ನಮ್ಮೊಂದಿಗೆ ಸೇರಿರುವ 6 ಹೊಸ ಸಹೋದ್ಯೋಗಿಗಳನ್ನು ಸ್ವಾಗತಿಸುತ್ತಿದ್ದೇವೆ ಎಂದು ಭಾಸ್ಕರ್ ರಾವ್ ಅವರು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಪುಟ್ಟ ನಾಯಿಮರಿಗಳ ಜೊತೆ ಪೋಸ್ ಕೊಟ್ಟ ಅವರು ಒಂದು ವರ್ಷದ ತರಬೇತಿಯ ನಂತರ ಇವುಗಳು ಸ್ಫೋಟಕಗಳು ಮತ್ತು ಮಾದಕ ವಸ್ತುಗಳನ್ನು ಪತ್ತೆ ಮಾಡಲಿವೆಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ತಮ್ಮದೇ ಆದ ರೀತಿಯಲ್ಲಿ ರಾಷ್ಟ್ರವನ್ನು ರಕ್ಷಿಸುವ ಕರ್ತವ್ಯವನ್ನು ಇವರೂ ನಿರ್ವಹಿಸಲಿದ್ದಾರೆ ಎಂದು ಬರೆದಿದ್ದಾರೆ.
ಕಪ್ಪು ಬಣ್ಣದ ನಾಯಿ ಮರಿಗಳು ಟೇಬಲ್ಮೇಲೆ ಕುಳಿತು ಪೋಸ್ ಕೊಟ್ಟಿವೆ.
ಜರ್ಮನ್ ಶೆಫರ್ಡ್ ಹೆಸರೇ ಹೇಳುವಂತೆ ಜರ್ಮನಿ ಮೂಲದ ಶ್ವಾನ ತಳಿ. ಮೊದಲ ಜಾಗತಿಕ ಯುದ್ಧ ನಡೆದ ನಂತರ ಈ ಶ್ವಾನವನ್ನು ಅಲ್ಸೇಟಿಯನ್ ವೋಲ್ಫ್ ಡಾಗ್ ಎಂದು ಕರೆಯುತ್ತಾರೆ.
ಜರ್ಮನ್ ಶೆಫರ್ಡ್‌ಗಳನ್ನು ದಿವ್ಯಾಂಗರ ನೆರವಿಗಾಗಿ, ಸ್ಫೋಟಕ ಪತ್ತೆಗಾಗಿ, ಮಿಲಿಟರಿಯಲ್ಲಿಯೂ ಬಳಸಲಾಗುತ್ತದೆ.
ಈ ಶ್ವಾನಗಳು ಮೀಡಿಯಂ ಗಾತ್ರದಿಂದ ದೊಡ್ಡ ಗಾತ್ರದ ತನಕ ಬೆಳೆಯುತ್ತದೆ. ಇವುಗಳಲ್ಲಿ ಗಂಡು ನಾಯಿಗಳು ಹೆಣ್ಣು ನಾಯಿಗಿಂತಲೂ ಗಾತ್ರದಲ್ಲಿ ದೊಡ್ಡದಾಗಿರುತ್ತದೆ.
ಜರ್ಮನ್ ಶೆಫರ್ಡ್‌ಗಳು ಚತುರ ನಾಯಿಗಳು. ಹಾಗಾಗಿಯೇ ಪೊಲೀಸ್ ಇಲಾಖೆ, ಮಿಲಿಟರಿಗೆ ಇದನ್ನೇ ಆಯ್ಕೆ ಮಾಡಲಾಗುತ್ತದೆ.