ವರುಣನ ಆರ್ಭಟಕ್ಕೆ ಕಂಗಾಲಾದ ಕರುನಾಡು: ಎಲ್ಲೆಲ್ಲೂ ನೀರೇ ನೀರು..!
First Published | Jul 24, 2021, 12:59 PM ISTಬೆಂಗಳೂರು(ಜು.24): ಕೆಳದ ಕೆಲವು ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಭಾರೀ ಮಳೆಯಿಂದಾಗಿ ರಾಜ್ಯದ ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಸಾವಿವಾರು ಸಂಖ್ಯೆಯಲ್ಲಿ ಜನರು ಪಡಬಾರದ ಸಂಕಷ್ಟಗಳನ್ನ ಎದುರಿಸುವಂತಾಗಿದೆ. ಮಹಾರಾಷ್ಟ್ರ ಹಾಗೂ ರಾಜ್ಯದಲ್ಲೂ ಭಾರೀ ಮಳೆಯಾಗುತ್ತಿರವುದರಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹೊಲಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ. ಹೀಗಾಗಿ ಬೆಳೆದಿದ್ದ ಬೆಳೆಯೆಲ್ಲಾ ನೀರುಪಾಲಾಗಿದೆ. ಆದರೆ, ಇಂದು(ಶನಿವಾರ) ಬೆಳಿಗ್ಗೆಯಿಂದ ಕೊಂಚ ಮಟ್ಟಿಗೆ ವರುಣ ತಣ್ಣಗಾಗಿದ್ದಾನೆ ಎಂದು ತಿಳಿದು ಬಂದಿದೆ.