ಶ್ರೀ ರವಿಶಂಕರ್ ಗುರೂಜಿಗೆ ರಿಪಬ್ಲಿಕ್ ಆಫ್ ಫಿಜಿಯಿಂದ ಅತ್ಯುನ್ನತ ಪೌರ ಪ್ರಶಸ್ತಿ!

Published : Oct 27, 2024, 04:21 PM IST

ಮಾನವ ಸ್ಫೂರ್ತಿಯನ್ನು ನಿರಂತರವಾಗಿ ಎತ್ತಿ ಹಿಡಿಯಲು ಅವರು ಮಾಡುತ್ತಿರುವ ಕಾರ್ಯಕ್ಕಾಗಿ, ವಿವಿಧ ಸಮುದಾಯಗಳನ್ನು ಶಾಂತಿ ಮತ್ತು ಸಾಮರಸ್ಯದ ಮೂಲಕ ಒಂದಾಗಿ ತರುವ ಅವರ ಕಾರ್ಯಕ್ಕಾಗಿ ರವಿಶಂಕರರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು.

PREV
14
ಶ್ರೀ ರವಿಶಂಕರ್ ಗುರೂಜಿಗೆ ರಿಪಬ್ಲಿಕ್ ಆಫ್ ಫಿಜಿಯಿಂದ ಅತ್ಯುನ್ನತ ಪೌರ ಪ್ರಶಸ್ತಿ!

ಬೆಂಗಳೂರು (ಅ.27): ದಕ್ಷಿಣ ಪೆಸಿಫಿಕ್ ರಾಷ್ಟ್ರವಾದ ಫಿಜಿಯು ತನ್ನ ಅತ್ಯುನ್ನತ ಪೌರ ಪ್ರಶಸ್ತಿಯನ್ನು ಜಾಗತಿಕ ಆಧ್ಯಾತ್ಮಿಕ ಗುರುಗಳಾದ, ಮಾನವತಾವಾದಿ ನಾಯಕರಾದ ಗುರುದೇವ್ ಶ್ರೀ ಶ್ರೀ ರವಿಶಂಕರ್ ಗುರೂಜಿಗೆ ನೀಡಿ ಅವರನ್ನು ಸನ್ಮಾನಿಸಿತು. 

24

ಮಾನವ ಸ್ಫೂರ್ತಿಯನ್ನು ನಿರಂತರವಾಗಿ ಎತ್ತಿ ಹಿಡಿಯಲು ಅವರು ಮಾಡುತ್ತಿರುವ ಕಾರ್ಯಕ್ಕಾಗಿ, ವಿವಿಧ ಸಮುದಾಯಗಳನ್ನು ಶಾಂತಿ ಮತ್ತು ಸಾಮರಸ್ಯದ ಮೂಲಕ ಒಂದಾಗಿ ತರುವ ಅವರ ಕಾರ್ಯಕ್ಕಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಗುರುದೇವರಿಗೆ "ಹಾನರರಿ ಆಫಿಸರ್ ಆಫ್ ದಿ ಆರ್ಡರ್ ಆಫ್ ಫಿಜಿ" ಬಿರುದನ್ನು ಫಿಜಿ ರಿಪಬ್ಲಿಕ್ ನ ಸನ್ಮಾನ್ಯ ಅಧ್ಯಕ್ಷರಾದ ಹೆಚ್.ಇ.ರಟು ವಿಲ್ಲಿಯಮೆ ಎಂ.ಕಟೋನಿವೆರಿಯವರು ಗುರುದೇವರಿಗೆ ನೀಡಿದರು. 

34

ಗುರುದೇವರಿಗೆ ತಮ್ಮ ದೇಶದ ಅತ್ಯುನ್ನತ ಪೌರ ಪ್ರಶಸ್ತಿಯನ್ನು ನೀಡುತ್ತಿರುವ ಆರನೆಯ ದೇಶವು ಫೀಜಿಯಾಗಿದ್ದು, ಆರ್ಟ್ ಆಫ್ ಲಿವಿಂಗ್ ನ ಮೂಲಕ ಗುರುದೇವರು ಕಳೆದ 43 ವರ್ಷಗಳಿಂದ ಹರಡುತ್ತಿರುವ ಸಂತೋಷ ಮತ್ತು ಸಾಮರಸ್ಯವನ್ನು  ಗುರುತಿಸಿ, ಇದರೊಡನೆ ಆವರು ಮಾನಸಿಕ ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಹಾಗೂ ಯುವಕ ಸಬಲೀಕರಣ, ಒತ್ತಡ ನಿವಾರಣೆ , ಧ್ಯಾನದ ಕಾರ್ಯಕ್ರಮಗಳು, ಹೀಗೆ ಅನೇಕಾನೇಕ ಕ್ಷೇತ್ರಗಳಲ್ಲಿ ಅವರು ನಿರ್ವಹಿಸುತ್ತಿರುವ ಕಾರ್ಯಗಳಿಗಾಗಿ ಗುರುದೇವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. 
 

44

ತಮ್ಮ ಫೀಜಿಯ ಭೇಟಿಯಲ್ಲಿ ಗುರುದೇವರು ಅನೇಕ ಗಣ್ಯರೊಡನೆ ಸಂವಾದವನ್ನು ನಡೆಸಿದರು. ಇವರಲ್ಲಿ ಕೆಲವರು- ಫೀಜಿಯ ಸನ್ಮಾನ್ಯ ಉಪಪ್ರಧಾನಿಗಳಾದ ವಿಲಿಯಮೆ ಗಾವೋಕ ಮತ್ತು ಫೀಜಿಯ ಸಂಯುಕ್ತ ರಾಷ್ಟ್ರಗಳ ವಸತಿ ಸಂಯೋಜಕರಾದ ಡಿರ್ಕ್ ವಾಗೆನರ್, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಈ ದ್ವೀಷ ರಾಷ್ಟ್ರದಲ್ಲಿ ಯುವಕ ಸಬಲೀಕರಣ, ಸ್ಥಳೀಯ ಸಮುದಾಯಗಳ ಮಾನಸಿಕ ಆರೋಗ್ಯದ  ಸುಧಾರಣೆ, ಕಾಲಾತೀತ ಜ್ಞಾನವಾದ ಆಯುರ್ವೇದದ ಜ್ಞನದ ಪರಿಚಯದ ಮೂಲಕ ಸಮಗ್ರ ಬೆಳವಣಿಗೆಗೆ ಆರ್ಟ್ ಆಫ್ ಲಿವಿಂಗ್ ಹೇಗೆ ಕಾಣಿಕೆ ನೀಡಬಹುದೆಂದು ಚರ್ಚಿಸಿದರು.

Read more Photos on
click me!

Recommended Stories