Published : May 16, 2021, 03:10 PM ISTUpdated : May 16, 2021, 03:15 PM IST
ಬೆಂಗಳೂರು(ಮೇ.16): ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸದಿಂದ ಸಕಾಲದಲ್ಲಿ ಆಕ್ಸಿಜನ್ ಸಿಗದೆ ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಕೋವಿಡ್ ರೋಗಿಗಳು ಬಲಿಯಾಗಿದ್ದಾರೆ. ಹೀಗಾಗಿ ಭಾರತದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಇಟಲಿ ದೇಶದಿಂದ ಆಕ್ಸಿಜನ್ ಉತ್ಪಾದನೆಯ ಕಚ್ಚಾವಸ್ತುಗಳನ್ನ ಆಮದು ಮಾಡಿಕೊಂಡಿದೆ. ಇಂದು ದೇವನಹಳ್ಳಿ ಬಳಿ ಇರುವ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಿಯೋಲೈಟ್ ಮೆಟೀರಿಯಲ್ಸ್ ಕಚ್ಚಾವಸ್ತುಗಳು ಬಂದಿಳಿದಿವೆ.