ಸಿದ್ಧಾರ್ಥನ ಮಗನ ವರಿಸೋ ಡಿಕೆಶಿ ಮಗಳು ಸಾವಿರ ಕೋಟಿ ಒಡತಿ...!

First Published | Jun 4, 2020, 9:50 AM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗ್ಡೆ ಹಿರಿಯ ಪುತ್ರ ಅಮರ್ಥ್ಯ‌ ಹೆಗ್ಡೆಗೆ ಮದುವೆ ಮಾಡಲು ಇತ್ತೀಚೆಗೆ ಉಭಯ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ. ಇಲ್ಲಿದೆ ಐಶ್ವರ್ಯಾ ಹಾಗೂ ಅಮರ್ತ್ಯ ಫೋಟೋಗಳು

ಎಸ್‌.ಎಂ. ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ (ಸಿದ್ಧಾರ್ಥ ಹೆಗ್ಡೆ) ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಹಿರಿಯ ಪುತ್ರ ಅಮರ್ಥ್ಯ‌ ಹೆಗ್ಡೆ ಜೊತೆ ಕಾಂಗ್ರೆಸ್‌ನ ‘ಟ್ರಬಲ್‌ಶೂಟರ್‌’ ಡಿ.ಕೆ. ಶಿವಕುಮಾರ್‌ ಹಿರಿಯ ಪುತ್ರಿ ಐಶ್ವರ್ಯಾ ಮದುವೆ ನಡೆಸಲು ಮಾತುಕತೆ ನಡೆದಿದೆ.
15 ದಿನಗಳ ಹಿಂದೆ ಕೃಷ್ಣ ನೇತೃತ್ವದಲ್ಲಿ ಉಭಯ ಕುಟುಂಬಗಳ ಹಿರಿಯರು ಮಾತುಕತೆ ನಡೆಸಿದರು. ಈ ವೇಳೆ ಇಬ್ಬರಿಗೂ ಮದುವೆ ಮಾಡುವ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.
Tap to resize

ಶಿವಕುಮಾರ್‌ ಹಾಗೂ ದಿವಂಗತ ಸಿದ್ಧಾಥ್‌ರ್‍ ಆತ್ಮೀಯರಾಗಿದ್ದರು. ಅಲ್ಲದೆ ಉದ್ಯಮದಲ್ಲಿ ಪಾಲುದಾರರೂ ಆಗಿದ್ದರು ಎನ್ನಲಾಗಿದೆ.ಅಷ್ಟೇ ಅಲ್ಲದೆ ಸಿದ್ಧಾರ್ಥ ಅವರ ಮಾವ ಎಸ್‌.ಎಂ. ಕೃಷ್ಣ ಅವರು ಡಿ.ಕೆ. ಶಿವಕುಮಾರ್‌ ಅವರ ರಾಜಕೀಯ ಗುರು.
ಎರಡೂ ಕುಟುಂಬಗಳು ಸಂಬಂಧ ಬೆಳೆಸಿಕೊಳ್ಳಲು ನಿಶ್ಚಯಿಸಿದ್ದು, ಇದರ ಭಾಗವಾಗಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಸಿಡಿ ಮಾಲೀಕ ದಿವಂಗತ ವಿ. ಜಿ. ಸಿದ್ಧಾರ್ಥ್ ಕುಟುಂಬ
ಕೈ ಮುಖಂಡ, ಕನಕಪುರದ ಬಂಡೆ ಡಿ.ಕೆ. ಶಿವಕುಮಾರ್‌ಗೆ ಮೂರು ಮಕ್ಕಳು - ಐಶ್ವರ್ಯಾ, ಆಭರಣ ಹಾಗೂ ಆಕಾಶ್.
2008ರ ಚುನಾ​ವ​ಣೆ​ಯಲ್ಲಿ ತಮ್ಮ 12 ವರ್ಷ ವಯ​ಸ್ಸಿನ ಪುತ್ರಿ ಐಶ್ವರ್ಯಾ ಹೆಸ​ರಿಲ್ಲಿ 9.50 ಲಕ್ಷ ರೂ. ಮೌಲ್ಯದ 950 ಗ್ರಾಂ ಚಿನ್ನಾ​ಭ​ರಣ ಇರು​ವು​ದಾಗಿ ಅಫಿಡವಿಟ್‌ನಲ್ಲಿ ಘೋಷಿಸಿದ್ದರು ಡಿಕೆಶಿ.
ತಮ್ಮ 18ನೇ ವಯ​ಸ್ಸಿ​ನಲ್ಲಿ ಐಶ್ವರ್ಯಾ ಮುಂಬೈ​ನಲ್ಲಿ ಖರೀ​ದಿ​ಸಿದ ಅಪಾರ್ಟ್‌ಮೆಂಟ್‌ ಬೆಲೆ ಬರೋ​ಬ್ಬರಿ 1 ಕೋಟಿ ರೂ!.ಐಶ್ವರ್ಯಾ ಅವರ ಬಳಿ 2018ರಲ್ಲಿ ಒಟ್ಟು 5.17 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 102.88 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳಿವೆ.
22 ವರ್ಷದ ಐಶ್ವರ್ಯಾ ಎಂಜಿನಿಯರಿಂಗ್ ಪದವೀಧರೆ. ಸದ್ಯ ತನ್ನ ತಂದೆ ಸ್ಥಾಪಿಸಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜೀಸ್ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ.
ಇನ್ನು ವಿ. ಜಿ. ಸಿದ್ಧಾರ್ಥ ಸಾವಿಗೂ ಮೊದಲೇ ಈ ಮದುವೆ ಮಾತುಕತೆ ನಡೆದಿತ್ತು ಎಂಬ ವಿಚಾರ ತಿಳಿದು ಬಂದಿದೆ.
ಇನ್ನು ಅಮೆರಿಕದಲ್ಲಿ ಶಿಕ್ಷಣ ಪೂರೈಸಿರುವ 22 ವರ್ಷದ ಅಮರ್ತ್ಯ ಸದ್ಯ ತನ್ನ ತಾಯಿ ಜೊತೆ ಉದ್ಯಮ ನೋಡಿಕೊಳ್ಳುತ್ತಿದ್ದಾರೆ.

Latest Videos

click me!