ಹುಬ್ಬಳ್ಳಿಯಲ್ಲಿ ಮೋದಿ ಸುನಾಮಿ, ಭರ್ಜರಿ ರೋಡ್‌ ಶೋ!

First Published | Jan 12, 2023, 3:58 PM IST

26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆಗಾಗಿ ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಅಂದಾಜು 8 ಕಿಲೋಮೀಟರ್‌ ದೂರ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ನಡೆಸಿದ್ದಾರೆ.
 

26ನೇ ಯುವಜನೋತ್ಸವ ಉದ್ಘಾಟನೆಗಾಗಿ ಅವಳಿ ನಗರಿ ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಜನರಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿಯುವಜನೋತ್ಸವ ಕಾರ್ಯಕ್ರಮ ನಡೆಯುತ್ತಿದೆ.
 

ಮಧ್ಯಾಹ್ನ 3.30ರ ಸುಮಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿಮಾನನಿಲ್ದಾಣದಲ್ಲಿ ಬರಮಾಡಿಕೊಂಡರು.

Tap to resize

ಜನರನ್ನು ಕಂಡು ಉಲ್ಲಸಿತರಾದಂತೆ ಕಂಡು ಬಂದಿದ್ದ ಪ್ರಧಾನಿ ಮೋದಿ, ಏರ್‌ಪೋರ್ಟ್‌ ರಸ್ತೆಯಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ಭರ್ಜರಿ ರೋಡ್‌ ಶೋ ನಡೆಸಿದರು

ತಮ್ಮ ಎಂದಿನ ಸ್ಟೈಲ್‌ನಲ್ಲಿದ್ದ ಪ್ರಧಾನಿ ಮೋದಿ, ಕಾರ್‌ ಏರ್‌ಪೋರ್ಟ್‌ ಆವರಣದ ಹೊರಗೆ ಬಂದ ಬೆನ್ನಲ್ಲಿಯೇ, ಕಾರ್‌ನಿಂದ ಇಳಿದು ನೆರೆದಿದ್ದ ಜನರತ್ತ ಕೈಬೀಸಿದರು.

ಮೋದಿ ಕಾರಿನ ಡೋರ್‌ ಭಾಗದಲ್ಲಿ ನಿಂತು ಜನಸಾಗರದತ್ತ ಕೈಬೀಸುತ್ತಿದ್ದ ವೇಳೆ ಜನ ಕೂಡ, ಅವರ ಮೇಲೆ ಹೂಮಳೆ ಸುರಿದು ಸ್ವಾಗತ ನೀಡಿದರು.

ಏರ್‌ಪೋರ್ಟ್‌ನಿಂದ ಹೊರಬಂದ ಬೆನ್ನಲ್ಲಿಯೇ ಕಾರಿನಿಂದ ಇಳಿದು ನೆರೆದಿದ್ದ ಜನರತ್ತ ನರೇಂದ್ರ ಮೋದಿ ಕೈಬೀಸಿದರು.ಅಂದಾಜು 8 ಕಿಲೋಮೀಟರ್‌ ರೋಡ್‌ ಶೋಅನ್ನು ನಡೆಸಲಿದ್ದಾರೆ.

ಯುವಜನೋತ್ಸವಕ್ಕಾಗಿ ಧಾರವಾಡ ದೊಡ್ಡ ಮಟ್ಟದಲ್ಲಿ ಸಜ್ಜಾಗಿದೆ. ಸರ್ಕಾರಿ ಕಚೇರಿ ಹಾಗೂ ಸ್ಮಾರಕಗಳನ್ನು ಬೆಳಕಿನಿಂದ ಅಲಂಕರಿಸಲಾಗಿದೆ.

ಧಾರವಾಡ ಹಾಗೂ ಹುಬ್ಬಳ್ಳಿಯ ಪ್ರಮುಖ ರಸ್ತೆಗಳಿಗೆ ಬೆಳಕಿನ ಅಲಂಕಾರ ಮಾಡಲಾಗಿದ್ದು, ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸುವುದಾಗಿ ಜಿಲ್ಲಾಡಳಿತ ಹೇಳಿದೆ.

ನರೇಂದ್ರ ಮೋದಿ ಅವರ ರೋಡ್‌ ಶೋಗೆ ರಸ್ತೆಯ ಎರಡೂ ಬದಿಗಳಲ್ಲಿ ಜನಸಾಗರವೇ ನೆರೆದಿತ್ತು. ಮೋದಿ ಅವರ ಕಾರು ಮುಂದೆ ಸಾಗುತ್ತಿದ್ದಂತೆ ಜನ ಕೂಡ ಅವರ ಕಾರಿನ ಹಿಂದೆ ಓಡಿದ್ದಾರೆ.

Latest Videos

click me!