ತಾಳೆಯಾಗದ ಹೇಳಿಕೆಗಳು!
ಇನ್ನು ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣಕ್ಕೆ ಬಿಗ್ ಟ್ಬಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ಅಂತಿಮ ಹಂತಕ್ಕೆ ತಲುಪಿದೆ. ರಿಕ್ಕಿ ರೈ ಮೇಲೆಯೇ ಪೊಲೀಸರಿಗೆ ಅನುಮಾನ ಹೆಚ್ಚಾಗುತ್ತಿದೆ. ಮನೆ ಕೆಲಸದವರು, ಗನ್ ಮ್ಯಾನ್ ಗಳು, ಸೆಕ್ಯುರಿಟಿ, ಮ್ಯಾನೇಜರ್ ರಿಂದ ವಿಭಿನ್ನ ಹೇಳಿಕೆ ಹಿನ್ನೆಲೆ ಈ ಅನುಮಾನ ಮೂಡಿದೆ. ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಕ್ಕೂ ವಿಚಾರಣಾಧೀನರ ಹೇಳಿಕೆಗೂ ತಾಳೆಯಾಗದ ಹಿನ್ನೆಲೆ ತಮ್ಮದೇ ಆಯಾಮದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.