ಪ್ರಧಾನಿ ಸಾಮಾನ್ಯವಾಗಿ ಭದ್ರತಾ ದಳದ ಪ್ರೊಟೋಕಾಲ್ ಬಿಟ್ಟು ಹೊರಹೋಗುವುದು ಕಡಿಮೆ. ಆದರೆ, ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಎಲ್ಲಾ ಪ್ರೊಟೋಕಾಲ್‌ಅನ್ನು ಧಿಕ್ಕರಿಸಿ ಜನರೊಂದಿಗೆ ಬೆರೆತರು.
ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ಭಾರತ್ ಗೌರವ್ ಚಾಲನೆ ನೀಡಿದ ಬಳಿಕ, ಸಂಗೊಲ್ಳಿ ರಾಯಣ್ಣ ಸರ್ಕಲ್‌ನಲ್ಲಿ ನರೇಂದ್ರ ಮೋದಿ.
26
ಎಸ್‌ಪಿಜಿ ಪ್ರೋಟೋಕಾಲ್‌ಅನ್ನು ಧಿಕ್ಕರಿಸಿ ಪ್ರಧಾನಿ ಮೋದಿ ಜನರತ್ತ ಆಗಮಿಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ಕೂಡ ಸ್ವಲ್ಪ ಗಲಿಬಿಲಿಗೆ ಒಳಗಾದರು.
36
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಣ್ತುಂಬಿಕೊಳ್ಳಲು, ಬಿಜೆಪಿ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಕೇಸರಿ ಧ್ವಜವನ್ನು ಅವರು ಕೈಯಲ್ಲಿ ಹಿಡಿದುಕೊಂಡಿದ್ದರು.
46
ಬಿಜೆಪಿಯ ಧ್ವಜ ಹಿಡಿದು ನಿಂತಿದ್ದ ಕಾರ್ಯಕರ್ತರು ಹಾಗೂ ಜನರಿಗೆ ತಮ್ಮ ಕಾರಿನಿಂದಲೇ ಮೋದಿ ಕೈ ಬೀಸಿದರು. ಈ ವೇಳೆ ಎಸ್‌ಪಿಜಿ ಸಿಬ್ಬಂದಿ ಕೂಡ ಸಾಕಷ್ಟು ಎಚ್ಚರಿಕೆ ವಹಿಸಿದ್ದರು.
56
ಮೋದಿ ಕಂಡ ಕಡೆಯಲ್ಲೆಲ್ಲಾ ಜನರು ಮೋದಿ ಮೋದಿ ಎಂದು ಹರ್ಷೋದ್ಘಾರ ಮಾಡಿದರು. ಈ ವೇಳೆ ಪೊಲೀಸ್ ಇಲಾಖೆಗೆ ಜನರನ್ನು ನಿಯಂತ್ರಿಸುವುದೆ ಹರಸಾಹಸವಾಗಿತ್ತು.
66
ಮೆಜೆಸ್ಟಿಕ್‌ನ ಸುತ್ತಮುತ್ತ ಎರಡೂ ಕಡೆಯಲ್ಲಿ ನಿಂತಿದ್ದ ಜನರಿಗೆ ಕೈಬೀಸಿದರು. ಜನರನ್ನು ಕಂಡು ಸ್ವತಃ ನರೇಂದ್ರ ಮೋದಿ ಕೂಡ ಉತ್ಸಾಹಿತರಾಗಿದ್ದರು.