ಬಾಯಿಚಪಲಕ್ಕೆ ಸರ್ಕಾರನ ಇಕ್ಕಟ್ಟಿಗೆ ಸಿಲುಕಿಸಿದ್ರಾ ಶಿವಲಿಂಗೇಗೌಡ? 'ಗೌರವ' ಕೊಡೋಕೆ ನಾವ್ ರೆಡಿ, ರಸ್ತೆ ಸರಿ ಮಾಡಿ' ಎಂದ ಸಿಲಿಕಾನ್ ಸಿಟಿ ಜನ!

Published : Sep 24, 2026, 11:13 AM IST

ಸಚಿವ ಶಿವಲಿಂಗೇಗೌಡರು ಅಧಿಕಾರಿಗಳಿಗೆ 'ಗೌರವ' ಕೊಡುವ ಬಗ್ಗೆ ನೀಡಿದ್ದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ಇದೀಗ ಬೆಂಗಳೂರಿನ ಪೀಣ್ಯದ ವಾಹನ ಸವಾರರು ಇದೇ ಹೇಳಿಕೆ ಮುಂದಿಟ್ಟುಕೊಂಡು ಸಚಿವರಿಗೆ ಸವಾಲು ಹಾಕಿದ್ದಾರೆ.

PREV
15
ಗೌರವಯುತ ಲಂಚದ ಬಗ್ಗೆ ಸಚಿವ ಶಿವಲಿಂಗೇಗೌಡ ಹೇಳಿಕೆ ವೈರಲ್

ಇತ್ತೀಚೆಗೆ ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ಧರ್ಮ' ಎಂಬ ಸಚಿವ ಶಿವಲಿಂಗೇಗೌಡ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಭ್ರಷ್ಟರಿಗೆ ಪ್ರೊತ್ಸಾಹ ಕೊಡೋ ಇಂಥ ಸಚಿವರು ರಾಜ್ಯದಲ್ಲಿದ್ದಾರೆ ಇದು ಭ್ರಷ್ಟ ಸರ್ಕಾರ ಅನ್ನೋದಕ್ಕೆ ಇದಕ್ಕಿಂತ ಸಾಕ್ಷ್ಯ ಬೇರೇನು ಬೇಕು? ಎಂದು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

25
ಅದೇನ್ ಗೌರವ ಕೊಡ್ಬೇಕೋ ಕೊಡ್ತೀವಿ, ಈ ಕೆಲಸ ಮಾಡಿಕೊಡಿ..!

ಸಾರ್ವಜನಿಕರು ಆಕ್ರೋಶದ ಬಳಿಕ ಸಚಿವ ಶಿವಲಿಂಗೇಗೌಡ 'ನಾನು ಹಂಗಂದಿಲ್ಲ..' ಅಂತಾ ತಿಪ್ಪೇ ಸಾರಿಸಿದರು ನೆಟಿಜನ್ ಸುಮ್ಮನೆ ಬಿಟ್ಟಾರೆಯೇ?

ಸಚಿವ ಶಿವಲಿಂಗೇಗೌಡರ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟಿಜನ್ ಅವರದೇ ವಿಭಿನ್ನ ಶೈಲಿಯಲ್ಲಿ ಕೆಲವರು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು 'ನಾವ್ ಅದೇನ್ ಗೌರವ ಬೇಕೋ ಅದನ್ ಕೊಡೋಕೆ ರೆಡಿ, ಈ ಕೆಲಸ ಮಾಡಿಸಿಕೊಡಿ ನೋಡೋಣ' ಎಂದು ಸಚಿವ ಶಿವಲಿಂಗೇಗೌಡರಿಗೇ ಸವಾಲ್ ಹಾಕಿದ್ದಾರೆ.

35
ಪೀಣ್ಯ ರಸ್ತೆ ತಂಬಾ ಗುಂಡಿಗಳು ನೆಟಿಜನ್ ಆಕ್ರೋಶ

ಗೌರವಯುತವಾಗಿ ಏನ್ ಕೊಡ್ಬೇಕೋ ಕೊಡ್ತೀವಿ, ಗೌರವಯುತವಾಗಿ ರಸ್ತೆ ಸರಿ ಮಾಡ್ಸಿ ಸಾರ್‌.. ಸಚಿವರ ಹೇಳಿಕೆಯಂತೆ ಸಿಲಿಕಾನ್ ಸಿಟಿ ಜನರು ಸಿದ್ಧರಿದ್ದಾರೆ. ಈಗ ಸಚಿವ ಮಾಡಿಸಿಕೊಡ್ತಾರಾ ಎಂಬ ಪ್ರಶ್ನೆ ಎದ್ದಿದೆ.

45
ಬೇಸತ್ತ ವಾಹನ ಸವಾರರು ಸರ್ಕಾರಕ್ಕೆ ವಿಭಿನ್ನ ರೀತಿಯಲ್ಲಿ ಮನವಿ

ಬೆಂಗಳೂರಿನ ಪೀಣ್ಯ ಮುಖ್ಯರಸ್ತೆಯಲ್ಲಿ ಗುಂಡಿಗಳಿಂದ ತುಂಬಿ ಹೋಗಿವೆ. ಈ ವಾಹನ ಸವಾರರು ದಿನನಿತ್ಯ ನರಕ ಅನುಭವಿಸುತ್ತಿದ್ದಾರೆ. ರಸ್ತೆ ಗುಂಡಿಗೆ ಬೇಸತ್ತ ವಾಹನ ಸವಾರರು ಈಗ ಸಚಿವ ಶಿವಲಿಂಗೇಗೌಡರ ಹೇಳಿಕೆಯಾದ 'ಗೌರವಯುತ' ಎಂಬ ಬೋರ್ಡ್ ಮುಂದಿಟ್ಟುಕೊಂಡು ರಸ್ತೆ ರಿಪೇರಿಗ ಮನವಿ ಮಾಡಿದ್ದಾರೆ.

55
ನಾವ್ ಕೊಡ್ತೀವಿ..; ನೀವು ರಸ್ತೆ ಮಾಡಿಸಿ..!

ಸಚಿವ ಶಿವಲಿಂಗೇಗೌಡರು ನಾಲಗೆ ಚಪಲಕ್ಕೆ ಮಾತಾಡಿ ಇದೀಗ ತಾವು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಲ್ಲದೆ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಈಗ ರಸ್ತೆ ಗುಂಡಿಗೆ ಬೇಸತ್ತ ಸಿಲಿಕಾನ್ ಸಿಟಿಯ ವಾಹನ ಸವಾರರು 'ನಾವು ಕೊಡ್ತೀವಿ, ನೀವು ರಸ್ತೆ ಮಾಡಿಸಿ ಕೊಡಿ' ಅಂತಾ ಬೋರ್ಡ್ ಹಿಡಿದು ಶಿವಲಿಂಗೇಗೌಡರ ಹಿಂದೆ ಬಿದ್ದಿದ್ದಾರೆ. ಪೀಣ್ಯ ರಸ್ತೆಯುದ್ದಕ್ಕೂ ಫುಟ್ಪಾತ್ ಮೇಲೆ 'ಗೌರವಯುತ' ಅನ್ನೋ ಬೋರ್ಡ್ ಇಟ್ಟು 'ಇಂತಿ ನೊಂದ ಸವಾರರು' ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories