ತುಮಕೂರಿನ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗಸ್ವಾಮಿಇಂದು ಬೆಳಗ್ಗೆ ಕಾವೇರಿ ನಿವಾಸದಲ್ಲಿಸೌಹಾರ್ದಯುತವಾಗಿ ಸಿಎಂ ಭೇಟಿಯಾಗಿ ಮಾತುಕತೆ
ಸಿಎಂ ಕಾವೇರಿ ನಿವಾಸದಲ್ಲಿರುವ ಕರುವನ್ನು ಮೈದಡವಿದ ಶ್ರೀಗಳು
ಯಲಹಂಕ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ಅವರು ಯಡಿಯೂರಪ್ಪ ಅವರಿಗೆ ಇದನ್ನು ಒಂದು ತಿಂಗಳ ಹಿಂದೆಕೊಡುಗೆಯಾಗಿ ನೀಡಿದ್ದಾರೆ.
ಮುಖ್ಯಮಂತ್ರಿ ಸೇರಿದಂತೆ ಅವರ ಕುಟುಂಬ ವರ್ಗ ಹೊಸ ಅತಿಥಿಗಳನ್ನು ಸ್ವಾಗತ ಮಾಡಿದ್ದರು.
ಕಾವೇರಿ ನಿವಾಸದಲ್ಲಿ ಇವುಗಳಿಗೆ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿ, ಹಸುಗಳ ಆರೈಕೆಯನ್ನು ಸಿಎಂ ಬಿಎಸ್‌ವೈ ಕುಟುಂಬದವರೇ ನೋಡಿಕೊಳ್ಳುತ್ತಿದ್ದಾರೆ.
ಇನ್ನು ಕರುವನ್ನು ಬಹಳವಾಗಿ ಇಷ್ಟಪಟ್ಟಿದ್ದ ಸಿಎಂ ಯಡಿಯೂರಪ್ಪ ಅದರೊಂದಿಗೆ ಆಟವಾಡಿದ್ದ ವಿಡಿಯೋ ಕಳೆದೊಂದು ತಿಂಗಳ ಹಿಂದೆ ವೈರಲ್ ಆಗಿತ್ತು.
ಕರುವಿನೊಂದಿಗೆ ಸಮಯ ಕಳೆಯುತ್ತಿರುವ ಸಿಎಂ ಯಡಿಯೂರಪ್ಪ.