ವಿಶ್ವಯೋಗ ದಿನಕ್ಕೆ ಸಾಥ್ ಕೊಟ್ಟ 11 ತಿಂಗಳ ಪುಟ್ಟ ಕಂದ, ನೋಡೋದೆ ಚೆಂದ!

First Published Jun 22, 2020, 6:00 PM IST

ವಿಶ್ವಯೋಗ ದಿನದಂದು ಜಗತ್ತಿನ ಮೂಲೆ ಮೂಲೆಯಲ್ಲೂ ಜನರು ಯೋಗ ಮಾಡಿದ್ದಾರೆ ಈ ಮೂಲಕ ಆರನೇ ಅಂತರಾಷ್ಟ್ರೀಯ ಯೋಗಗ ದಿನವನ್ನು ಯಶಸ್ವಿಯಾಗಿದ್ದಾರೆ. ಹೀಗಿರುವಾಗ ದಕ್ಷಿಣ ಕನ್ನಡ ಜಿಲ್ಲೆಯ ಹನ್ನೊಂದು ತಿಂಗಳ ಪುಟ್ಟ ಕಂದ ಕೂಡಾ ಯೋಗ ಮಾಡಿ ಈ ದಿನಕ್ಕೆ ಸಾಥ್ ನೀಡಿದ್ದು, ಸದ್ಯ ಎಲ್ಲರ ಗಮನ ಸೆಳೆದಿದೆ.

ಜೂನ್ 21 ರಂದು ಆರನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದೆ. ಕೊರೋನಾ ಆತಂಕ ಹಿನ್ನೆಲೆ ಈ ಬಾರಿ ಸಾರ್ವಜನಿಕ ಯೋಗಾಭ್ಯಾಸ ಬೇಡವೆಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು.
undefined
ಸರ್ಕಾರದ ಮನವಿ ಹಾಗೂ ಕೊರೋನಾ ನಿಯಂತ್ರಿಸುವಲ್ಲಿ ಹೆಚ್ಚಿನ ಒತ್ತು ನೀಡಿದ ಜನರು ಮನೆಯಲ್ಲೇ ಯೋಗ ಮಾಡಿ ಈ ದಿನವನ್ನಾಚರಿಸಿದ್ದಾರೆ.
undefined
ಸಿನಿಮಾ ನಟರು, ರಾಜಕೀಯ ಗಣ್ಯರು ಸೇರಿದಂತೆ ಬಹುತೇಕ ಎಲ್ಲರೂ ಯೋಗ ಮಾಡಿದ ತಮ್ಮ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
undefined
ಇವೆಲ್ಲದರ ನಡುವೆ ಸದ್ಯ ಹನ್ನೊಂದು ತಿಂಗಳ ಪುಟ್ಟ ಕಂದಮ್ಮ ಮಾಡಿದ ಯೋಗಾಭ್ಯಾಸ ಸದ್ಯ ಎಲ್ಲರ ಗಮಗನ ಸೆಳೆದಿದೆ. ಜೊತೆಗೆ ಈ ಪ್ರತಿಭೆ ಯಾರು ಎಂಬ ಹುಡುಕಾಟವೂ ಆರಮಂಭವಾಗಿದೆ.
undefined
ಈ ಪುಟಾಣಿ ಬೇರಾರೂ ಅಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಸುಳುಗೋಡಿ ಡಾ. ಗೌರಿಶಂಕರ ಸಿ. ಕೆ ಹಾಗೂ ಶ್ರೇಯಸ್ವಿನಿ ದಂಪತಿ ಪುತ್ರಿ ಆದ್ಯಾ ಪ್ರಾಪ್ತಿ.
undefined
ಅಡ್ಯನಡ್ಕ ಬಳಿಯ ಗುಂಪೆ ನಿವಾಸದಲ್ಲಿ ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಅವರು ತಮ್ಮ ಮೊಮ್ಮಗಳ ಯೋಗದ ಪರಿಯನ್ನು ಸೆರೆ ಹಿಡಿದಿದ್ದಾರೆ.
undefined
click me!