Bengaluru rains: ಬೆಳ್ಳಂಬೆಳಗ್ಗೆಯೇ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆ, ಎಲ್ಲೆಲ್ಲಿ ಏನೇನು ಅನಾಹುತ? ಇಲ್ಲಿದೆ ಮಾಹಿತಿ

Published : Sep 29, 2026, 05:49 AM IST

ರಾಜ್ಯದಲ್ಲಿ ದುರ್ಬಲವಾಗಿದ್ದ ಮುಂಗಾರು ಮಳೆ ಇದೀಗ ದಿಢೀರ್ ಹವಾಮಾನ ಬದಲಾವಣೆಯಿಂದಾಗ ಮತ್ತೆ ಮಳೆರಾಯ ಚುರುಕುಗೊಂಡಿದ್ದಾನೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆರಾಯನ ಅರ್ಭಟಕ್ಕೆ ಪ್ರಯಾಣಿಕರು, ಜನಜೀವನ ಅಸ್ತವ್ಯಸ್ತ ರಸ್ತೆಗೆ ಮರ ಬಿದ್ದು ಎರಡು ಕಾರು ಸಂಪೂರ್ಣ ಖಖಂ

PREV
13
Bengaluru rains: ಬೆಳ್ಳಂಬೆಳಗ್ಗೆಯೇ ಮಳೆರಾಯನ ಅರ್ಭಟ

ರಾಜ್ಯದಲ್ಲಿ ದುರ್ಬಲವಾಗಿದ್ದ ಮುಂಗಾರು ಮಳೆ ಇದೀಗ ದಿಢೀರ್ ಹವಾಮಾನ ಬದಲಾವಣೆಯಿಂದಾಗ ಮತ್ತೆ ಮಳೆರಾಯ ಚುರುಕುಗೊಂಡಿದ್ದಾನೆ. ರಾತ್ರಿಯಷ್ಟೇ ಶುಭ್ರ ಆಕಾಶವಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆರಾಯನ ಅರ್ಭಟಕ್ಕೆ ಪ್ರಯಾಣಿಕರು, ಜನಜೀವನ ಅಸ್ತವ್ಯಸ್ತ ನಿರ್ಮಾಣವಾಗಿ ಕೆಲವೆಡೆ ಟ್ರಾಫಿಕ್ ಜಾಮ್ ಆಗಿದೆ.

23
ಬೆಳಗ್ಗೆಯಿಂದ ನಿರಂತರ ಸುರಿಯುತ್ತಿರುವ ಮಳೆ

ಬೆಳಗ್ಗೆ ಮೂರೂವರೆ ಗಂಟೆಯಿಂದ ಮಳೆ ಶುರುವಾಗಿದೆ. ಯಶವಂತಪುರ, ಮೆಜೆಸ್ಟಿಕ್, ಮಲ್ಲೇಶ್ವರಂ, ಕಾರ್ಪೋರೇಷನ್, ಮಾರ್ಕೆಟ್, ಲಾಲ್ ಬಾಗ್ ಕಡೆಗಳಲ್ಲಿ ಮಳೆಯಾಗುತ್ತಿದೆ.

ಅರ್ಧ ಗಂಟೆ ಸುರಿದು ನಿಂತ ಮಳೆ

ಬೆಳ್ಳಂಬೆಳಗ್ಗೆಯೇ ಅರ್ಧಗಂಟೆ ಭರ್ಜರಿ ಮಳೆ ಸುರಿದು ಈಗ ತುಸು ಕಡಿಮೆಗೊಂಡಿದೆ. ಬೆಂಗಳೂರಿನ ಏಕಾಏಕಿ ಸುರಿದ ಮಳೆಯಿಂದ ಕೆಲವಡೆ ರಸ್ತೆ ಮೇಲೆ ನೀರು ಹರಿದಿದೆ. ಬೆಳಗ್ಗೆಯಿಂದ ನಿರಂತರವಾಗಿ 10 ನಿಮಿಷಗಳಿಗೊಮ್ಮೆ ಬರುತ್ತಿರುವ ಮಳೆ ಸುರಿಯುತ್ತಿದೆ.

33
ಮಂತ್ರಿಮಾಲ್ ಮುಂದಿನ ರಸ್ತೆಯಲ್ಲಿ ನಿಂತ ಮಳೆ ನೀರು

ಮಂತ್ರಿಮಾಲ್ ಮುಂದಿನ ರಸ್ತೆಯಲ್ಲಿ ನಿಂತ ಮಳೆ ನೀರು

ಬೆಳಗ್ಗೆ ಸುರಿದ ಮಳೆಗೆ ಮಂತ್ರಿಮಾಲ್ ಮುಂಭಾಗದ ರಸ್ತೆಯಲ್ಲಿ ನೀರು ನಿಂತಿದೆ. ಪ್ರತಿ ಭಾರಿಯೂ ಸಣ್ಣ ಮಳೆಯಾದರೂ ನೀರು ನಿಲ್ಲುತ್ತೆ. ಸಮಸ್ಯೆ ಪರಿಹಾರವಾಗಿ ಇತ್ತೀಚೆಗೆ ಚರಂಡಿ ನಿರ್ಮಾಣ ಮಾಡಿದ್ದರೂ ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಸಣ್ಣ ಮಳೆ ಬಂದ್ರೂ ಈಗಲೂ ಅರ್ಧ ಅಡಿಗಳಷ್ಟು ನೀರು ನಿಂತಿದೆ.

ಮಲ್ಲೇಶ್ವರಂನಲ್ಲಿ ಧರೆಗುರುಳಿದ ಮರ

ಬೆಳಗ್ಗೆ ಸುರಿದ ಮಳೆಯಿಂದಾಗಿ ಮಲ್ಲೇಶ್ವರಂ ಸ್ಮಾರ್ಟ್ ಬಜಾರ್ ಮುಂಭಾಗದಲ್ಲಿನ ಮರ ಧರೆಗುರುಳಿದೆ. ಮರದ ಕೆಳಗೆ ನಿಂತಿದ್ದ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿವೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories