ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ದಂಪತಿ ಜಯನಗರದ ರಾಯರ ಮಠಕ್ಕೆ ಭೇಟಿ

First Published | Nov 6, 2024, 3:44 PM IST

ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್‌ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ, ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ಕಾರ್ತಿಕ ಮಾಸದ ಪ್ರಯುಕ್ತ ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು. ಮಠದ ಹಿರಿಯ ವ್ಯವಸ್ಥಾಪಕರು ಅವರಿಗೆ ಆಶೀರ್ವದಿಸಿದರು.

ಬ್ರಿಟನ್ ಮಾಜಿ ಪ್ರಧಾನಿ, ಕರ್ನಾಟಕದ ಅಳಿಯ   ಜಯನಗರದ ಗುರು ರಾಯರ ದರ್ಶನ ಪಡೆದುಕೊಂಡ ರಿಷಿ ಸುನಕ್‌ ದಂಪತಿ.  ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಶ್ರೀಮತಿ ಸುಧಾ ನಾರಾಯಣ ಮೂರ್ತಿ ದಂಪತಿಗಳು ಕುಟುಂಬ ಸಮೇತ ಭೇಟಿ ನೀಡಿದರು.

ವಿಶೇಷವಾಗಿ ಅವರ ಅಳಿಯನಾದ ಬ್ರಿಟನ್ ದೇಶದ  ಮಾಜಿ  ಪ್ರಧಾನಮಂತ್ರಿ ರಿಷಿ ಸುನಕ್, ಪತ್ನಿ ಅಕ್ಷತಾಮೂರ್ತಿ  ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಆಗಮಿಸಿ ಗುರು ರಾಯರ ದರ್ಶನ ಪಡೆದು   ಕಾರ್ತಿಕ ಮಾಸದ ಪ್ರಯುಕ್ತ ರಾಯರ ಸನ್ನಿಧಿಯಲ್ಲಿ ದೀಪಗಳನ್ನು ಬೆಳಗಿಸಿ  ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ  ಪ್ರಾರ್ಥನೆ ಸಲ್ಲಿಸಿದರು.

Tap to resize

 ಈ ಸಂದರ್ಭದಲ್ಲಿ  ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್,  ಕೆ ವಾದಿಂದ್ರಾಚಾರ್ಯರು  ರಾಯರ ಶೇಷ ವಸ್ತ್ರ ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು ಈ ಸಂದರ್ಭದಲ್ಲಿ ಶ್ರೀಮಠದ ಅರ್ಚಕ ವರ್ಗದವರು "ವೇದ ಘೋಷ ಮಂತ್ರ" ಪೂರ್ಣ ಕುಂಭ ಸ್ವಾಗತದೊಂದಿಗೆ ಸನ್ನಿಧಿಗೆ ಬರಮಾಡಿಕೊಂಡರು
 

ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಕೂಡ ಜೊತೆಯಲ್ಲಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಕುಟುಂಬವು ಒಟ್ಟಿಗೆ ಆರತಿ ತೆಗೆದುಕೊಳ್ಳುತ್ತಿರುವುದು ಕಾಣಿಸಿದೆ.
 

ಅಕ್ಷತಾ ಈ ವರ್ಷದ ಫೆಬ್ರವರಿಯಲ್ಲಿ ಬ್ರಿಟನ್‌ನ ಪ್ರಥಮ ಮಹಿಳೆಯಾಗಿದ್ದಾಗ ತನ್ನ ಪುತ್ರಿಯರಾದ ಅನುಷ್ಕಾ ಮತ್ತು ಕೃಷ್ಣ ಮತ್ತು ಅವರ ಹೆತ್ತವರೊಂದಿಗೆ ಮಠಕ್ಕೆ ಭೇಟಿ ನೀಡಿದ್ದರು. ಅವರ ಬೆಂಗಳೂರು ಭೇಟಿಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿತ್ತು.
 

ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಹುಟ್ಟಿ ಬೆಳೆದ ರಿಷಿ ಸುನಕ್, ಭಾರತದೊಂದಿಗೆ ಪೂರ್ವಜರ ಸಂಬಂಧವನ್ನು ಹೊಂದಿದ್ದಾರೆ. ಜಿ 20 ಶೃಂಗಸಭೆಗೆ ಬಂದಿದ್ದ  ಕಳೆದ ವರ್ಷ, ಅವರು ಅಕ್ಷತಾ ಅವರೊಂದಿಗೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದರು  

Latest Videos

click me!