ಕೊರೋನಾ ಕಾಟದ ಮಧ್ಯೆ SSLC ಪರೀಕ್ಷೆ ಆರಂಭ, ವೈರಸ್‌ ಭಯವಿಲ್ಲದೆ ಎಕ್ಸಾಮ್‌ಗೆ ಬಂದ ವಿದ್ಯಾರ್ಥಿಗಳು

First Published Jun 25, 2020, 11:47 AM IST

ಬೆಂಗಳೂರು(ಜೂ.25): ಮಹಾಮಾರಿ ಕೊರೋನಾ ಆತಂಕದ ಮದ್ಯೆ ಇಂದಿನಿಂದ(ಗುರುವಾರ) ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ. ಕೊರೋನಾ ವೈರಸ್‌  ಹಾವಳಿಯಿಂದಾಗಿ ಪರೀಕ್ಷೆಯನ್ನ ಮುಂದೂಡುತ್ತಾ ಬರಲಾಗಿತ್ತು. ಆದರೆ ಇದೀಗ ಕೊರೋನಾ ಜೊತೆಗೆ ಬದುಕುವುದು ಅನಿವಾರ್ಯವಾಗಿದೆ. ಹೀಗಾಗಿ ಪರೀಕ್ಷೆಯನ್ನ ನಡೆಸಲು ಸರ್ಕಾರ ಮುಂದಾಗಿದೆ. ರಾಜ್ಯದ ಎಲ್ಲ ಕಡೆ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆಯುತ್ತಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. 
 

ಬಾಗಲಕೋಟೆ ನಗರದಲ್ಲಿ ವಿದ್ಯಾರ್ಥಿಗಳು ಗುಂಪಾಗಿರೋದನ್ನು ಕಂಡು ಸಾಮಾಜಿಕ ಅಂತರ ಕಾಯಲು ಸೂಚಿಸಿದ ಶಾಲಾ ಸಿಬ್ಬಂದಿ
undefined
ಬಾಗಲಕೋಟೆ ನಗರದ ಬಸವೇಶ್ವರ ಹೈಸ್ಕೂಲ್‌ನ ಪರೀಕ್ಷಾ ಕೇಂದ್ರದ ಬಳಿ ಜಮಾಯಿಸಿದ್ದ ಪೋಷಕರು
undefined
ಮಂಗಳೂರಿನ ಸರ್ಕಾರಿ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು
undefined
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳಿಗೆ ಹೂವು ನೀಡಿ ಅಭಿನಂದನೆ ಸಲ್ಲಿಸಿದ ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ
undefined
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮತಕ್ಷೇತ್ರದ ಕ್ಷೇತ್ರದ SSLC ವಿದ್ಯಾರ್ಥಿಗಳಿಗೆ ಬಿಸ್ಕತ್ ಪೊಟ್ಟಣ ವಿತರಿಸಿದ ಶಾಸಕ ಆರ್. ವಿ. ದೇಶಪಾಂಡೆ
undefined
ಉಡುಪಿ ನಗರದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಜಿಪಂ ಅಧ್ಯಕ್ಷ ದಿನಕರ ಬಾಬು
undefined
ಬಾಗಲಕೋಟೆ ನಗರದ ಹೆಣ್ಣು ಮಕ್ಕಳ ಹೈಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಭೇಟಿದ ಡಿಡಿಪಿಐ ಶ್ರೀಶೈಲ ಬಿರಾದಾರ, ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸಿ, ಜಾಗೃತಿ ವಹಿಸುವಂತೆ ಸೂಚನೆ
undefined
ಗದಗ ತಾಲೂಕಿನ ಮುಳಗುಂದ ಸಮೀಪದ ಹೊಸೂರು ಗ್ರಾಮದ ಕಂಟೈನ್ಮೆಂಟ್ ಝೋನ್‌ನಲ್ಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಖಾಸಗಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಪಿಎಸ್ಐ ವಾಸುದೇವ ಹುಲ್ಲೂರ ಹಾಗೂ ಸಿಬ್ಬಂದಿ
undefined
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ಕೊರೋನಾ ಭಯದಿಂದ ಹೊರ ಬಂದು ಪರೀಕ್ಷೆ ಬರೆಯಲು ಪ್ಲಾನ್ ಮಾಡಿದ ಶಿಕ್ಷಣ ಇಲಾಖೆ
undefined
click me!