ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ: ಗೋಮಾತೆಗೆ ಪೂಜೆ ಸಲ್ಲಿಸಿದ ಸಿಎಂ ಬಿಎಸ್‌ವೈ
First Published | Feb 9, 2021, 12:58 PM ISTಬೆಂಗಳೂರು(ಫೆ.09): ಪ್ರತಿಪಕ್ಷಗಳ ತೀವ್ರ ವಿರೋಧ, ಕಾಗದ ಪತ್ರಗಳ ತೂರಾಟ, ಸಭಾಪತಿಗಳ ಮುಂದೆ ಘೋಷಣೆ, ಆಕ್ರೋಶಗಳ ಮಧ್ಯೆ ಗೋಹತ್ಯೆ ನಿಷೇಧಿಸುವ ವಿವಾದಾತ್ಮಕ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020’ ಅನ್ನು ಮಂಡಿಸಿ ಧ್ವನಿಮತದಿಂದ ಅನುಮೋದನೆ ಪಡೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಫಲವಾಗಿದೆ.