ಕೆ ಗುಡಿ ಯಿಂದ ಬೂದಿಪಡಗಕ್ಕೆ ಸಾಕಾನೆ ಶಿಬಿರ ಸ್ಥಳಾಂತರ; ಹೊಸ ಸಫಾರಿ ಕೇಂದ್ರ ಆರಂಭಕ್ಕೂ ಚಿಂತನೆ

Published : Jul 04, 2024, 10:33 PM IST

 ಚಾಮರಾಜನಗರ ಅಂದ್ರೆ ಅತಿ ಹೆಚ್ಚು ಕಾಡು ಹಾಗೂ ವನ್ಯ ಪ್ರಾಣಿಗಳನ್ನು ಹೊಂದಿರುವ ಏಕೈಕ ಪ್ರದೇಶ. ಇಲ್ಲಿಯವರೆಗೂ ಕೂಡ ಜಿಲ್ಲೆಯಲ್ಲಿ ಒಂದೇ ಸಾಕಾನೆ ಶಿಬಿರವಿತ್ತು. ಆದ್ರೆ ಇದೀಗಾ ಅರಣ್ಯ ಇಲಾಖೆ ಶೀಘ್ರದಲ್ಲೇ ಮತ್ತೊಂದು ಆನೆ ಶಿಬಿರವನ್ನು ನಿರ್ಮಾಣ ಮಾಡ್ತಿದೆ. ಇದರ ಜೊತೆಗೆ ಸಫಾರಿ ಕೇಂದ್ರವನ್ನು ತೆರೆಯುವ ಸಿದ್ದತೆ ನಡೆಸ್ತಿದೆ. ಈ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ಲ್ಯಾನ್ ಮಾಡಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..  

PREV
15
 ಕೆ ಗುಡಿ ಯಿಂದ ಬೂದಿಪಡಗಕ್ಕೆ ಸಾಕಾನೆ ಶಿಬಿರ ಸ್ಥಳಾಂತರ;  ಹೊಸ ಸಫಾರಿ ಕೇಂದ್ರ ಆರಂಭಕ್ಕೂ ಚಿಂತನೆ

ಚಾಮರಾಜನಗರ (Chamarajanagar) ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ(Biligirirangana betta) ಹುಕಿಸಂರಕ್ಷಿತಾರಣ್ಯದಲ್ಲಿ ಹೊಸದಾಗಿ ಆನೆ ಕ್ಯಾಂಪ್(Elephant Camp) ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಶೀಘ್ರದಲ್ಲೇ ಚಾಮರಾಜನಗರ ತಾಲೂಕಿನ ಬೂದಿಪಡಗ ವಲಯದಲ್ಲಿ ಹೊಸ ಆನೆ ಕ್ಯಾಂಪ್ ಸ್ಥಾಪನೆಯಾಗಲಿದೆ. ಚಾಮರಾಜನಗರ ತಾಲೂಕಿನ ಕೆ ಗುಡಿಯಲ್ಲಿ ಆನೆ ಶಿಬಿರವಿತ್ತು. ವಿಕೇಂಡ್ ಬಂದ್ರೆ ಸಾಕು ಸಾವಿರಾರು ಪ್ರವಾಸಿಗರ ದಂಡೆ ಕೆ.ಗುಡಿ ಗೆ ಹರಿದು ಬರುತ್ತೆ. ಆದರೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೂದಿಪಡಗದಲ್ಲಿ ಸಾಕಾನೆ ಶಿಬಿರ ನಿರ್ಮಾಣ ಸಂಬಂಧ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು.

25

ನಾಲ್ಕು  ವರ್ಷದ  ತರುವಾಯ ಉದ್ಘಾಟನೆಗೆ ಸಾಕಾನೆ ಶಿಬಿರ ಸಜ್ಜಾಗಿದೆ. ಕೆ ಗುಡಿ ಹುಲಿ ಸಂರಕ್ಷಿತಾರಣ್ಯದ ಕೋರ್ ವಲಯದಲ್ಲಿದೆ. ಈ ಹಿನ್ನಲೆ ಅದನ್ನು ಹೊರಭಾಗಕ್ಕೆ ಶಿಪ್ಟ್ ಮಾಡುವಂತೆ ಒತ್ತಾಯ ಕೇಳಿಬಂದಿತ್ತು. ಇದೀಗಾ ಚಾಮರಾಜನಗರ ಜಿಲ್ಲೆಯಲ್ಲಿ ಎರಡನೇ ಸಾಕಾನೆ ಶಿಬಿರ ಬೂದಿಪಡಗದಲ್ಲಿ ನಿರ್ಮಾಣವಾಗ್ತಿದೆ. ದುಬಾರೆ ಮಾದರಿಯಂತೆ ಆನೆ ಶಿಬಿರ ನಿರ್ಮಾಣದ ಬಳಿಕ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈಗಾಗ್ಲೇ ಕೆ ಗುಡಿಯಲ್ಲಿ ಒಂದು ಸಾಕಾನೆ ಇದ್ದು, ಇನ್ನೂ ಎರಡು ಅಥವಾ ಮೂರು ಆನೆಗಳನ್ನು ಬೇರೆ ಶಿಬಿರದಿಂದ ಕರೆತಂದು ಒಟ್ಟು ನಾಲ್ಕು ಆನೆಗಳೊಂದಿಗೆ ಸಾಕಾನೆ  ಶಿಬಿರ ಆರಂಭಿಸಲು ಚಿಂತಿಸಿದೆ.
 

35

ಇನ್ನೂ ಬರೀ ಸಾಕಾನೆ ಶಿಬಿರವಷ್ಟೇ ಅಲ್ಲ ಪ್ರವಾಸಿಗರಿಗಾಗಿ ಹೊಸ ಸಫಾರಿ ಕೇಂದ್ರ ಕೂಡ ಆರಂಭಿಸುವ ಚಿಂತನೆ ಕೂಡ ನಡೆಸಿದ್ದಾರೆ. ಸರ್ಕಾರ ಹಾಗೂ ಎನ್ ಟಿಸಿಎ  ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವಣೆ ಕೂಡ ಸಲ್ಲಿಸಿದ್ದಾರೆ. ಸಫಾರಿ ಕೇಂದ್ರ ಆರಂಬಿಸುವ ಮೂಲಕ ಪ್ರವಾಸಿಗರನ್ನು ಬಿಆರ್ ಟಿ ಹುಲಿ ಸಂರಕ್ಷಿತಾರಣ್ಯದತ್ತ ಸೆಳೆಯುವ ಪ್ಲ್ಯಾನ್ ಮಾಡಿದೆ. 
 

45

ಏಕೆಂದರೆ ಬೂದಿಪಡಗ ಪ್ರದೇಶ ಚಾಮರಾಜನಗರ ದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸಮೀಪ ಬರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ಹೊರರಾಜ್ಯದ  ಪ್ರವಾಸಿಗರು ಕೂಡ ವೀಕ್ಷಣೆ ಮಾಡಲೂ ಅವಕಾಶವಾಗುತ್ತದೆ. ಆ ಮೂಲಕ ಪ್ರವಾಸೋದ್ಯಮ ಚಟುವಟಿಕೆ ಜೊತೆಗೆ ಸಾಕಾನೆ ಶಿಬಿರದಲ್ಲಿ ಆನೆಗಳ ಚಟುವಟಿಕೆ ನೋಡಲೂ ಅವಕಾಶ ಕಲ್ಪಿಸಿದಂತಾಗುತ್ತದೆ ಎಂಬ ಪ್ಲ್ಯಾನ್ ಮಾಡಿದೆ.

55

ಒಟ್ನಲ್ಲಿ ಚಾಮರಾಜನಗರ ಜಿಲ್ಲೆಯ ಬಂಡೀಪುರದ ರಾಮಪುರದಲ್ಲಿ ಆನೆ ಶಿಬಿರವಿದೆ. ಈ ಆನೆ ಶಿಬಿರಕ್ಕೆ ಪ್ರವಾಸಿಗರ ನಿರ್ಬಂಧವಿದೆ. ಇದೀಗಾ ಬಿಆರ್ ಟಿಯ ಬೂದಿಪಡಗದಲ್ಲಿ ಎರಡನೇ ಆನೆ ಕ್ಯಾಂಪ್ ನಿರ್ಮಿಸಿ ದುಬಾರೆ ಶಿಬಿರದಂತೆ ಪ್ರವಾಸಿಗರಿಗೆ ಅವಕಾಶ ಮಾಡಿಕೊಡುವ ಚಿಂತನೆ ನಡೆಸಿದೆ..

Read more Photos on
click me!

Recommended Stories