ಸಮುದ್ರದಲ್ಲಿ 1.4 ಕಿಮಿ ಲೋಟಸ್ ಫ್ಲೋಟ್ ದಾಖಲೆ ಬರೆದ ಉಡುಪಿಯ 65ರ ಗಂಗಾಧರ್

First Published | Jan 24, 2021, 8:08 PM IST

ಮಲ್ಪೆಯ ಕಡೆಕಾರು ಗ್ರಾಮದ 65ರ ಹರೆಯದ ಗಂಗಾಧರ ಜಿ. ಕಡೆಕಾರು ಅವರು ಭಾನುವಾರ ಲೋಟಸ್ ಫ್ಲೋಟ್ ಶೈಲಿಯಲ್ಲಿ (ಪದ್ಮಾಸನ ಭಂಗಿಯಲ್ಲಿ ಕಾಲುಗಳನ್ನು ಮಡಚಿ, ಸರಪಳಿಯಿಂದ ಬಿಗಿದು, ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ) ಸಮುದ್ರದಲ್ಲಿ 1.40 ಕಿ.ಮಿ.  ಈಜಿ ಹೊಸ ದಾಖಲೆ ನಿರ್ಮಿಸಿದ್ದಾರೆ.
 

ಮಲ್ಪೆಯ ಕಡೆಕಾರು ಗ್ರಾಮದ 65ರ ಹರೆಯದ ಗಂಗಾಧರ ಜಿ. ಕಡೆಕಾರು ಅವರು ಲೋಟಸ್ ಫ್ಲೋಟ್ ಶೈಲಿಯಲ್ಲಿ (ಪದ್ಮಾಸನ ಭಂಗಿಯಲ್ಲಿ ಕಾಲುಗಳನ್ನು ಮಡಚಿ, ಸರಪಳಿಯಿಂದ ಬಿಗಿದು, ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ) ಸಮುದ್ರದಲ್ಲಿ 1.40 ಕಿ.ಮಿ. ಈಜಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ನವರು ಈವರಿಗೆ ಈ ಭಂಗಿಯಲ್ಲಿ 800 ಮೀಟರ್ ಈಜುವ ಗುರಿ ನೀಡಿದ್ದರು, ಆದ್ರೆ ಹಿರಿಯ ರಾಷ್ಟ್ರೀಯ ಈಜುಪಟು, ಸಮುದ್ರ ಈಜು ತರಬೇತುದಾರ ಗಂಗಾಧರ್ ಅವರು ಈ ಗುರಿ ಮೀರಿ 1400 ಮೀಟರ್ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾದರು.
Tap to resize

ಇದುವರೆಗೆ ಯಾರೂ ಈ ದಾಖಲೆಯನ್ನು ಮಾಡಿಲ್ಲ, ಇದು ಹೊಸ ದಾಖಲೆಯಾಗಿದೆ.
ಅಬ್ಬರದ ಅಲೆಗಳಿಗೆ ಎದೆಯೊಡ್ಡಿ, ಕಾಲುಗಳ ಸಹಕಾರ ಇಲ್ಲದೇ ಕೇವಲ ಕೈಗಳಿಂದ ನೀರನ್ನು ಸೀಳುತ್ತಾ, ಇಷ್ಟು ದೂರ ಈಜುವುದಕ್ಕೆ ಅವರು ತೆಗೆದುಕೊಂಡ ಸಮಯ 1 ಗಂಟೆ 13 ನಿಮಿಷ 7 ಸೆಕುಂಡುಗಳು.
ಬೆಳಗ್ಗೆ 8.36 ಗಂಟೆಗೆ ಮಲ್ಪೆ ಪಡುಕರೆ ಬೀಚಿನಲ್ಲಿ ಇಂಡಿಯ ಬುಕ್ ಆಪ್ ರೆಕಾರ್ಡ್ಸ ನ ಪ್ರತಿನಿಧಿ ಹರೀಶ್ ಆರ್. ಮತ್ತು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಸಮ್ಮುಖದಲ್ಲಿ ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಕಟ್ಟಿ ಬೀಗ ಹಾಕಿಸಿಕೊಂಡು ಸಮುದ್ರಕ್ಕೆ ಧುಮುಕಿದರು. 9.40 ಗಂಟೆಗೆ ದಡ ಸೇರಿದರು.
ದಾಖಲೆ ನಿರ್ಮಿಸಿದ ಅವರನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್, ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಕರಾವಳಿ ಕಾವಲುಪಡೆ ಪೊಲೀಸ್ ಅಧೀಕ್ಷಕ ಚೇತನ್ ಆರ್. ಮತ್ತು ಸ್ಥಳೀಯ ಗಣ್ಯರು ಅಭಿನಂದಿಸಿದರು.
ಇತ್ತೀಚಿಗೆ ಯುವಜನತೆಯಲ್ಲಿ ಕಡಿಮೆಯಾಗುತ್ತಿರುವ ಆತ್ಮಸ್ಥೈರ್ಯ ಮತ್ತು ಆತ್ಮರಕ್ಷಣೆಯ ಮನೋಭಾವವನ್ನು ಹೆಚ್ಚಿಸುವುದಕ್ಕೆ ಸ್ಪೂರ್ತಿಯಾಗುವುದಕ್ಕೆ ತಾವು ಈ ರೀತಿ ಸಮುದ್ರದಲ್ಲಿ ಅಪಾಯಕಾರಿ ಸಾಧನೆ ಮಾಡಿದ್ದಾಗಿ ಗಂಗಾಧರ್ ಈ ಸಂದರ್ಭದಲ್ಲಿ ಹೇಳಿದರು

Latest Videos

click me!