Constitution: ಅಂಬೇಡ್ಕರ್‌ಗೆ ಪ್ರಧಾನಿ ಮೋದಿ ನೈಜ ಗೌರವ: ಸಚಿವ ಕಾರಜೋಳ

First Published | Nov 27, 2021, 7:58 AM IST

ಬೆಂಗಳೂರು(ನ.27):  ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌(Dr BR Ambedkar) ಅವರಿಗೆ ಸೇರಿದ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನೈಜ ಗೌರವ ಸಲ್ಲಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಅಭಿಪ್ರಾಯಪಟ್ಟಿದ್ದಾರೆ.
 

ಮಲ್ಲೇಶ್ವರದ ಬಿಜೆಪಿ(BJP) ಕಚೇರಿಯಲ್ಲಿ ಶುಕ್ರವಾರ ರಾಜ್ಯ ಎಸ್‌ಸಿ ಮೋರ್ಚಾ ವತಿಯಿಂದ ನಡೆದ ಸಂವಿಧಾನ(Constitution) ಗೌರವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಉದ್ದಗಲಕ್ಕೆ ಡಾ. ಅಂಬೇಡ್ಕರ್‌ ಅವರ ಸಂವಿಧಾನ ಸಮರ್ಪಣೆ ದಿನಾಚರಣೆ ನಡೆಸಲಾಗಿದೆ. ಅವರ ಅತ್ಯಮೂಲ್ಯ ಕಾರ್ಯವನ್ನು ನೆನಪಿಸಿಕೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಡಾ. ಅಂಬೇಡ್ಕರ್‌ ಅವರು ಹುಟ್ಟಿಬೆಳೆದ ಮನೆ, ನೆಲೆಸಿದ್ದ ನಿವಾಸ, ಅವರ ಕಾರ್ಯಾಲಯ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶದಲ್ಲಿ ವಾಸವಿದ್ದ ಮನೆಯನ್ನೂ ಖರೀದಿಸಿ ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೇ, ಸಮಾಧಿ ಸ್ಥಳವನ್ನೂ ಸಹ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ ಕಾರಜೋಳ
 

ಅಸ್ಪೃಶ್ಯತೆ(Untouchability) ದೂರವಾಗಬೇಕು, ದೀನದಲಿತರ(Dalit) ಕಲ್ಯಾಣವಾಗಬೇಕು ಎಂಬ ಆಶಯ ಅಂಬೇಡ್ಕರ್‌ ಅವರದಾಗಿತ್ತು. ದೀನದಲಿತರು ಸ್ವಾವಲಂಬಿ ಆಗಬೇಕೆಂಬ ಚಿಂತನೆ ಇತ್ತು. ಇದಕ್ಕಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಕರೆ ನೀಡಿದ್ದರು. ದೀನದಲಿತರು ವಿದ್ಯಾವಂತರಾಗುತ್ತಿದ್ದಂತೆ ಕಾಂಗ್ರೆಸ್‌ನಿಂದ ದೂರವಾಗುತ್ತಿದ್ದಾರೆ. ದೇಶದಲ್ಲಿ ಶೇ.90ರಷ್ಟು ಕಾಂಗ್ರೆಸ್‌(Congress) ಮುಕ್ತವಾಗಿದೆ. ಇನ್ನು, ಶೇ.10ರಷ್ಟು ಮಾತ್ರ ಉಳಿದಿದೆ. ಸ್ವಾತಂತ್ರ್ಯ(Freedom) ಬಂದ ಬಳಿಕ ಕಾಂಗ್ರೆಸ್‌ ಪಕ್ಷದ ಅಗತ್ಯ ಇಲ್ಲ ಎಂದು ಸ್ವತಃ ಮಹಾತ್ಮ ಗಾಂಧಿಯವರು ತಮ್ಮ ಪತ್ರಿಕೆಯಲ್ಲಿ ಅಭಿಪ್ರಾಯಪಟ್ಟಿದ್ದರು. ಆ ಪಕ್ಷ ವಿಸರ್ಜನೆಗೆ ಸಲಹೆ ನೀಡಿದ್ದರು. ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ರಚಿಸಿದ ಸಂಘಟನೆಯಲ್ಲಿ ಕಳ್ಳಕಾಕರು ಸೇರಿ ಸಂಘಟನೆ ಹೆಸರು ಕೆಡದಿರಲಿ ಎಂದಿದ್ದರು ಎಂದ ತಿಳಿಸಿದ ಸಚಿವ ಕಾರಜೋಳ

Tap to resize

ಇನ್ನು ಮುಂದೆ ಕಾಂಗ್ರೆಸ್‌ನ ಮೋಸದಾಟ ನಡೆಯದು. ದೀನದಲಿತರು ಕಾಂಗ್ರೆಸ್‌ನ ಒತ್ತೆಯಾಳುಗಳೆಂದು ತಿಳಿದುಕೊಂಡಿದ್ದಾರೆ. ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಗುಲಾಮರೆಂದು ಭಾವಿಸಿದ್ದಾರೆ. ಆ ಕಾಲ ಹೋಗಿದೆ. ಜಾತಿ-ಜಾತಿಯ ಮಧ್ಯೆ ಮತ್ತು ಧರ್ಮಗಳ ನಡುವೆ ವೈಷಮ್ಯ ಹುಟ್ಟಿಸುವ ಕಾರ್ಯವನ್ನು ಕಾಂಗ್ರೆಸ್‌ನವರು ಮಾಡಿದರು. ಕಾಂಗ್ರೆಸ್‌ ಈಗ ಹತಾಶೆಗೊಳಗಾಗಿದೆ. ಹೊಟ್ಟೆಪಾಡಿಗಾಗಿ ಬಿಜೆಪಿ ಗುಳೆ ಹೋದವರು ಎಂದು ಹೇಳಿರುವುದು ದೀನದಲಿತರಿಗೆ ಮಾಡಿದ ಅವಮಾನ ಎಂದು ಟೀಕಾಪ್ರಹಾರ ನಡೆಸಿದ ಸಚಿವರು

ಸಂಸದ ಎಸ್‌.ಮುನಿಸ್ವಾಮಿ, ಶಾಸಕ ಪಿ.ರಾಜೀವ್‌, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ಎಸ್‌ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

Latest Videos

click me!