ಭಿಕ್ಷೆ ಬೇಡಿ ದೇವಾಲಯಗಳಿಗೆ ಲಕ್ಷ-ಲಕ್ಷ ಹಣ ದಾನ ಮಾಡೋ 80ರ ಅಜ್ಜಿ ಮತ್ತೆ ಸುದ್ದಿಯಲ್ಲಿ

First Published Feb 9, 2021, 10:14 PM IST

ತಾನು ಭಿಕ್ಷೆ ಬೇಡಿ ಹೊಟ್ಟೆತುಂಬಿಸಿ, ಉಳಿದ ಹಣವನ್ನು ಒಟ್ಟು ಮಾಡಿ ಕೂಡಿಟ್ಟಿದ್ದ 1 ಲಕ್ಷ ರು.ಗಳನ್ನು ಇತ್ತೀಚೆಗೆ  ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಾಲಯದ ಅನ್ನದಾನಕ್ಕೆ ದೇಣಿಗೆ ನೀಡಿ ಸುದ್ದಿಯಾದ 80ರ ಅಜ್ಜಿ ಯಾನೆ ಅಶ್ವತ್ಥಮ್ಮ, ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 

ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1 ಲಕ್ಷ ರೂ. ನೀಡಿದ್ದ ಅಜ್ಜಿ ಅಶ್ವತ್ಥಮ್ಮ ವ್ರತಾನುಷ್ಠಾನದೊಂದಿಗೆ 26ನೇ ಬಾರಿ ಶ್ರೀ ಶಬರಿಮಲೆ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದಾರೆ.
undefined
ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಅನ್ನದಾನ ಪೂರೈಸಿ ಶಬರಿಮಲೆ ಯಾತ್ರೆ ಹೊರಟಿದ್ದಾರೆ.
undefined
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಹಾಗೂ ಮಯ್ಯ ಟಿಫಿನ್ ಮಾಲೀಕ ರಾಫವೇಂದ್ರ ಮಯ್ಯ ಸಮ್ಮುಖದಲ್ಲಿ ಅಶ್ವಥಮ್ಮ ಇರುಮುಡಿ ಕಟ್ಟುವ ಕಾರ್ಯ ನಡೆಸಿದರು.
undefined
ಮತ್ತೆ ಸುದ್ದಿಯಲ್ಲಿ ಬಿಕ್ಷೆ ಬೇಡಿ ದೇವಾಲಗಳಿಗೆ ಲಕ್ಷ-ಲಕ್ಷ ಹಣ ದಾನ ಮಾಡೋ 80ರ ಅಜ್ಜೆ
undefined
ಅಯ್ಯಪ್ಪನ ಕ್ಷೇತ್ರ ಸಂದರ್ಶನಕ್ಕೆ ಹೊರಟಿರುವ ಅಶ್ವಥಮ್ಮನಿಗೆ ಗುರುನರಸಿಂಹ, ಆಂಜನೇಯ ಶ್ರೇಯಸ್ಸನ್ನು ಉಂಟುಮಾಡಲಿ ಎಂದು ಸಾಲಿಗ್ರಾಮ ದೇವಳ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಆಡಳಿತ ಹಾರೈಸಿದ್ದಾರೆ. ನಾವು ಕೂಡ ಇವರ ಪ್ರಯಣ ಸುಖಕರವಾಗಿರಲಿ ಎಂದು ಹಾರೈಸೋಣ
undefined
click me!