ವಿಧಾನಸೌಧ ಮುಂಭಾಗ ವಿಶೇಷವಾದ ಕೋಟಿ ಕಂಠ ಗೀತ ಗಾಯನ

Published : Oct 28, 2022, 04:11 PM IST

ಬೆಂಗಳೂರು (ಅ.28): ರಾಜ್ಯ ಸರ್ಕಾರದಿಂದ ಶುಕ್ರವಾರ ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಕೋಟಿ ಕಂಠ ಗೀತ ಗಾಯನ’ ಕಾರ್ಯಕ್ರಮದ ಅಂಗವಾಗಿ ವಿಧಾನಸೌಧ ಮುಂಭಾಗ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ಸಲುವಾಗಿ ಅ.28ರಂದು ಶುಕ್ರವಾರ ರಾಜ್ಯಾದ್ಯಂತ ಗೀತ ಗಾಯನ ಕಾರ್ಯಕ್ರಮ ನಡೆದಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಸುನೀಲ್ ಕುಮಾರ್ ಅವರು ಭಾಗವಹಿಸಿದರು. ಕನ್ನಡ ನಾಡು, ನುಡಿಯ ಶ್ರೇಷ್ಠತೆಯನ್ನು ಸಾರುವ ‘ನನ್ನ ನಾಡು-ನನ್ನ ಹಾಡು’ ಸಮೂಹ ಗೀತ ಗಾಯನ, ನಾಡಗೀತೆ, ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ಡಾ.ಡಿ.ಎಸ್‌. ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ’, ನಾಡೋಜ ಡಾ. ಚೆನ್ನವೀರ ಕಣವಿಯವರ ‘ವಿಶ್ವ ವಿನೂತನ ವಿದ್ಯಾಚೇತನ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಈ ಗೀತೆಗಳನ್ನು ಕೋಟಿ ಕಂಠದಲ್ಲಿ ಹಾಡಲಾಗಿದೆ. 

PREV
16
ವಿಧಾನಸೌಧ ಮುಂಭಾಗ ವಿಶೇಷವಾದ  ಕೋಟಿ ಕಂಠ ಗೀತ ಗಾಯನ

ವಿಧಾನಸೌಧ ಮೆಟ್ಟಿಲಿನಲ್ಲಿ ನಿಂತುಕೊಂಡು  ಕನ್ನಡ ನಾಡು, ನುಡಿಯ ಶ್ರೇಷ್ಠತೆಯನ್ನು ಸಾರುವ ಹಾಡನ್ನು ಹಾಡಿದ ಕೋಟಿ ಕಂಠಗಳು. 

26

ಕೋಟಿ ಕಂಠ ಗಾಯನದ ಈ ಅಮೃತ ಘಳಿಗೆಯಲ್ಲಿ ಭಾಗವಹಿಸಿ ಆರು ಕನ್ನಡ ಹಾಡುಗಳಿಗೆ ದನಿಯಾಗುವ ಮೂಲಕ ಕನ್ನಡ ಪ್ರೇಮ ಮೆರೆದ ವಿಶೇಷ ಮಹಿಳೆ.

36

ವಿಧಾನ ಸೌಧದ ಮೆಟ್ಟಿನಲ್ಲಿ ನಡೆದ ಈ ಅಮೋಘ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಸುನೀಲ್ ಕುಮಾರ್.

46

ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಚಿವ ಸುನಿಲ್  ಕುಮಾರ್ ಅವರಿಗೆ ಜೊತೆಯಾದ ವಿಧಾನ ಸೌಧ ಸಿಬ್ಬಂದಿ ಮತ್ತು ಇತರ ಸಚಿವಾಲಯದ ಅಧಿಕಾರಿಗಳು.

56

ಕೋಟಿ ಕಂಠ ಗಾಯನ ಕಾರ್ಯಕ್ರಮದ ವೇಳೆ ಕನ್ನಡ ಬಾವುಟ  ಹಿಡಿದು ಸುಂದರ ಘಳಿಯಲ್ಲಿ ಭಾಗಿಯಾದ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು. 

66

ಕೋಟಿ ಕಂಠ ಗಾಯನದ ಈ ಅಮೃತ ಘಳಿಗೆಯಲ್ಲಿ ಭಾಗವಹಿಸಿ ಆರು ಕನ್ನಡ ಹಾಡುಗಳಿಗೆ ದನಿಯಾಗುವ ಮೂಲಕ ಕನ್ನಡಕ್ಕಾಗಿ ನಾವೆಲ್ಲ ಒಂದು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿ ಹೇಳಿದ ಸಮಸ್ತ ಕನ್ನಡಿಗರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು ಎಂದ ಸಿಎಂ ಬೊಮ್ಮಾಯಿ.

Read more Photos on
click me!

Recommended Stories