ನವದೆಹಲಿಯ ರಾಜಪಥದಲ್ಲಿ ಕರ್ನಾಟಕದ ಉಗ್ರ ನರಸಿಂಹ, ಅಂಜನಾದ್ರಿ ಬೆಟ್ಟ

Published : Jan 23, 2021, 06:17 PM ISTUpdated : Jan 24, 2021, 11:01 AM IST

ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಯ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ವಿಜಯನಗರ ವೈಭವ ಸಾರುವ ಸ್ತಬ್ಧಚಿತ್ರ ಆಯ್ಕೆಗೊಂಡಿದೆ. ನವದೆಹಲಿಯ ರಾಜಪಥದಲ್ಲಿ ನಡೆಯುವ ಮೆರವಣಿಗೆಯಲ್ಲಿ ಕರ್ನಾಟಕದ ನೂತನ ಜಿಲ್ಲೆಯಾದ ವಿಜಯನಗರ ಸಾಮ್ರಾಜ್ಯದ ಇತಿಹಾಸವುಳ್ಳ ಚಿತ್ರ ಭಾಗವಹಿಸಲಿದೆ.  ಸ್ತಬ್ಧಚಿತ್ರ ಏನೆಲ್ಲಾ ಒಳಗೊಂಡಿದೆ ಎನ್ನುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 

PREV
16
ನವದೆಹಲಿಯ ರಾಜಪಥದಲ್ಲಿ ಕರ್ನಾಟಕದ ಉಗ್ರ ನರಸಿಂಹ, ಅಂಜನಾದ್ರಿ ಬೆಟ್ಟ

ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆದಂದು ನವದೆಹಲಿಯ ರಾಜಪಥದಲ್ಲಿ ನಡೆಯಲಿರುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ವಿಜಯನಗರ ವೈಭವ ಸಾರುವ ಸ್ತಬ್ಧಚಿತ್ರ ಆಯ್ಕೆಗೊಂಡಿದೆ. 

26

ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕರ್ನಾಟಕದ ವತಿಯಿಂದ ವಿಜಯ ನಗರ ಸಾಮ್ರಾಜ್ಯವನ್ನು ಪ್ರತಿನಿಧಿಸುವ ಸ್ತಬ್ಧಚಿತ್ರ ಪ್ರದರ್ಶಿಸಲಾಗುತ್ತಿದೆ

36

ಹಂಪಿಯ ಮುಖ್ಯ ದೇವರಾದ ಉಗ್ರ ನರಸಿಂಹ, ಅದರ ಹಿಂಭಾಗದಲ್ಲಿ ಅಂಜನಾದ್ರಿ ಬೆಟ್ಟ, ಪಕ್ಕದಲ್ಲಿ ಸಾಮ್ರಾಟ ಕೃಷ್ಣದೇವರಾಯನ ಪಟ್ಟಾಭಿಷೇಕ ಸಮಾರಂಭದ ದೃಶ್ಯಗಳನ್ನೊಳಗೊಂಡ ಸ್ತಬ್ಧಚಿತ್ರ ನಿರ್ಮಿಸಲಾಗಿದೆ.

46

ಪ್ರತಿವರ್ಷ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಸುಮಾರು 30 ಕಲಾವಿದರು ಭಾಗವಹಿಸಲು ಅವಕಾಶವಿತ್ತು. ಆದರೆ, ಈ ಬಾರಿ ಕೊರೋನಾ ನಿಯಮಾವಳಿಗಳ ಕಾರಣ ಕೇವಲ 12 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.

56

ಶಿವಮೊಗ್ಗ ರಂಗಾಯಣದ 12 ವೃತ್ತಿಪರ ಕಲಾವಿದರು ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಕಲಾವಿದ ಶಶಿಧರ ಅಡಪ ಅವರ ನೇತೃತ್ವದಲ್ಲಿ ಸ್ತಬ್ಧಚಿತ್ರ ಮೂಡಿಬಂದಿದೆ.

66

ದಕ್ಷಿಣ ಭಾರತದ ಎಲ್ಲೆಡೆ ಬಹುತೇಕ ಸ್ಮಾರಕಗಳಿರುವ, ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ವತಿಯಿಂದ ವಿಶ್ವ ಪರಂಪರೆಯ ಸ್ಥಳ ಎಂದು ಗುರುತಿಸಲ್ಪಟ್ಟಿರುವ, ಅತ್ಯಂತ ಪ್ರಸಿದ್ಧವಾದ ಹಾಗೂ ಇದೀಗ ಅವಶೇಷಗಳ ತಾಣವಾಗಿರುವ ಹಂಪಿ ಈ ಸಾಮ್ರಾಜ್ಯದ ಪರಂಪರೆಯಾಗಿದೆ.

click me!

Recommended Stories