕೋನವನ್ನು ತರಲು ಬಯಸಿದ್ದೇವೆ. ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ ಪ್ಯಾಟ್ರಿಕ್‌ನ ಅವರ ಹೊಸ ವಿಧಾನದಿಂದ ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳನ್ನು ಬೆಳೆಯುವಂತೆಯೇ ಬೆಳೆಯಲು ಅನುವು ಮಾಡಿಕೊಟ್ಟಿದೆ.
ಟರ್ಮಿನಲ್ 2 ನಾಲ್ಕು ಮೂಲ ತತ್ವಗಳಿಂದ ನಿರ್ಮಿಸಲ್ಪಟ್ಟಿದೆ, ಉದ್ಯಾನವದಲ್ಲಿ ಟರ್ಮಿನಲ್, ತಂತ್ರಜ್ಞಾನ, ಕಲೆ ಮತ್ತು ಸುಸ್ಥಿರತೆ ಈ ನಾಲ್ಕು ತತ್ವಗಳ ಮೂಲಕ ಬೆಂಗಳೂರಿನ ನೈಜ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ.
ಹೆಸರಾಂತ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಮಾತನಾಡಿ, "ಟೈಗರ್ ವಿಂಗ್ಸ್” ಪ್ರಕೃತಿ ಮತ್ತು ವಾಸ್ತುಶಿಲ್ಪದ ನಡುವಿನ ಸಂಬಂಧವನ್ನು ಸಾಕಾರಗೊಳ್ಳುವ ಸ್ವಪ್ನವಾಗಿದೆ. ವಿಶೇಷವಾದ ಭಾವನೆಯನ್ನು ಬಳಸಿಕೊಳ್ಳುವ ಮೂಲಕ, ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳು ಬೆಳೆಯುವ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯು ಕೇವಲ ವಿಮಾನ ನಿಲ್ದಾಣದ ದೃಶ್ಯವನ್ನು ಇನ್ನಷ್ಟು ವರ್ಧಿಸುತ್ತದೆ. ಅಷ್ಟೇ ಅಲ್ಲದೆ, ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಅನುಭವವನ್ನು ಇನ್ನಷ್ಟು ಉಲ್ಲಾಸಗೊಳಿಸಲಿದೆ. ನಮ್ಮ ಸುತ್ತಲೂ ಪರಿಸರವೇ ತುಂಬಿರುವ ಸಂತಸ ನೀಡಲಿದೆ.
ಈ ವರ್ಟಿಕಲ್ ಉದ್ಯಾನವು ಹೆಚ್ಚು ನೀರಿನ-ಸಮರ್ಥವಾಗಿದೆ, ಎಚ್ಚರಿಕೆಯಿಂದ ವಿನ್ಯಾಸಗೊಳಿಸಿದ ನೀರಾವರಿ ವ್ಯವಸ್ಥೆಯನ್ನು ಬಳಸಲಾಗಿದ್ದು, ಪದರಗಳ ಮೂಲಕ ಸಸ್ಯಗಳಿಗೆ ಸರಿಯಾದ ಪ್ರಮಾಣದ ನೀರನ್ನು ಒದಗಿಸುತ್ತದೆ. ಈ ವಿಧಾನವು ಹೆಚ್ಚು ಸಮರ್ಥನೀಯವಾಗಿದ್ದು, ನೈಸರ್ಗಿಕ ಬಂಡೆ ಅಥವಾ ಕಲ್ಲಿನ ಗೋಡೆಗಳ ಮೇಲೆ ಸಸ್ಯಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ತೋರಿಸುತ್ತದೆ. ಇಂತಹ ಸ್ಥಳಗಳಲ್ಲಿ ನೀರು ಮತ್ತು ಪೋಷಕಾಂಶಗಳು ಕಡಿಮೆ ಇದ್ದರೂ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ. ಬ್ಲಾಂಕ್‌ನ ಅವರ ಹೈಡ್ರೋಪೋನಿಕ್ ವಿಧಾನವು ವೈವಿಧ್ಯಮಯವಾದ ಸಸ್ಯ ಪ್ರಭೇದಗಳನ್ನು ಕಾಂಪ್ಯಾಕ್ಟ್ ಲಂಬ ಜಾಗದಲ್ಲಿ ಸಹಬಾಳ್ವೆ ಮಾಡಲು ಅನುವು ಮಾಡಿಕೊಡುತ್ತದೆ, ಇದು ಗಾಳಿಯ ಗುಣಮಟ್ಟವನ್ನು ಹೆಚ್ಚಿಸಿ, ತಂಪಾದ, ಹೆಚ್ಚು ಆಹ್ಲಾದಕರ ವಾತಾವರಣಕ್ಕೆ ಕೊಡುಗೆ ನೀಡುವ ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.
ಈ ಸಸ್ಯಶಾಸ್ತ್ರೀಯ ಮೇರುಕೃತಿಯು ಭಾರತದ ವನ್ಯಜೀವಿ ಪರಂಪರೆಯನ್ನು ವೈಭವೀಕರಿಸುವುದರಲ್ಲೆ, ಆಧುನಿಕ, ಪರಿಸರ ಸ್ನೇಹಿ ಸ್ಥಳವಾಗಿ BLR ವಿಮಾನ ನಿಲ್ದಾಣದ ದೃಷ್ಟಿಯನ್ನು ಸಾಕಾರಗೊಳಿಸುತ್ತದೆ, ಕರ್ನಾಟಕದ ಜೀವವೈವಿಧ್ಯದ ಶ್ರೀಮಂತಿಕೆಯನ್ನು ಬೆಂಗಳೂರಿನ ಪ್ರಮುಖ ಟ್ರಾವೆಲ್ ಹಬ್ ಆಗಿ ಪರಿವರ್ತಿಸುತ್ತದೆ.